19 Nov 2026, 12:19:04 AM|
Gold₹13444/gGold24K ₹13,444/g - 22K ₹12,313/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi | Entertainment News

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

*ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜೀವಂತ ಶಕ್ತಿಯೇ ಭಾಷೆ: ಪ್ರೊ. ಪ್ರಶಾಂತ ನಾಯಕ್ ಅಭಿಮತ*

ಬೆಳಗಾವಿ-18: ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘದ ವತಿಯಿಂದ ಕುವೆಂಪು ಸಭಾಭವನದಲ್ಲಿ ಮಂಗಳವಾರ ರಂದು ಆಯೋಜಿಸಿದ್ದ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ, ಅದೊಂದು ಸಮಗ್ರ ಬದುಕಾಗಿದೆ. ಒಂದು ನಾಡಿನ ಆಚಾರ-ವಿಚಾರ, ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜೀವಂತ ಶಕ್ತಿಯೇ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಇಲ್ಲಿರುವ ಪ್ರತಿಯೊಬ್ಬರೂ ಕನ್ನಡವನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ, ಕನ್ನಡದ ಬದುಕುಗಳನ್ನು ಬದುಕಬೇಕು 'ಕನ್ನಡ, ಕನ್ನಡಿಗ ಮತ್ತು ಕರ್ನಾಟಕ' ವಿಷಯದ ಕುರಿತು ಮಾತನಾಡುತ್ತಾ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಪ್ರಶಾಂತ ನಾಯಕ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಡಿ.ಎಸ್. ಚೌಗಲೆ ಮಾತನಾಡಿ, ಯಾವುದೇ ಒಂದು ಭಾಷೆ ಸಮೃದ್ಧಿಯಾಗಬೇಕಾದರೆ ಬೇರೆ ಭಾಷೆಗಳೊಂದಿಗೆ ಕೊಡುಕೊಳ್ಳುವಿಕೆ ಬಹಳ ಅವಶ್ಯ. ಈ ರೀತಿಯ ಕೊಡುಕೊಳ್ಳುವಿಕೆಯು ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಹೇರಳವಾಗಿದೆ. ಕನ್ನಡ ಭಾಷೆಯು ಬಹುತ್ವವನ್ನು ಒಳಗೊಂಡಿದ್ದು, ವಿವಿಧ ಭಾಷೆ ಮತ್ತು ಸಂಸ್ಕೃತಿಗಳ ಒಳ್ಳೆಯ ಅಂಶಗಳನ್ನು ಪ್ರೀತಿಯಿಂದ ಸ್ವೀಕರಿಸಿದೆ. ನಮ್ಮ ಬದುಕು, ಸಾಹಿತ್ಯ ಮತ್ತು ಕಲೆಯಲ್ಲಿ ಭಾಷೆಗಳು ಯಾವುದೇ ಒತ್ತಾಯವಿಲ್ಲದೆ ಸಹಜವಾಗಿ ಹಾಗೂ ಸಾವಯವವಾಗಿ ಕೊಡುಕೊಳ್ಳುವಿಕೆ ಮಾಡಿಕೊಳ್ಳುತ್ತವೆ. ಇದರಿಂದ ಭಾಷೆಯು ಮತ್ತಷ್ಟು ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಮತ್ತು ಬದುಕು ಎರಡೂ ಅಂತರ್ಗತವಾಗಿ ಬೆಸೆದುಕೊಂಡಿವೆ; ಅವುಗಳನ್ನು ಒಂದರಿಂದೊಂದು ಬೇರೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಅಥವಾ ಅಂಕಗಳಿಗೆ ಸೀಮಿತವಾಗದೆ, ಭಾಷೆ ಮತ್ತು ಉತ್ತಮ ಮೌಲ್ಯಗಳನ್ನು ಕಲಿಯುತ್ತಾ ನಿಜವಾದ ಬದುಕಿಗೆ ಸಿದ್ಧರಾಗಬೇಕು. ಭಾಷೆಯು ನಮ್ಮ ಆಲೋಚನೆಗಳಿಗೆ ಸ್ಪಷ್ಟತೆ ನೀಡುತ್ತದೆ ಮತ್ತು ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಎಂದು ಸಲಹೆ ನೀಡಿದರು.
ಕುಲಸಚಿವರಾದ ಶ್ರವಣ ನಾಯ್ಕ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸುವಲ್ಲಿ ಎಲ್ಲರ ನಡುವಿನ ಸೌಹಾರ್ದತೆ ಬಹಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಾವು ಕನ್ನಡವನ್ನು ಉಳಿಸಿ ಪ್ರತಿದಿನ ಬಳಸುವುದು ಬಹಳ ಮುಖ್ಯ. ಇದರ ಜೊತೆಗೆ, ನಮ್ಮ ಭಾಷೆ ಮತ್ತು ನಾಡಿನ ಇತಿಹಾಸವನ್ನು ವಿಸ್ತೃತವಾಗಿ ತಿಳಿದುಕೊಳ್ಳಬೇಕು. ನಾವು ಕನ್ನಡವನ್ನು ಬಳಸುವುದಷ್ಟೇ ಅಲ್ಲ, ಬೇರೆಯವರಿಗೂ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು; ಇದರಿಂದ ಕನ್ನಡ ಭಾಷೆಯ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಡಿ.ಎಸ್. ಚೌಗಲೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪ್ರೊ. ಬಿ.ಎಸ್. ನಾವಿ, ಕರ್ನಾಟಕ ರಾಜ್ಯೋತ್ಸವ ಆಚರಣೆ ಸಮಿತಿಯ ಅಧ್ಯಕ್ಷೆ ಪ್ರೊ. ಚಂದ್ರಿಕಾ ಕೆ.ಬಿ, ಸದಸ್ಯ ಕಾರ್ಯದರ್ಶಿ ಡಾ. ಗಜಾನನ ನಾಯ್ಕ್, ಪ್ರೊ. ವೈ.ಎಸ್. ಬಲವಂತಗೋಳ, ಡಾ. ಚಂದ್ರಶೇಖರ ಬನಸೋಡೆ, ಡಾ. ಮಹೇಶ್ ಗಾಜಪ್ಪನವರ, ಡಾ. ಕಿರಣಕುಮಾರ್ ಪಿ., ಡಾ. ಮಂಜುಳಾ ಜಿ.ಕೆ., ಡಾ. ಚಂದ್ರಶೇಖರ್ ಎಸ್.ವಿ., ಡಾ. ಸಿದ್ದಲಿಂಗೇಶ್ವರ ಬಿದರಳ್ಳಿ ಸೇರಿದಂತೆ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾನಗರ ಪಾಲಿಕೆಯ ತೆರಿಗೆದಾರರಿಗೆ 3 ಜನಸ್ನೇಹಿ ಸೇವೆಗಳು : ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿಅನುಮತಿ ಇಲ್ಲದಿದ್ದರೂ ಮಹಾಮೇಳಾವ ನಡೆಸಲು ಎಂಇಎಸ್ ಪಟ್ಟುಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಟಿಳಕವಾಡಿಯ ಮೂರು ವಾರ್ಡಿನ ನಮ್ಮ ಸ್ವಚ್ಛತಾ ಕರ್ಮಚಾರಿ ಬಂಧು ಬಗಿನಿಯರಿಗೆ ವಿಶ್ವ ಹಿಂದುಪರಿಷತ್ತ ಸಾಮಾಜಿಕ ಸಾಮರಸ್ಯದ ವತಿಯಿಂದ ಮತ್ತು  ಶಹಾಪುರ ಲೈನ್ಸ ಕ್ಲಬ್ ವತಿಯಿಂದ ಜಂಟಿಯಾಗಿ ದೀಪಾವಳಿಯ(ಪರಾಳ) ಉಡುಗೊರೆ ಕೊಟ್ಟು ಗೌರವ ಅರ್ಪಣೆ. ಪತಿಯ ಮೃತದೇಹದ ಪಕ್ಕದಲ್ಲಿ ಕಣ್ಣೀರಿಡುತ್ತಿದ್ದ ಪತ್ನಿಗೆ ನೆರವಾದ ಮಾಜಿ ಮೇಯರ್ ವಿಜಯ್ ಮೋರೆ ಮತ್ತು ಸೋಶಿಯಲ್ ರೆಸ್ಕ್ಯೂ ತಂಡಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಒಂದು ಕಿಲೋ ವ್ಯಾಟ್‌ ಸಾಮರ್ಥ್ಯ (101.9 ಮೆಗಾಹರ್ಟ್ಸ್)‌ ಎಫ್‌.ಎಂ ಪ್ರೇಷಕದ ಉದ್ಘಾಟನಾ ಸಮಾರಂಭಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ