23 Nov 2026, 11:27:18 PM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ : ಆಯುಕ್ತ ಕಾರ್ತಿಕ್ ಎಂ 

ಬೆಳಗಾವಿ-23 : ಜನಗಣತಿಯು   ರಾಷ್ಟ್ರೀಯ ಮಹತ್ವದ ಕಾರ್ಯವಾಗಿರುವುದರಿಂದ 

ಯಾವುದೇ ಲೋಪಗಳಾಗದಂತೆ ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು 
ಪಾಲಿಕೆ ಆಯುಕ್ತ , ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ಜನಗಣತಿ ಅಧಿಕಾರಿಯಾಗಿರುವ ಕಾರ್ತಿಕ್ ಎಂ ಹೇಳಿದರು. 
                  ಮಹಾನಗರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹಾನಗರ ಪಾಲಿಕೆ ವ್ಯಾಪ್ತಿಯ ಜನಗಣತಿ 2027ರ ಕ್ಷೇತ್ರ ತರಬೇತುದಾರರ  3 ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
        ಕೇಂದ್ರ ರಾಜ್ಯ ಸರ್ಕಾರಗಳಿಂದ ಅಭಿವೃದ್ಧಿ ಕಾರ್ಯಗಳ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಅನೇಕ ಮಹತ್ವದ ಕಾರ್ಯಗಳಿಗೆ ಜನಗಣತಿಯು ಅಂಕಿ ಸಂಖ್ಯೆಗಳ ಸಮೇತ ಮಾರ್ಗದರ್ಶಿಯಾಗುವುದರಿಂದ ಇದರಲ್ಲಿ ತೊಡಗಿಸಿಕೊಂಡಿರುವ ಮೇಲಾಧಿಕಾರಿಗಳು ಸಹಿತ ಎಲ್ಲ ಸಿಬ್ಬಂದಿ ಬಹಳಷ್ಟು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಸಂಶಯಗಳಿದ್ದರೆ ತರಬೇತಿ ಸಂದರ್ಭದಲ್ಲಿ ಪ್ರಶ್ನೆ ಕೇಳಿ ಪರಿಹರಿಸಿಕೊಳ್ಳಬೇಕು. 
ನಾಗರಿಕರೊಂದಿಗೆ ಸೌಜನ್ಯತೆಯಿಂದ ನಿಖರವಾದ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಿಗದಿತ ಅವಧಿ ಒಳಗೆ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಹೇಳಿದರು. 
        ಪಾಲಿಕೆ ಕಂದಾಯ ಶಾಖೆ ಉಪ ಆಯುಕ್ತ , ನಗರ ಜನಗಣತಿ ಅಧಿಕಾರಿ 
ಡಾ. ಸಿದ್ದು ಹುಲ್ಲೋಳಿ ಅವರು ಪ್ರಾತ್ಯಕ್ಷಿಕೆ ಸಹಿತ 
ಮಹತ್ವದ ಮಾಹಿತಿಗಳನ್ನು ಸಿಬ್ಬಂದಿಗೆ ನೀಡಿದರು. 
          ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ವಿಪಿನ್ ಶರ್ಮಾ, ಮುಖ್ಯ ತರಬೇತುದಾರರಾದ ಅಂಕಿತ ಎಂ., ಅನೂಪ ಕನೋಜ್,
ವಲಯ ಆಯುಕ್ತ ಅನೀಲ ಬೋರಗಾವಿ,
ರಾಜಶೇಖರ ನೇಗಿನಹಾಳ, ಕ್ಷೇತ್ರ ತರಬೇತುದಾರರು,
ಪಾಲಿಕೆ ಜನಗಣತಿ ಶಾಖೆಯ 
ಝೀನತ್ ಮುಲ್ಲಾ, ವಸಂತ ಭರಮಣ್ಣವರ ಇತರೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು. 


Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ : ಆಯುಕ್ತ ಕಾರ್ತಿಕ್ ಎಂ *24ನೇ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆ; 2026-27ನೇ ಸಾಲಿನ ಕ್ರಿಯಾ ಯೋಜನೆಗೆ 322 ಕೋಟಿ ರೂ. ಮೀಸಲು, 100 ಹೊಸ ಆಂಬುಲೆನ್ಸ್‌ಗಳ ಸೇರ್ಪಡೆ**ಕೊಠಡಿ ಹಂಚಿಕೆ, ವಾಸ್ತವ್ಯ ವೆಚ್ಚದಲ್ಲಿ ಅವ್ಯವಹಾರದ ಆರೋಪ; ತನಿಖೆಗೆ ಆಗ್ರಹ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹ*ಜೈನ್ ಹೆರಿಟೇಜ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪುರಸ್ಕಾರ; ಶಿಸ್ತು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಮಹಾಂತೇಶ ಹೊಸಪೇಟಿ ಕರೆ*ಮೋದಗಾದ ಸಿದ್ಧೇಶ್ವರ ನಗರದಲ್ಲಿ ಚನ್ನರಾಜ ಹಟ್ಟಿಹೊಳಿ ಅವರ 42ನೇ ಜನ್ಮದಿನ ಸಂಭ್ರಮ**ಚಿನ್ನದ ಬೆಲೆ ಕುಸಿತದ ಎಫೆಕ್ಟ್‌*:  *ಗೋಲ್ಡ್‌ ಲೋನ್‌ ಪಡೆದವರಿಗೆ ಬ್ಯಾಂಕ್‌ಗಳಿಂದ ಬಂತು ಹೊಸ ನೋಟಿಸ್‌*ಸರ್ವೋದಯ ಸ್ವಯಂ ಸೇವಾ ಸಂಘ ಕನ್ನಡಪರ ಸಂಘಟನೆಯ ಶ್ರೀನಿವಾಸ ತಾಳೂಕರ ಇವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು 108 ಅಡಿ ಕರ್ನಾಟಕ ಮಾತೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಎಚ್. ಕೆ ಪಾಟೀಲ್ ಶಾಸಕರು ಹಾಗೂ ಮಾಜಿ ಸಚಿವರು ಇವರಿಗೆ   ಪರಮಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ ಇವರ ಮುಖಾಂತರ ಮನವಿ ಫ್ಲೈಯಿಂಗ್ ಫೀಟ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಡ್ಯಾನ್-1 ಗೌರವಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲಜ್ಯೋತಿ ಬದಾಮಿ ಇವರಿಗೆ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕಾರ.'