23 Nov 2026, 02:12:14 AM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲ

ಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲ

ಬೈಲಹೊಂಗಲ-22:ಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲ!

ಬಸವಣ್ಣನವರ ವಿಚಾರದಲ್ಲಿ ಸರ್ಕಾರದ ನಡೆ ದ್ವಂದ್ವ ನಿಲುವಿನಿಂದ ಕೂಡಿದೆ, ಬಸವಣ್ಣನವರನ್ನು ಅವಹೇಳನ ಮಾಡಿದವರನ್ನು ಬಂದಿಸುವದಾಗಿ ಹೇಳಿದ್ದ ಮುಖ್ಯಮಂತ್ರಿಗಳು ರವಿ ಹಂಜ್ ಬಿಡುಗಡೆಗೊಳಿಸಿರುವದು ಸರ್ಕಾರದ ಧ್ವಂದ್ವ ನೀತಿಯಾಗಿದೆ ಎಂದು ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
       ಸುದ್ದಿ ಗಾರರೊಂದಿಗೆ ಭಾನುವಾರ ಮಾತನಾಡಿ, 12ನೇ ಶತಮಾನದ ವಿಶ್ವಮಾನವ, ಸಮಾನತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಕ್ರಾಂತಿಗೆ ನಾಂದಿ ಹಾಡಿದ ಜಗಜ್ಯೋತಿ ಬಸವಣ್ಣನವರ ಕುರಿತು ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯಲ್ಲಿ ಉಲ್ಲೇಖಿಸಿರುವ ಆಕ್ಷೇಪಾರ್ಹ ಸಂಗತಿಗಳು ಹಾಗೂ ಟಿವಿ ಸಂದರ್ಶನದಲ್ಲಿ ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಮತ್ತು ಐತಿಹಾಸಿಕ ಕೊಡುಗೆಗಳ ಕುರಿತು ಮಾಡಿರುವ ಹೇಳಿಕೆಗಳು ಅತ್ಯಂತ ಖಂಡನೀಯವಾಗಿವೆ.
ಬಸವಣ್ಣನವರು ಯಾವುದೇ ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮಾನವಕುಲಕ್ಕೆ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ನೀಡಿದ ಮಹಾನ್ ಸಮಾಜ ಸುಧಾರಕರು. ಇಂತಹ ಮಹಾನ್ ಚೇತನದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಹಾಗೂ ಐತಿಹಾಸಿಕ ಸಂಗತಿಗಳನ್ನು ತಿರುಚಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ರವಿ ಹಂಜ್ ಅವರ ಕೃತಿಯಲ್ಲಿನ ವಿವಾದಾತ್ಮಕ ಬರಹಗಳು ಮಾತ್ರವಲ್ಲದೆ, ಟಿವಿ ಸಂದರ್ಶನದಲ್ಲಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಅವರನ್ನೇ ಕಳ್ಳತನ ಮತ್ತು ಕೊಲೆಯಂತಹ ಆರೋಪಗಳಿಗೆ ಹೋಲಿಸುವ ರೀತಿಯಲ್ಲಿ ಮಾಡಿರುವ ಚರ್ಚೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಸಂಶೋಧನೆಯ ಹೆಸರಿನಲ್ಲಿ ಇತಿಹಾಸದ ಮಹಾಪುರುಷರ ಘನತೆಗೆ ಧಕ್ಕೆ ತರುವ ಸ್ವಾತಂತ್ರ್ಯ ಯಾರಿಗೂ ಇಲ್ಲ.
ಲೇಖಕನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಬಿಡುಗಡೆಗೊಳಿಸಿ ನೋಟಿಸ್ ನೀಡಿರುವ ಬೆಳವಣಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರ ಕೇವಲ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಪ್ರಕಟಿಸಿ, ಬಂಧನದ ಸದ್ದು ಮಾಡಿ ನಂತರ ಪ್ರಕರಣವನ್ನು ಸಾಮಾನ್ಯ ಪ್ರಕ್ರಿಯೆಗೆ ಸೀಮಿತಗೊಳಿಸುವುದರಿಂದ ಬಸವಾಭಿಮಾನಿಗಳ ಆಕ್ರೋಶ ಕಡಿಮೆಯಾಗುವುದಿಲ್ಲ.
ಸರ್ಕಾರಕ್ಕೆ ನಿಜವಾಗಿಯೂ ಬಸವಣ್ಣನವರ ಮೇಲೆ ಗೌರವವಿದ್ದರೆ ಅದು ಕೇವಲ ಹೇಳಿಕೆಗಳಲ್ಲಿ ಅಲ್ಲ, ಕಾನೂನು ಕ್ರಮಗಳಲ್ಲಿಯೂ ಪ್ರತಿಬಿಂಬಿಸಬೇಕು.
ಬಸವಣ್ಣನವರ ವಿಚಾರದಲ್ಲಿ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡದೆ, ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಲೇಖಕ ಮಾತ್ರವಲ್ಲದೆ, ಕೃತಿಯ ಪ್ರಕಟಣೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದವರ ಪಾತ್ರವನ್ನೂ ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಬೇಕು. ಕೃತಿಯಲ್ಲಿನ ವಿವಾದಾತ್ಮಕ ಅಂಶಗಳ ಬಗ್ಗೆ ನಾಡಿನ ಹಿರಿಯ ಬಸವತತ್ವ ಚಿಂತಕರು, ಇತಿಹಾಸ ತಜ್ಞರು ಹಾಗೂ ವಚನ ಸಾಹಿತ್ಯದ ವಿದ್ವಾಂಸರ ಅಭಿಪ್ರಾಯ ಪಡೆಯಬೇಕು.
ನಮ್ಮ ಪ್ರಶ್ನೆ ಸ್ಪಷ್ಟವಾಗಿದೆ:
ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಬರಹಗಳು ಮತ್ತು ಹೇಳಿಕೆಗಳ ಕುರಿತು ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ?
ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರದ ನಂತರ ಅದರ ಅನುಷ್ಠಾನ ಮತ್ತು ತನಿಖೆಯ ಪ್ರಗತಿ ಏನು?
ಲೇಖಕನಿಗೆ ಕೇವಲ ನೋಟಿಸ್ ನೀಡಿ ಬಿಡುಗಡೆಗೊಳಿಸಿದ ನಂತರ ಪ್ರಕರಣದ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡುವುದೇಕೆ ಇಲ್ಲ?
ಬಸವಣ್ಣನವರ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ಪರಂಪರೆಯ ಕುರಿತು ಸುಳ್ಳು ಹಾಗೂ ದಾರಿತಪ್ಪಿಸುವ ವಿಚಾರಗಳು ಹರಡುವುದನ್ನು ತಡೆಯಲು ಸರ್ಕಾರ ಯಾವ ಶಾಶ್ವತ ಕ್ರಮ ಕೈಗೊಳ್ಳಲಿದೆ?
ಬಸವಣ್ಣನವರನ್ನು ಅವಹೇಳನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಯಾವುದೇ ವೈಯಕ್ತಿಕ ದ್ವೇಷದ ಬೇಡಿಕೆಯಲ್ಲ. ಇದು ನಾಡಿನ ಸಾಂಸ್ಕೃತಿಕ ಗೌರವ, ಸಾಮಾಜಿಕ ಸಾಮರಸ್ಯ ಮತ್ತು ಮಹಾನ್ ಮಾನವತಾವಾದಿಯ ಘನತೆಯನ್ನು ಕಾಪಾಡುವ ನ್ಯಾಯಯುತ ಆಗ್ರಹವಾಗಿದೆ.
ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ಹೆಸರಿನಲ್ಲಿ ಜಯಂತಿ ಆಚರಿಸಿ, ಭಾಷಣ ಮಾಡಿ, ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರೆ ಸಾಲದು; ಅವರ ಘನತೆಗೆ ಧಕ್ಕೆ ಬಂದಾಗ ಅದನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆಯೂ ಸರ್ಕಾರಕ್ಕಿದೆ.
ಬಸವಣ್ಣನವರ ವಿಚಾರದಲ್ಲಿ ರಾಜಕೀಯ ನಾಟಕ ಬೇಡ, ಪ್ರಾಮಾಣಿಕ ನ್ಯಾಯ ಬೇಕು. ಬಸವತತ್ವದ ಅವಹೇಳನದ ವಿರುದ್ಧ ನಮ್ಮ ಹೋರಾಟ ನಿರಂತರ ಎಂದಿದ್ದಾರೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ವೋದಯ ಸ್ವಯಂ ಸೇವಾ ಸಂಘ ಕನ್ನಡಪರ ಸಂಘಟನೆಯ ಶ್ರೀನಿವಾಸ ತಾಳೂಕರ ಇವರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು 108 ಅಡಿ ಕರ್ನಾಟಕ ಮಾತೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಎಚ್. ಕೆ ಪಾಟೀಲ್ ಶಾಸಕರು ಹಾಗೂ ಮಾಜಿ ಸಚಿವರು ಇವರಿಗೆ   ಪರಮಪೂಜ್ಯ ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ ಇವರ ಮುಖಾಂತರ ಮನವಿ ಫ್ಲೈಯಿಂಗ್ ಫೀಟ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಡ್ಯಾನ್-1 ಗೌರವಜಗಜ್ಯೋತಿ ಬಸವಣ್ಣನವರ ಅವಹೇಳನ ಸಹಿಸುವ ಪ್ರಶ್ನೆಯೇ ಇಲ್ಲಜ್ಯೋತಿ ಬದಾಮಿ ಇವರಿಗೆ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕಾರ.' ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ: ವಸತಿ, ಊಟೋಪಹಾರ ವ್ಯವಸ್ಥೆಗೆ ವಿಧಾನಸಭಾಧ್ಯಕ್ಷ ಹಾಗೂ ವಿಧಾನಷತ್ ಪಭಾಪತಿ ಸೂಚನೆ ನೀಡಿದರುಡಿ. 3ರಂದು ಬೆಳಗಾವಿ ಸುವರ್ಣಸೌಧದ ಎದುರು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಬೃಹತ್ ಧರಣಿಸುವರ್ಣ ವಿಧಾನಸೌಧ ಅಧಿವೇಶನದಲ್ಲಿ ಅಭಿವೃದ್ಧಿ ವಿಚಾರಗಳ ಚರ್ಚೆಗೆ ಹೆಚ್ಚಿನ ಆದ್ಯತೆನೆಲ, ಜಲ, ಭಾಷೆ ರಕ್ಷಣೆ ಹಾಗೂ ಶೋಷಿತರ ಏಳಿಗೆಗೆ ನಿರಂತರ ಹೋರಾಟ ಅಗತ್ಯ: ಮಹೇಶ ಕುಮಾರ್ಟರ್ಬೈನ್ ಬ್ಲಾಸ್ಟ್ ಬಗ್ಗೆ ಸಮಗ್ರ ತನಿಖೆಗೆ ರೈತ ಮುಖಂಡರ ಆಗ್ರಹಬಸವಣ್ಣನವರನ್ನು ಅವಮಾನಿಸಿದ ರವಿ ಹಂಜ ಬಂಧನಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ಪ್ರತಿಭಟನೆ