ಕೆಎಸ್‌ಆರ್‌ಟಿಸಿ 50ನೇ ವರ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಅಪರಾಧ & ಅಪಘಾತ ರಹಿತ ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಸ್ವಾಮಿ ಅವರು ಹುಕ್ಕೇರಿ ತಾಲೂಕಿನ ಶಿರಗಾಂವಿ ಗ್ರಾಮದ ಬಿಎಮ್ ಟಿಸಿ ಚಾಲಕರಾದ ಜೈಯಾನಂದ ಆರ್ . ಸೋಮ್ಮಣವರ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಿದರು.ಚಾಲನೆ ವೇಳೆ ಸಂಕಷ್ಟ ಎದುರಾದರೆ ಚಾಲಕರು ಜಾಗರೂಕತೆಯಿಂದ ಜವಾಬ್ಧಾರಿಯನ್ನು ನಿಭಾಯಿಸಿ ಬಸ್‌ನಲ್ಲಿರುವ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಾರೆ. ಇಂದು ಅಪಘಾತ, ಅಪರಾಧ ರಹಿತ ಬಸ್ ಚಾಲನೆ ಮಾಡಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ಇವರ ಸಾಧನೆ ಇತರೆ ನೌಕರರಿಗೆ ಮಾದರಿ ಆಗಲಿ ಹಿರಿಯ ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.