23/12/2024
IMG-20240127-WA0111

ಚಾಮರಾಜನಗರ-_27: ಕ್ರೀಡೆಗಳಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಬೇಕು ಕ್ರೀಡೆಯು ಮನುಷ್ಯನಿಗೆ ಆರೋಗ್ಯವನ್ನು ನೀಡುತ್ತದೆ. ಕ್ರೀಡೆ ನಮ್ಮ ದೇಶದ ಸಂಪತ್ತು ಎಂದು ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ನಗರದ ರಾಮಸಮುದ್ರ ದೀನಬಂದು ಶಾಲೆಯ ಹಿಂಭಾಗದ ಆವರಣದಲ್ಲಿ ರಾಮಸಮುದ್ರದ ಕೆ.ಎಸ್.ಎಸ್.ಎಸ್ ಕ್ರಿಕೆಟ್ ತಂಡ ಆಯೋಜಿಸಿರುವ ಮಹರ್ಷಿ ವಾಲ್ಮೀಕಿ ಕಪ್ “ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರಲ್ಲಿ ಸ್ಪೂರ್ತಿ ತರುವ ಆಟವೆಂದರೆ ಕ್ರಿಕೆಟ್ ಪ್ರತಿಯೊಬ್ಬರು ಪ್ರೀತಿಸುವ ಆಟ ಇದ್ದಾಗಿದೆ. ಮೊದಲ ಬಾರಿಗೆ ರಾಮಸಮುದ್ರದ ಯುವಕ ತಂಡ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕ್ರೀಡೆಗಳಲ್ಲಿ ಸೋಲು, ಗೆಲುವು ಎರಡನ್ನು ಸಂತೋಷ ದಿಂದ ಸ್ವೀಕರಿಸಬೇಕು, ಕ್ರೀಡಾ ಮನೋಭಾವದಿಂದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ರಾಮಸಮುದ್ರ ವಾಲ್ಮೀಕಿ ಕ್ರಿಕೆಟ್ ತಂಡದ ಮುಖ್ಯಸ್ಥರಾದ ರಂಗಸ್ವಾಮಿ ಮಾತನಾಡಿ ಚಾಮರಾಜನಗರ ತಾಲ್ಲೂಕಿನ ಗ್ರಾಮಗಳಿಂದ ೨೪ ತಂಡಗಳು ಪಂದ್ಯಾವಳಿಗೆ ಬಂದಿರುವುದು ಸಂತೋಷವಾಗಿದೆ. ಯುವಕರಲ್ಲಿ ಕ್ರೀಡಾ ಶಕ್ತಿಯನ್ನು ಹೆಚ್ಚಿಸಲು ಮೊದಲ ಪ್ರಯತ್ನವಾಗಿದೆ, ಪ್ರತಿವರ್ಷವು ಗ್ರಾಮೀಣ ಹಾಗೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ತಂಡಗಳ ಜೊತೆ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖಂಡರಾದ ಗೋವಿಂದನಾಯಕ, ರಂಗಸ್ವಾಮಿನಾಯಕ, ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಕ್ಷೀತ್‌ಕುಮಾರ್ ಉಪಸ್ಥಿರಿದ್ದರು.
ಈ ಸಂದರ್ಭದಲ್ಲಿ ಕೆ.ಎಸ್.ಎಸ್.ಎಸ್ ಕ್ರಿಕೆಟ್ ತಂಡದ ರವಿ, ಮಹೇಶ್, ಪ್ರಜ್ವಲ್, ಮೂರ್ತಿ, ಚಂದ್ರು, ಪವನ ಹಾಜರಿದ್ದರು.

error: Content is protected !!