19 Nov 2026, 12:19:04 AM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Belagavi | Politics News

ಅನುಮತಿ ಇಲ್ಲದಿದ್ದರೂ ಮಹಾಮೇಳಾವ ನಡೆಸಲು ಎಂಇಎಸ್ ಪಟ್ಟು

ಡಿಸೆಂಬರ್ ಮೊದಲ ವಾರದಲ್ಲಿ ಮುಂದಿನ ನಡೆ ಪ್ರಕಟ; 50 ಕಾರ್ಯಕರ್ತರು ಬಂಧನಕ್ಕೆ ಸಿದ್ಧರಾಗುವಂತೆ ಮುಖಂಡರ ಕರೆ

ಬೆಳಗಾವಿ-18: ಗಡಿ ವಿವಾದದ ಹೋರಾಟಕ್ಕೆ ಹೊಸ ಚೈತನ್ಯ ತುಂಬುವ ಹಾಗೂ ಮರಾಠಿ ಭಾಷಿಕರ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ಬಾರಿಯೂ ಚಳಿಗಾಲದ ಅಧಿವೇಶನದಲ್ಲಿ ಮಹಾಮೇಳಾವ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿರ್ಧರಿಸಿದೆ. ಜಿಲ್ಲಾಡಳಿತದಿಂದ ಅನುಮತಿ ದೊರೆಯದಿದ್ದರೂ ಮಹಾಮೇಳಾವ ಆಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಎಂಇಎಸ್ ಮುಖಂಡರು 
ಸ್ಪಷ್ಟಪಡಿಸಿದ್ದಾರೆ. 

ಬೆಳಗಾವಿ ನಗರದಲ್ಲಿ ನಡೆದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ಮಹಾಮೇಳಾವ ಆಯೋಜನೆ, ಗಡಿ ವಿವಾದದ ಕಾನೂನು ಹೋರಾಟ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಯಾವ ರೀತಿ ಚಳಿಗಾಲದ ಅಧಿವೇಶನದ ವೇಳೆ ಮಹಾಮೇಳಾವ ಮೂಲಕ ಹೋರಾಟ ಮಾಡಬೇಕೆಂದು  ಈಗಾಗಲೇ ಎಂಇಎಸ್ ಮುಖಂಡರು ಪ್ಲಾನ್ ಮಾಡಿಕೊಂಡಿದ್ದಾರೆ. 

ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಎಂಇಎಸ್  ಸಮಿತಿ ಅಧ್ಯಕ್ಷ ಪ್ರಕಾಶ ಮರಗಾಳೆ, ಗಡಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದ ಬೆಳವಣಿಗೆಗಳು ಹಾಗೂ ಮುಂದಿನ ತಿಂಗಳ ಮೊದಲ ವಾರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ನಡೆಯಲಿರುವ ಸಭೆಯ ಕುರಿತು ಮಾಹಿತಿ ನೀಡಿದರು. ಗಡಿ ಹೋರಾಟದ ವಿಚಾರದಲ್ಲಿ ಮಹಾರಾಷ್ಟ್ರದ ಕೆಲವು ನಾಯಕರ ನಿರಾಸಕ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ನವೆಂಬರ್ ೧ ರಂದು  ಯುವಕರು ನಡೆಸಿದ  ರ‌್ಯಾಲಿ  ಸಮಿತಿಗೆ ಹೊಸ ಹುರುಪು ನೀಡಿದೆ ಮಹಾಮೇಳಾವಕ್ಕೆ ಇನ್ನಷ್ಟು ಉತ್ತೇಜನ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
ಮಾಜಿ ಮೇಯರ್ ಹಾಗೂ ತಾಲೂಕು ಎಂಇಎಸ್ ಅಧ್ಯಕ್ಷ ಮನೋಹರ ಕಿಣೇಕರ ಮಾತನಾಡಿ, ಮಹಾಮೇಳಾವ ಆಯೋಜನೆಗಾಗಿ ಐದರಿಂದ ಆರು ಜನರ ವಿಶೇಷ ಸಮಿತಿ ರಚಿಸುವಂತೆ ಸಲಹೆ ನೀಡಿದರು. ಆಡಳಿತ ಮಂಡಳಿ ಅನುಮತಿ ನಿರಾಕರಿಸಿದಲ್ಲಿ ಗನಿಮಿಕಾವಾ ತಂತ್ರದ ಮೂಲಕ ಹೋರಾಟ ರೂಪಿಸುವ ಕುರಿತು ಚರ್ಚಿಸಿದರು. ಅಲ್ಲದೆ, ಕನಿಷ್ಠ 50 ಕಾರ್ಯಕರ್ತರು ಬಂಧನಕ್ಕೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಬಂಧನಕ್ಕೊಳಗಾಗುವ ಕಾರ್ಯಕರ್ತರ ಬೆಂಬಲಕ್ಕೆ ಸಮಿತಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಡಿಸೆಂಬರ್ 1ರಂದು ಸಂಜೆ ಮುಂದಿನ ಹೋರಾಟಕ್ಕೆ‌ ಯಾವ ರೀತಿ ರೂಪರೋಷಗಳನ್ನು ಸಿದ್ದಪಡಿಸಿಕೊಂಡು ತಿಳಿಸಲಾಗುವುದು ಎಂದರು. 

ಇದೇ ವೇಳೆ ಮತ್ತೋರ್ವ ಎಂಇಎಸ್ ಮುಖಂಡ  ಆಬಾಸಾಹೇಬ ದಳವಿ ಮಾತನಾಡಿ, ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದರೆ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆ ನೀಡಿದರು. ಎಂ.ಜಿ. ಪಾಟೀಲ ಮಾತನಾಡಿ, ಸರ್ದಾರ್ ಮೈದಾನ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ ವೃತ್ತ ಹಾಗೂ ಸಂಭಾಜಿ ಉದ್ಯಾನವನದಲ್ಲಿ ಮಹಾಮೇಳಾವ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಹೋರಾಟದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ನಗರ ಎಂಇಎಸ್ ಅಧ್ಯಕ್ಷ ರಂಜಿತ ಚವ್ಹಾಣ-ಪಾಟೀಲ, ಮಾಜಿ ಮೇಯರ್ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲೋಜಿರಾವ ಅಷ್ಟೇಕರ, ಆರ್.ಎಂ. ಚೌಗುಲೆ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು  ಸೇರಿದಂತೆ ಇತರರು ಹಾಜರಿದ್ದರು.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾನಗರ ಪಾಲಿಕೆಯ ತೆರಿಗೆದಾರರಿಗೆ 3 ಜನಸ್ನೇಹಿ ಸೇವೆಗಳು : ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿಅನುಮತಿ ಇಲ್ಲದಿದ್ದರೂ ಮಹಾಮೇಳಾವ ನಡೆಸಲು ಎಂಇಎಸ್ ಪಟ್ಟುಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಟಿಳಕವಾಡಿಯ ಮೂರು ವಾರ್ಡಿನ ನಮ್ಮ ಸ್ವಚ್ಛತಾ ಕರ್ಮಚಾರಿ ಬಂಧು ಬಗಿನಿಯರಿಗೆ ವಿಶ್ವ ಹಿಂದುಪರಿಷತ್ತ ಸಾಮಾಜಿಕ ಸಾಮರಸ್ಯದ ವತಿಯಿಂದ ಮತ್ತು  ಶಹಾಪುರ ಲೈನ್ಸ ಕ್ಲಬ್ ವತಿಯಿಂದ ಜಂಟಿಯಾಗಿ ದೀಪಾವಳಿಯ(ಪರಾಳ) ಉಡುಗೊರೆ ಕೊಟ್ಟು ಗೌರವ ಅರ್ಪಣೆ. ಪತಿಯ ಮೃತದೇಹದ ಪಕ್ಕದಲ್ಲಿ ಕಣ್ಣೀರಿಡುತ್ತಿದ್ದ ಪತ್ನಿಗೆ ನೆರವಾದ ಮಾಜಿ ಮೇಯರ್ ವಿಜಯ್ ಮೋರೆ ಮತ್ತು ಸೋಶಿಯಲ್ ರೆಸ್ಕ್ಯೂ ತಂಡಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಒಂದು ಕಿಲೋ ವ್ಯಾಟ್‌ ಸಾಮರ್ಥ್ಯ (101.9 ಮೆಗಾಹರ್ಟ್ಸ್)‌ ಎಫ್‌.ಎಂ ಪ್ರೇಷಕದ ಉದ್ಘಾಟನಾ ಸಮಾರಂಭಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ