20 Nov 2026, 02:11:24 AM|
Gold₹13023/gGold24K ₹13,023/g - 22K ₹11,927/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | Districts Belagavi

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ

ಬೆಳಗಾವಿ /ಹುಕ್ಕೇರಿ-19 : ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಬರುತ್ತಿದ್ದ ಹಣದಲ್ಲಿ ಪಾಲು ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಂತ ಅಜ್ಜಿಯನ್ನೇ ಮೊಮ್ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಕಲ್ಲುಗಳೊಂದಿಗೆ ಕಟ್ಟಿ ಜಲಾಶಯಕ್ಕೆ ಎಸೆದಿರುವ ಅಮಾನವೀಯ ಘಟನೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವಾ ಬಾಲಪ್ಪಾ ಸನದಿ (78) ಕೊಲೆಯಾದ ವೃದ್ಧೆ. ಕೊಲೆ ಆರೋಪದ ಮೇಲೆ ಅವರ ಮೊಮ್ಮಗ ಭೀಮಪ್ಪಾ ರಾಮಪ್ಪಾ ಸನದಿ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಣಕ್ಕಾಗಿ ಅಜ್ಜಿಯೊಂದಿಗೆ ಜಗಳ: ಹಮ್ಮವ್ವಾ ಅವರಿಗೆ ಗೃಹಲಕ್ಷ್ಮೀ ಯೋಜನೆಯಡಿ ಬರುತ್ತಿದ್ದ ಹಣದಲ್ಲಿ ತನಗೂ ಪಾಲು ನೀಡಬೇಕೆಂದು ಮೊಮ್ಮಗ ಭೀಮಪ್ಪಾ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ನ.10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ವೃದ್ಧೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.
ನ.15ರಂದು ಜಿನರಾಳ ಗ್ರಾಮದ ಘಟಪ್ರಭಾ ನದಿ ಜಲಾಶಯದ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ್ದ ವೃದ್ಧೆಯ ಶವ ಪತ್ತೆಯಾಗಿತ್ತು. ಈ ಕುರಿತು ಮೃತಳ ಪುತ್ರಿ ಭೀಮವ್ವಾ ಈರನಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಗುಡ್ಡದಲ್ಲಿ ಕತ್ತು ಹಿಸುಕಿ ಕೊಲೆ: ಪೊಲೀಸರ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ, ನ.10ರಂದು ಅಜ್ಜಿಯನ್ನು ಬೈಕ್ನಲ್ಲಿ ಕರೆದೊಯ್ದ ಆರೋಪಿ ಗವಿಸಿದ್ದೇಶ್ವರ ಗುಡ್ಡದಲ್ಲಿ ಗೃಹಲಕ್ಷ್ಮೀ ಹಣದ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಹಣ ನೀಡಲು ನಿರಾಕರಿಸಿದ ಅಜ್ಜಿಯನ್ನು ಕೆಳಕ್ಕೆ ತಳ್ಳಿ, ಕೈ ಹಾಗೂ ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲ ಖರೀದಿಸಿ ತಂದಿದ್ದಾನೆ. ಅಜ್ಜಿಯ ಬಳಿಯಿದ್ದ ₹2,300 ನಗದು ಹಾಗೂ ಕೊರಳಲ್ಲಿದ್ದ ಎರಡು ಚಿನ್ನದ ಸರಗಳನ್ನು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿದ್ದಾನೆ. ರಾತ್ರಿ ಬೈಕ್ನಲ್ಲಿ ಶವ ಸಾಗಿಸಿ ಜಿನರಾಳ ಗ್ರಾಮದ ಡ್ಯಾಂ ಹಿನ್ನೀರಿಗೆ ಕೊಂಡೊಯ್ದು, ಗೋಣಿ ಚೀಲಗಳಿಗೆ ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂತು .
ಆರೋಪಿ ನ್ಯಾಯಾಂಗ ಬಂಧನಕ್ಕೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಮಕನಮರಡಿ ಠಾಣೆಯ ಇನ್ಸ್ಪೆಕ್ಟರ್ ಜಾವೀದ್ ಎಫ್. ಮುಶಾಪುರಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗಚಳಿಗಾಲದ ಅಧಿವೇಶನ ಅಗತ್ಯ ಸಿದ್ಧತೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪರಿಶೀಲನೆ.ಶ್ರೀ ನಾಗೇಂದ್ರ ಮಹಾಸ್ವಾಮಿಗಳ 90ನೇ ಪುಣ್ಯಸ್ಮರಣೆಬೆಳಗಾವಿ  ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ಬಾರಿಗೆ ಚುನಾಯಿತ ಜಿಮ್ಖಾನಾ ಯೂನಿಯನ್, ವಿದ್ಯಾರ್ಥಿ ಪರಿಷತ್ ಉದ್ಘಾಟನೆಮಹಾನಗರ ಪಾಲಿಕೆಯ ತೆರಿಗೆದಾರರಿಗೆ 3 ಜನಸ್ನೇಹಿ ಸೇವೆಗಳು : ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿಅನುಮತಿ ಇಲ್ಲದಿದ್ದರೂ ಮಹಾಮೇಳಾವ ನಡೆಸಲು ಎಂಇಎಸ್ ಪಟ್ಟುಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಬೆಳಗಾವಿಯಲ್ಲಿ 'ಸಿಜಿಎಚ್‌ಎಸ್' (CGHS) ವೆಲ್‌ನೆಸ್ ಸೆಂಟರ್ ಸ್ಥಾಪಿಸಲು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರಿಂದ ಸಂಸದ ಶೆಟ್ಟರ್ ಗೆ ಮನವಿಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ