23/12/2024
IMG-20240131-WA0038

ಬೆಂಗಳೂರು-31:ನಟ ಡಾಲಿ ಧನಂಜಯ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಹೇಮಂತ್ ರಾವ್ ಸೇರಿದಂತೆ ಚಿತ್ರರಂಗದ ಹಲವು ಸಾಧಕರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕನ್ನಡ ಚಿತ್ರರಂಗದ ಪ್ರಚಾರಕರ್ತ ದಿವಂಗತ ಡಿ.ವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಇತ್ತೀಚಿಗೆ ನಡೆಯಿತು
ನಿರ್ಮಾಪಕ ರಾಮು ಅವರಿಗೆ ಮರೋಣತ್ತರ ಪ್ರಶಸ್ತಿ ನೀಡಲಾಗಿದ್ದು, ಅವರ ಪತ್ನಿ ಮಾಲಾಶ್ರೀ ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಟ ಸುಂದರರಾಜ್, ಹಿರಿಯ ನಟಿ ದುಬೈ ಜಯಲಕ್ಷ್ಮಿ, ಸಂಗೀತ ನಿರ್ದೇಶಕ ಜೋಕೋಸ್ಪ, ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ, ಹಿರಿಯ ಪತ್ರಕರ್ತ ಬಿ.ಎನ್. ಸುಬ್ರಹ್ಮಣ್ಯ, ಬಿ.ಎಸ್.ಲಿಂಗದೇವರು ಹಾಗೂ ಶರಣು ಹುಲ್ಲೂರು ಅವರು ವಿವಿಧ ವಿಭಾಗಗಳಲ್ಲಿನ ಪ್ರಶಸ್ತಿಗೆ ಭಾಜನರಾದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ. ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಹಿರಿಯ ನಟ ಶಶಿಕುಮಾರ್, ತಾರಾ ಅನುರಾಧ, ಡಾ. ವಿಜಯಮ್ಮ, ಪೂರ್ಣಿಮ ರಾಮಕುಮಾರ್, ವಿನೋದ್ ಪ್ರಭಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

error: Content is protected !!