29/01/2026
IMG-20251026-WA0001

ಮೂಡಲಗಿ-26: ಮೂಡಲಗಿ ಹಾಗೂ ಗೋಕಾಕ ತಾಲೂಕಿನ, ಗ್ರಾಮೀಣ ಪ್ರದೇಶಗಳ ಜನರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಬಸ್‌ಗಾಗಿ ಕಾಯುವ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ಬಸ್‌ಗಾಗಿ ಎಲ್ಲಿ ಕಾಯಬೇಕು, ಎಲ್ಲಿ ಕೂಡಬೇಕು ಅದು ಅನಿಶ್ಚಿತವಾಗಿತ್ತು ಅದು ನನ್ನ ಗಮನಕ್ಕೆ ಬಂದ ಮೇಲೆ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 100 ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು ಅದರಲ್ಲಿ ಶೇ 50 ರಷ್ಟು ಪೂರ್ಣಗೊಂಡಿವೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

IMG 20251022 125735 - IMG 20251022 125735

ರವಿವಾರ ಅ-26 ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಹಾಗೂ ಹುಣಶ್ಯಾಳ ಪಿ.ಜಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯಾಧ್ಯಂತ ಎಲ್ಲಾ ಕಡೆ ಸಂಸದರ ಅನುದಾನವನ್ನು ಸಾಧ್ಯವಿದಷ್ಟು ಎಲ್ಲ ಕಡೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ನಾನು ಅನುದಾನವನ್ನು ನೀಡುತ್ತಿದ್ದು ಕೇವಲ ಸಂಸದರ ನಿಧಿ ಅಷ್ಟೇ ಅಲ್ಲದೇ ಬೇರೆ ಬೇರೆ ಇಲಾಖೆಗಳಿಂದ, ಬೇರೆ ಬೇರೆ ಸಂಸ್ಥೆಗಳಿAದ ವಿಶೇಷ ಅನುದಾನವನ್ನು ತಂದು ನನ್ನ ಸೇವಾಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ ಎಂದರು.
ಸAಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದ್ದು ಈ, ಪಿ.ಜಿl ಗ್ರಾಮದ ಮಂಜುಳಾ ಡಬ್ಬನ್ನವರ, ಬಾಳಪ್ಪ ನೇಸರಗಿ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ಶಂಕರಯ್ಯ ಗುಡಿ, ಗಂಗಪ್ಪ ಡಬ್ಬನ್ನವರ, ಹಣಮಂತ ಶೆಕ್ ಪಾಲ್ಗೊಂಡಿದ್ದರು.

 

 

 

error: Content is protected !!