23/12/2024
IMG_20240127_225606

ಬೆಳಗಾವಿ: ಮನೆಯಲ್ಲಿ ಇಟ್ಟು ಪೂಜಿಸುವ ದೇವರ ಪೋಟೊಗಳು ವಿಘ್ನವಾದಾಗ ಜನರು ರಸ್ತೆ ಪಕ್ಕದಲ್ಲಿರುವ ಗಿಡ, ಮರಗಳ ಬುಡದಲ್ಲಿಡುವ ಫೋಟೋಗಳನ್ನು ವೀರೇಶ ಹಿರೇಮಠ ಅವರು ಅವುಗಳಿಗೆ ಶಾಸ್ತ್ರೋಪ್ತವಾಗಿ ವಿಧಿವಿಧಾನಗಳಿಂದ ವಿಸರ್ಜನೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಮೀಪದ ಹಿರೇಬಾಗೇವಾಡಿಯ ಬಡೇಕೊಳಮಠದ ಪರಿಸರದ ಗಿಡ, ಮರಗಳಲ್ಲಿ ಸೇವಾದಳದ ವತಿಯಿಂದ ದೇವರ ಫೋಟೋಗಳ ಸಂಗ್ರಹ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಅವರು, ದೇವರ ಫೋಟೋಗಳನ್ನು ಮನೆಗೆ ತಂದು ಅದಕ್ಕೆ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಅದೇ ಫೋಟೋ ವಿಘ್ನವಾದಾಗ ಅವುಗಳನ್ನು ಗಿಡ, ಮರದ ಕೆಳಗಡೆ ಇಡುತ್ತೇವೆ. ಇದು ನಿಜವಾದ ಭಕ್ತಿಯಲ್ಲ. ದೇವರ ಫೋಟೋಗಳಿಗೂ ವಿಧಿ ವಿಧಾನದ ಮೂಲಕ ವಿಸರ್ಜನೆ ಮಾಡಬೇಕು. ಆ ಕಾರ್ಯವನ್ನು ಸೇವಾದಳದ ವೀರೇಶ ಹಿರೇಮಠ ಅವರ ತಂಡ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವೀರೇಶ ಹಿರೇಮಠ ಅವರ ಕಾರ್ಯದ ಬಗ್ಗೆ ರಘುನಾಥ ಜಾಧವ ಅವರು ಮಾಹಿತಿ ನೀಡಿದಾಗ ಕೂಡಲೇ ಅವರನ್ನು ನಮ್ಮ ಬಡೇಕೊಳಮಠಕ್ಕೆ ಬರುವಂತೆ ತಿಳಿಸಿದೇವು. ನಮ್ಮ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಇಲ್ಲಿನ ದೇವರ ಫೋಟೋಗಳನ್ನು ತೆಗೆದುಕೊಂಡು ವಿಸರ್ಜಿಸುವ ಕಾರ್ಯ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಸೇವಾದಳದ ಸಂಸ್ಥಾಪಕ ಅಧ್ಯಕ್ಷ ವೀರೇಶ ಹಿರೇಮಠ ಮಾತನಾಡಿ, ಹಿಂದು ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವುದು ನಮ್ಮ ಸಂಸ್ಕೃತಿಯಲ್ಲ. ದೇವರ ಫೋಟೋಗಳಿಗೂ ಮನುಷ್ಯರಂತೆ ಜೀವ ಇರುತ್ತವೆ. ದೇವಸ್ಥಾನ ಅಥವಾ ಪುಣ್ಯಕ್ಷೇತ್ರದಿಂದ ತಂದು ಮನೆಯಲ್ಲಿ ಪೂಜೆ ಮಾಡಿದ ಬಳಿಕ ಅದು ವಿಘ್ನವಾದಾಗ ನಡು ರಸ್ತೆಯಲ್ಲಿಡುವುದು ಸರಿಯಲ್ಲ. ಫೋಟೋಗಳನ್ನು ವಿಧಿ ವಿಧಾನಗಳಿಂದ ವಿಸರ್ಜನೆ ಮಾಡಬೇಕು. ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸೇವಾದಳದ ಸಂಸ್ಥಾಪಕ, ಅಧ್ಯಕ್ಷ ವೀರೇಶ ಹಿರೇಮಠ ಅವರನ್ನು ಶ್ರೀ ಕ್ಷೇತ್ರ ಬಡೇಕೊಳಮಠದಿಂದ ನಾಗೇಂದ್ರ ಸ್ವಾಮೀಜಿ ಅವರು ಸತ್ಕರಿಸಿ ಗೌರವಿಸಿದರು.
ಕಲ್ಲಯ್ಯ ಹಿರೇಮಠ, ಸಾಗರ ಹಿರೇಮಠ, ದೇವಪ್ಪ ಕಾಂಬಳೆ ಸೇರಿದಂತೆ ಬಡೇಕೊಳಮಠದ ಭಕ್ತರು ಉಪಸ್ಥಿತರಿದ್ದರು.

error: Content is protected !!