ಬೆಳಗಾವಿ-30: ದೇಶದಲ್ಲಿ ಸುಖಃ ಶಾಂತಿ ನೆಮ್ಮದಿ ನೆಲೆಸಬೇಕಾದರೆ ಸರ್ವಧರ್ಮಗಳು ಒಂದಾಗಿ ಬಾಳಿದರೆ ಬಾಳಬೇಕಿದೆ ಎಂದು ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಕರ್ನಾಟಕ ವೇದಿಕೆ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸಾಹಾರ್ದತಾ ಮಾನವ ಮಾನವ ಸರಾಪಳಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಏಳಿಗೆಗಾಗಿ ಶ್ರಮಿಸೋಣ , ಧರ್ಮದ ಬೇರ್ಪಡಿಸುದಲ್ಲ. ಈ ದೇಶ ಸಮಾನತೆ ಹೂದೊಟವಾಗಬೇಕು. ಸೌಹಾರ್ದದಿಂದ ಬೆಳೆದಾಗ ಬಾವಕ್ಯತೆಯನ್ನು ಉಳಿಯಲು ಸಾಧ್ಯ ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಮೌಲಾನಾ ಮುಸ್ತಾಕ್ ಅಹಮ್ಮದ್ ಅಶ್ರಪಿ ಮಾತನಾಡಿ, ನೋಟಿನಲ್ಲಿ ರಾಮನನ್ನು ಭಾವಚಿತ್ರ ಹಾಕಿ ಭಯ ಹುಟ್ಟಿಸುವ ಯತ್ನ ನಡೆಯುತ್ತಿದೆ. ಅದು, ಸರಿಯಲ್ಲ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಾಂಧಿಜೀಯವರ ಭಾವಚಿತ್ರ ಇದ್ದರೆ ಸೌಹಾರ್ದತೆಯ ನಾಡಾಗಲಿದೆ. ಧರ್ಮಗಳ ಒಲೈಕೆಗೆ ರಾಮನ ಹೆಸರು ಅಸ್ತ್ರ ಮಾಡಿಕೊಳ್ಳುವುದು ಅಪಹಾಸ್ಯ ಎಂದರು.
ಕ್ರೈಸ್ತ ಪಾದ್ರಿ ಡಾ. ಪಾಧರ್ ಮೆನಿನೊ ಗೋನ್ಸಾಲ್ವೀಸ್ ಮಾತನಾಡಿ, ಪ್ರಕೃತಿ ಸೌಂದರ್ಯದವನ್ನು ಪ್ರೀತಿಸುವ ಉತ್ತಮ ವ್ಯಕ್ತಿ ನಾವಾಗಬೇಕು ಹೊರತು, ಪ್ರಕೃತಿ ನೀಡಿರುವುದನ್ನು ಧರ್ಮಗಳಿಗೆ ಅಳವಡಿಸಿ ನಾಡಿನಲ್ಲಿ ಸೌಹಾರ್ದ ಹಾಳು ಮಾಡಬಾರದು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಾ ಗಾಂಧಿಜೀ ಸಮಾಜದ ಸುಧಾರಣೆ ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ದೇವರನ್ನು ಕಾಣುವ ಮೂಲಕ ಎಲ್ಲವನ್ನೂ ಪ್ರೀತಿಯಿಂದ ನೋಡಬೇಕು. ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸೌಹಾರ್ದ ಕಾಪಾಡಲು ಸಾಧ್ಯ, ಎಲ್ಲರಲ್ಲೂ ಭಾವೈಕ್ಯತೆಯಿಂದ ಬೆಳೆಯೋಣ ಎಂದರು.
ಕಾರ್ಮಿಕ ಜಿಲ್ಲಾ ಕಾರ್ಯದರ್ಶಿ,
ಜಿ ಎಮ್ ಜೈನೆಕರ್ ಮಾತನಾಡಿ,
ಧರ್ಮ ಒಡೆದು ಒಡೆಯು ಹುನ್ನಾರ ನಡೆಯುತ್ತಿದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿದರೆ ದೇವರ ಹೆಸರಿನಲ್ಲಿ ಧರ್ಮಗಳ ಅಸ್ತ್ರಗಳನ್ನು ಬಿಸುವ ಯತ್ನವನ್ನು ತಡೆಯಬಹುದು. ಸೌಹಾರ್ದ ವೇದಿಕೆಯಿಂದ ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ ಜಾಗೃತ ಕಾರ್ಯಕ್ರಮ ಆಯೋಜಿಸಲಾಗಿದೆ.
