26 Nov 2026, 08:41:25 PM|
Gold₹12128/gGold24K ₹12,128/g - 22K ₹11,107/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Belagavi | Entertainment News

ಮೌಲ್ಯಗಳ ಭಂಡಾರ ಸ ರಾ ಸುಳಕೂಡೆಯವರ 'ಸರಳ ಶತಕ '

ಮೌಲ್ಯಗಳ ಭಂಡಾರ ಸ ರಾ ಸುಳಕೂಡೆಯವರ 'ಸರಳ ಶತಕ '

ಮನುಷ್ಯ ನಡವಳಿಕೆಗಳನ್ನು ತಿದ್ದುವ,  ಜಾತಿ ಮತಭೇದ ಮರೆತು ಪರಸ್ಪರರು ಸಹಕಾರ ಮನೋಭಾವದಿಂದ ಬದುಕುವಂತೆ ಪ್ರೇರೇಪಿಸುವ, ಬಾಳ ಹಾದಿಯ ಸರಿ - -ತಪ್ಪುಗಳನ್ನು ತಿಳಿಸಿ ಹೇಳುವ ನೈತಿಕ ಮೌಲ್ಯಗಳ  ಒಂದು ಒಟ್ಟು ಮೊತ್ತವೇ ಸ. ರಾ. ಸುಳಕೂಡೆಯವರ ' ಸರಳ ಶತಕ'.

ಬೇರೆ  ಬೇರೆ ಆಶಯಗಳನ್ನು ಹೊಂದಿರುವ 125 ಬಿಡಿ ಶತಕಗಳು ಈ ಕೃತಿಯಲ್ಲಿವೆ. ತಮ್ಮ ಜೀವನದ ವಿವಿಧ ಸನ್ನಿವೇಶಗಳಲ್ಲಿ  ಒದಗಿ ಬಂದಿರುವ, ಮತ್ತು ತನ್ನ ಸುತ್ತ ಮುತ್ತಲಿನ ಜಗತ್ತು ಮೊಗೆ ಮೊಗೆದು ಕೊಟ್ಟಿರುವ, ಅನುಭವದ ಸಾರಗಳನ್ನು ಈ ಕೃತಿಯಲ್ಲಿ ಕೃತಿಕಾರರು ಮನ ಮುಟ್ಟುವಂತೆ ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ. ಮಾನವ ಜಗತ್ತಿಗೆ ಸೂಕ್ತವಲ್ಲ ಎಂದೆನಿಸಿದ ಮನುಷ್ಯನ ಕೆಲವು ಚಟುವಟಿಕೆಗಳ, ಸಮಾಜದ ಕೆಲ ಓರೆ -ಕೋರೆಗಳ ಬಗ್ಗೆ ಹೇಳುತ್ತಾ, 'ತಪ್ಪು ಮಾನವ ಸಹಜ, ತಿದ್ದಿ ನಡೆದವ ಮನುಜ' ಎನ್ನುವ ಅಂಶವನ್ನು ಅಲ್ಲಲ್ಲಿ ಮನದಟ್ಟುಮಾಡಿದ್ದಾರೆ. ಹಾಗೆಂದು ತನ್ನ ನಿಲುವನ್ನು ಯಾರ ಮೇಲೂ ಅವರು ಹೇರಿಲ್ಲ. ಕವಿಯ ಭಾವವನ್ನು ಸ್ವೀಕರಿಸಬಹುದು, ಅಥವಾ ಬಿಡಬಹುದು. ಅದು ಓದುವ ಮನಸಿಗೆ ಬಿಟ್ಟದ್ದು.

ನಮ್ಮ ಸುತ್ತ ಮುತ್ತಲಿನ ಜಗತ್ತು ಪೂರ್ತಿ ಮೌಲ್ಯಗಳಿಂದ ತುಂಬಿರದಿದ್ದರೂ , ಸಂಪೂರ್ಣವಾಗಿ ಮೌಲ್ಯಗಳಿಂದ ದೂರವಾಗಿಲ್ಲ, ದಯೆ, ಕರುಣೆ, ತಾಳ್ಮೆ ಸಹನೆ ಮನುಕುಲದಲ್ಲಿ ಜೀವಂತವಾಗಿದೆ ಎನ್ನುವುದನ್ನು ಕೆಲವು ಉದಾಹರಣೆಗಳ ಮೂಲಕ  ಕವಿ ವಿವರಿಸಿದ್ದಾರೆ. ಎಲ್ಲವೂ ಮುಗಿದೇ ಹೋಯಿತು, ನಾಗರಿಕ ಜಗತ್ತೇ ಅಧೋಗತಿಗಿಳಿಯಿತು ಎಂಬ ನಿರಾಶಾಭಾವ ಎಂದಿಗೂ ಖಂಡಿತ ಸಲ್ಲದು ಎಂದು ಹೇಳುವ ಕೃತಿಕಾರರು ಓದುಗರಲ್ಲಿ ಒಂದು ಆಶಾಭಾವವನ್ನು ಅರಳಿಸು ಪ್ರಯತ್ನ ಮಾಡಿದ್ದಾರೆ.  ಕೃತಕ ಬುದ್ಧಿಮತ್ತೆಗೂ ನಿಲುಕದ ಎಷ್ಟೋ ಅಂಶಗಳು ಈ ಜಗತ್ತಿನಲ್ಲಿವೆ ಎನ್ನುತ್ತಾ ಜಗದ ವೈವಿದ್ಯದ ಬಗ್ಗೆ ಕವಿ ತೋರುವ ಕುತೂಹಲ, ಆ ವಿವಿಧತೆಗೆ ತಲೆ ಬಾಗಿ ಬಾಳಬೇಕು ಎನ್ನುವ ಅವರ ಹಂಬಲ.. ಇವೆಲ್ಲ ನಮ್ಮೊಳಗೂ ಒಂದು ಚಿಂತನೆ ಮೂಡಿಸುತ್ತದೆ. 

 'Time and tide waits for none ' ಎನ್ನುವ ಆಂಗ್ಲ ಮಾತಿನಂತೆ ತಮ್ಮ 31 ನೇ ಪದ್ಯದಲ್ಲಿ ಯಾರು ಯಾವ ಸಾಧನೆಗಳನ್ನಾದರೂ ಮಾಡಿ ಸೈ ಎನಿಸಿಕೊಳ್ಳಬಹುದು, ಆದರೆ ಕಳೆದು ಹೋದ ಸಮಯವನ್ನು ಮರಳಿ ತರಬಲ್ಲ ಸಾಹಸಿಗಳು ಯಾರೂ ಈ ಜಗದಲ್ಲಿಲ್ಲಎನ್ನುತ್ತಾ  ಸಮಯದ ಮಹತ್ವದ ಬಗ್ಗೆ ನಮ್ಮ ಕಣ್ತೆರೆಸುತ್ತಾರೆ.  'ಸತ್ಯಮೇವ ಜಯತೇ ' ಎನ್ನುವ ಮಾತಿಗೆ ಇಂಬು ಕೊಡುವಂತೆ '  ಬಣ್ಣದ ಮಾತುಗಳನ್ನಾಡಿ ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ, ಅಂಥ ಕೆಲಸ ಮಾಡುವವನನ್ನು ಯಾರೂ ನಂಬಬೇಡಿ ಎನ್ನುವ ಕಿವಿಮಾತನ್ನೂ ಕೃತಿಕಾರರು ಹೇಳಿದ್ದಾರೆ. " ತನ್ನದೆನ್ನುವುದೆಲ್ಲವೂ ಆತನದು " ಎಂಬ ಕವಿಯ ವಾಕ್ಯವನ್ನು ನೋಡಿದಾಗ  " ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ..... " ಎನ್ನುವ ವಚನದ ಸಾಲುಗಳು ಹಾಗೇ ನೆನಪಿಗೆ ಬರುತ್ತವೆ. 

 ಮಾತೃಭಾಷೆ,ಮಾತೃಭೂಮಿ, ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಗಮನ ಸೆಳೆಯುವ ಕೃತಿಕಾರರು ಗಗನಕ್ಕೆ ಏರುತ್ತಿರುವ ವೈದ್ಯಕೀಯ ವೆಚ್ಚದ ಬಗ್ಗೆಯೂ ತಮ್ಮ ಪದ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ. ಬೆಲೆ ಏರಿಕೆಯ ಬಗೆಗಿನ ಅವರ  ಕಳವಳವನ್ನು ಇಲ್ಲಿ ಗಮನಿಸಬಹುದು. ಹಾಗೇ ರಾಷ್ಟ್ರದ ಬೆನ್ನೆಲುಬಾದ ನೇಗಿಲ ಯೋಗಿಯ ಬವಣೆಯನ್ನು ಹೇಳುವುದನ್ನು ಕೂಡಾ ಅವರು ಮರೆತಿಲ್ಲ.ರಿಯಾಯಿತಿಯ ಹುಚ್ಚಿಗೆ ಬಿದ್ದು ಅನಗತ್ಯ ವಸ್ತುಗಳನ್ನು ಕೊಂಡರೆ ಜೇಬು ಖಾಲಿಯಾಗುವುದೇ ಹೊರತು ಪಡೆಯುವುದೇನೂ ಇಲ್ಲ ಎನ್ನುವುದನ್ನು ಹಾಸ್ಯಾಸ್ಪದವಾಗಿ ಹೇಳಿದರೂ 'ಒಂದು ಕೊಂಡರೆ ಇನ್ನೊಂದು  ಉಚಿತ ' ಎನ್ನುವ ಕರೆಗೆ ಓಗೊಟ್ಟು ಓಡುವ ಮನುಜರ ಓಟ ಸರಿಯಲ್ಲ ಎನ್ನುವ ತಿಳುವಳಿಕೆ ಅಲ್ಲಿದೆ. 

 ಈ ಸ್ಪರ್ಧಾ ಜಗತ್ತಿನಲ್ಲಿ ಮಾನವೀಯತೆ  ಕಣ್ಮರೆಯಾಗುತ್ತಾ ಬರುವುದನ್ನು ಗಮನಿಸಿದ ಕೃತಿಕಾರರು 'ಮರೆಯಾಗದಿರಲಿ ಮಾನವೀಯತೆ 'ಎಂದು ಓದುಗರಲ್ಲಿ ಮನವಿ ಮಾಡಿದ್ದಾರೆ . ನಾವು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರೂ,  ಯಾವ ಒಳ್ಳೆಯತನ ನಮ್ಮಲ್ಲಿದ್ದರೂ ಜನಾಪವಾದದಿಂದ ಮುಕ್ತರಾಗುವುದಿಲ್ಲ ಎನ್ನುವ ಕವಿಯ ಸಾಲುಗಳನ್ನು ಓದಿದಾಗ " ಹರನೇ ನಿನ್ನನ್ನು ಮೆಚ್ಚಿಸಬಹುದು ನರನನು ಮೆಚ್ಚಿಸಲು ಬಲು ಕಷ್ಟ " ಎಂಬ ಗೀತೆಯ ಸಾಲು ನೆನಪಾಯಿತು!!  

 ವಿಜ್ಞಾನ ತಂತ್ರಜ್ಞಾನಗಳು ಹೆಚ್ಚುತ್ತಾ ಹೋದಂತೆ  ಅಪರಾಧಗಳು ಕೂಡಾ ಹೆಚ್ಚುತ್ತಲೇ ಇವೆ,  ಆಸೆಗಳಿಗೆ ಬಲಿಯಾಗಿ ಆದರ್ಶವನ್ನು ಮರೆಯಬಾರದು, ಭ್ರಷ್ಟಾಚಾರದತ್ತ ಸರಿಯಬಾರದು, ಏನೇ ಆದರೂ ಮೊದಲು ಮಾನವನಾಗು  ಎನ್ನುವ ಕವಿಯ ಚಿಂತನೆ  ಆರೋಗ್ಯಕರ ಸಮಾಜದ ಬಗೆಗಿನ ಅವರ ಕಾಳಜಿಗೆ ಹಿಡಿದ ಕೈಗನ್ನಡಿ ಎನ್ನಬಹುದು.

116 ನೇ ಪದ್ಯದ "ಮಾತು
 ಕೃತಿಯೊಳಗೆ ಭೇದವಿರದಿರಲಿ "ಎನ್ನುವ ಸಾಲು "ನುಡಿದಂತೆ ನಡೆ " ಎನ್ನುವ ಬಸವಣ್ಣನವರ ನೀತಿಯನ್ನು ಸಾರುವಂತಿದೆ. ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಾಗಲಷ್ಟೇ ಮನುಜನ ಸರ್ವತೋಮುಖ ಏಳಿಗೆ ಸಾಧ್ಯ ಎನ್ನುವ ಕವಿಯ ಹೇಳಿಕೆ  ಸರ್ವ ಸಮ್ಮತವಾದದ್ದೇ ಆಗಿದೆ. ಒಟ್ಟಿನಲ್ಲಿ ಮಾನವ ಬದುಕಿನ ಎಲ್ಲಾ ಅಂಶಗಳನ್ನು ಒಳಗೊಂಡಂತೆ  ರಚಿತಗೊಂಡ 'ಸರಳ ಶತಕ ' ವಿವಿಧ ದೃಷ್ಟಿಕೋನಗಳಿಂದ ಮಾನವ ಬದುಕನ್ನು ಗಮನಿಸಿದ ಕವಿಯ ಅನುಭವದ ಸಾರವೂ ಹೌದು, ಜೀವನಕ್ಕೆ ಸನ್ಮಾರ್ಗವನ್ನು ತೋರುವ ಮೌಲ್ಯಗಳ ಬೆಳಕೂ ಹೌದು. ಪ್ರತಿಪದ್ಯಕ್ಕೂ ವಿವರಣೆಯನ್ನು ನೀಡಿದ ಕೃತಿಕಾರರು ಅವರ ಚಿಂತನೆಗಳ ಬಗ್ಗೆ ಓದುಗರೂ ಯೋಚಿಸುವಂತಹ ವಿಚಾರಧಾರೆಗಳನ್ನು ಹರಿಸಿದ್ದಾರೆ. ಪದ್ಯಗಳಲ್ಲಿ ಉಪಮೆಗಳನ್ನು ಬಳಸಿದ್ದಿದ್ದರೆ ಕೃತಿಯ ಮೌಲ್ಯ ಇನ್ನೂ ಹೆಚ್ಚುತ್ತಿತ್ತು ಎಂದೆನಿಸುತ್ತದೆ. ಒಂದೆರಡು ಚಿಂತನೆಗಳು   ಪುನರಾವರ್ತನೆಯಾದರೂ ಅಲ್ಲೊಂದು ಹೊಸತನವಿದೆ. ಒಟ್ಟಿನಲ್ಲಿ ಒಂದು ವಿಶಿಷ್ಟ ಪ್ರಕಾರದಲ್ಲಿ ಸ ರಾ ಸುಳಕೂಡೆಯವರ " ಸರಳ ಶತಕ " ಮೂಡಿ ಬಂದಿದ್ದು  ಇದೊಂದು ಮಾನವೀಯ ಮೌಲ್ಯಗಳ ಭಂಡಾರವಾಗಿದೆ.ಲೇಖಕರಿಂದ ಇನ್ನಷ್ಟು ಮೌಲ್ಯ ಆಧಾರಿತ ಕೃತಿಗಳು ಮೂಡಿ ಬಂದು ಕನ್ನಡ ಸರಸ್ವತ ಲೋಕದ ಸಿರಿವಂತಿಕೆಯನ್ನು ಹೆಚ್ಚಿಸಲಿ ಎಂದು ಆಶೀಸೋಣ.


                               (ಜಯಲಕ್ಷ್ಮಿ ಕೆ.ಮಡಿಕೇರಿ)

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೌಲ್ಯಗಳ ಭಂಡಾರ ಸ ರಾ ಸುಳಕೂಡೆಯವರ 'ಸರಳ ಶತಕ 'ವಿದ್ಯಾರ್ಥಿಗಳ ಮೂರು ಪುಸ್ತಕ ಬಿಡುಗಡೆ ಬೆಳಗಾವಿಯಲ್ಲಿ ನಾಳೆ ‘ಸಂವಿಧಾನ ಸಮರ್ಪಣಾ ದಿನ’; ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮಗಿಟಾರ್ ನುಡಿಸಿ ಹಾಡು ಹಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್; ಉದ್ಯಮಿಗಳ ಮನಗೆದ್ದ ಆತ್ಮೀಯ ಮಾತುಗಳು!ನೂತನ ಸಮುದಾಯ ಭವನವನ್ನು ಉದ್ಘಾಟನೆ ಕರ್ನಾಟಕ ಸರ್ಕಾರದ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ನೇಮಕಗೊಂಡಿರುವ ಮಲ್ಲೇಶ ಚೌಗುಲೆ ಅವರಿಗೆ ಸನ್ಮಾನ ಡಿ.3ರಂದು ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ: ಬಾಲಚಂದ್ರ ಜಾರಕಿಹೊಳಿ.‌ಅಖಿಲ ಭಾರತ ಕವಯಿತ್ರಿಯರ ತಾ.25, 26 ರಂದು ಸಮ್ಮೇಳನ ಶ್ರೀ ಪಂತ ಸಮರ್ಥ ನರಸಿಂಹ ದೇವಾಲಯಕ್ಕೆ ನಾಳೆ ಶತಮಾನೋತ್ಸವ ಸಂಭ್ರಮ.ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ : ಆಯುಕ್ತ ಕಾರ್ತಿಕ್ ಎಂ