ಚಾಮರಾಜನಗರ-27: ನಮ್ಮದೇಶದ ಗ್ರಂಥ ಸಂವಿಧಾನ ಅದನ್ನು ಪೂಜಿಸುವ ದಿನ ಇದಾಗಿದೆ, ನಮ್ಮ ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳನ್ನು ಬಿಂಬಿಸುವ ಮೆರವಣಿಗೆ ದೇಶಾಧ್ಯಂತ ನಡೆಯಲಿದೆ. ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರುದ್ರಮೂರ್ತಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ೧೯೫೦ರ ಜನವರಿ ೨೬ ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು. ಅಂದಿನಿಂದ ಗಣರಾಜ್ಯೋತ್ಸವನ್ನು ಆಚರಿಸುತ್ತಾ ಬರಲಾಗಿದ್ದು ಇದರ ಕೀರ್ತಿ ರಾಷ್ಟ್ರ ದ ನಾಯಕರಿಗೆ ಸಲ್ಲುತ್ತದೆ.ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಮಾದಯ್ಯ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇಶದ ಅಭಿವೃದ್ದಿಗೆ ಯುವಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳು ನಮ್ಮ ದೇಶ ಎನ್ನುವ ಮನೋಭಾವ ಬೆಳಸಿಕೊಳ್ಳಬೇಕು. ದೇಶಕ್ಕೆ ಹಲವಾರು ಮಹನೀಯರು ಪ್ರಾಣ ತ್ಯಾಗಮಾಡಿ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ, ಡಾ. ಬಿ.ಆರ್ ಅಂಬೇಡ್ಕರ್, ಮಹಾತ್ಮಗಾಂಧಿ, ಸುಭಾಷ್ ಚಂದ್ರಬೋಸ್, ಹಾಗೂ ಇನ್ನು ಹಲವಾರು ಮಹನೀಯರನ್ನು ನೆನೆಯಲೇ ಬೇಕು ಎಂದರು.
ಸಂಸ್ಥೆಯ ನಿರ್ದೇಶಕರಾದ ಮಹದೇವಯ್ಯ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನ ಜೊತೆಗೆ ಇತರ ಜ್ಞಾನ ಸಂಪಾದನೆಯನ್ನು ರೂಡಿಸಿಕೊಳ್ಳಬೇಕು. ಜ್ಞಾನದಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಎಂದರು.
ನಂತರಶಾಲಾ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀರಾಮಚಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ, ಶಿಕ್ಷಕರಾದ ಕುಮಾರ್, ದೈಹಿಕ ಶಿಕ್ಷಕರಾದ ರಂಗಸ್ವಾಮಿ, ಮಹದೇವಸ್ವಾಮಿ, ನಾಗರಾಜು, ಯಶ್‌ಪಾಲ್, ಮಹೇಶ್.ಎಸ್,ಪರಶಿವಮೂರ್ತಿ ಮಂಜುಳ ಉಪಸ್ಥಿತಿರಿದ್ದರು.