18 Nov 2026, 12:12:59 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | Districts Belagavi

ಮದ್ಯ ಕಳ್ಳಸಾಗಣೆ

ಮೀನು ಸಾಗಾಟದ ಸೋಗಿನಲ್ಲಿ ಗೋವಾ ಮದ್ಯ ಕಳ್ಳಸಾಗಣೆ. ₹55.28 ಲಕ್ಷ ಮೌಲ್ಯದ ಮದ್ಯ, ವಾಹನ ಜಪ್ತಿ; ಅಬಕಾರಿ ದಾಳಿ ಕಂಡು ಆರೋಪಿಗಳು ಪರಾರಿ. 

ಬೆಳಗಾವಿ-17: ಮೀನು ಸಾಗಾಟದ ಸೋಗಿನಲ್ಲಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಅಬಕಾರಿ ಅಧಿಕಾರಿಗಳು ಭೇದಿಸಿದ್ದು, ₹35.28 ಲಕ್ಷ ಮೌಲ್ಯದ ಗೋವಾ ಮದ್ಯ ಸೇರಿದಂತೆ ಒಟ್ಟು ₹55.28 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರ–ಕರ್ನಾಟಕ ಗಡಿ ಭಾಗದ ವೈಭವ ಹೋಟೆಲ್ ಸಮೀಪದ ಬಾಜಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 'ಒಸಿಯನ್ ಫಿಶರ್' ಹೆಸರಿನ ಕೋಲ್ಡ್ ಸ್ಟೋರೇಜ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಮದ್ಯ ಸಾಗಾಟದ ಜಾಲ ಬಯಲಾಗಿದೆ.
ಮೇಲ್ನೋಟಕ್ಕೆ ಮೀನು ಸಾಗಾಟದ ವಾಹನದಂತೆ ಕಂಡುಬರುತ್ತಿದ್ದ ಈ ವಾಹನದಲ್ಲಿ ಮೀನು ತುಂಬಿದ ಟ್ರೇಗಳನ್ನು ಹೊರಭಾಗದಲ್ಲಿ ಜೋಡಿಸಿ, ಒಳಭಾಗದಲ್ಲಿ ಮದ್ಯದ ಬಾಕ್ಸ್ಗಳನ್ನು ವ್ಯವಸ್ಥಿತವಾಗಿ ಅಡಗಿಸಿಡಲಾಗಿತ್ತು. ಮೀನು ಸಾಗಾಟದ ಸೋಗಿನಲ್ಲಿ ಅಬಕಾರಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಮದ್ಯ ಸಾಗಿಸಲು ಆರೋಪಿಗಳು ಸಿನಿಮೀಯ ತಂತ್ರ ಅನುಸರಿಸಿದ್ದರು ಎನ್ನಲಾಗಿದೆ.
ಪುಷ್ಪಾ ಸಿನಿಮಾ ಶೈಲಿಯಲ್ಲಿ ಸಾಗಾಟ: ಮೀನು ಸಾಗಾಟದ ವಾಹನವೆಂದು ಯಾರಿಗೂ ಅನುಮಾನ ಬಾರದಂತೆ ರೂಪಿಸಿದ್ದ ಆರೋಪಿಗಳು, ವಾಹನದ ಹೊರಭಾಗದಲ್ಲಿ ಮೀನು ತುಂಬಿದ ಟ್ರೇಗಳನ್ನು ಇರಿಸಿ ಒಳಭಾಗದಲ್ಲಿ ಮದ್ಯದ ಬಾಕ್ಸ್ಗಳನ್ನು ಬಚ್ಚಿಟ್ಟಿದ್ದರು. ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸಲು ಈ ತಂತ್ರ ರೂಪಿಸಲಾಗಿತ್ತು ಎನ್ನಲಾಗಿದೆ.
ಆದರೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟದ ಬಣ್ಣ ಬಯಲಾಗಿದೆ. ವಾಹನದಲ್ಲಿ ಅಡಗಿಸಿಟ್ಟಿದ್ದ ಬಿಗ್ ಬಾಸ್ ಬ್ರಾಂಡ್ನ ಮದ್ಯದ ಬಾಕ್ಸ್ಗಳು ಪತ್ತೆಯಾಗಿವೆ.
350 ಬಾಕ್ಸ್ಗಳಲ್ಲಿ ಮದ್ಯ ಪತ್ತೆ: ವಾಹನದಲ್ಲಿ 180 ಎಂಎಲ್ ಅಳತೆಯ ಬಾಟಲಿಗಳಿರುವ ಒಟ್ಟು 350 ಬಾಕ್ಸ್ಗಳಷ್ಟು ಬಿಗ್ ಬಾಸ್ ಬ್ರಾಂಡಿ ಮದ್ಯ ಪತ್ತೆಯಾಗಿದೆ. ಇದರ ಮೌಲ್ಯ ₹35.28 ಲಕ್ಷ ಎಂದು ಅಂದಾಜಿಸಲಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ಸುಮಾರು ₹20 ಲಕ್ಷ ಮೌಲ್ಯದ ಕೋಲ್ಡ್ ಸ್ಟೋರೇಜ್ ವಾಹನವನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಾಳಿ ಕಂಡು ವಾಹನ ಬಿಟ್ಟು ಪರಾರಿ: ಅಬಕಾರಿ ಅಧಿಕಾರಿಗಳು ವಾಹನವನ್ನು ಸುತ್ತುವರಿದು ದಾಳಿ ನಡೆಸುತ್ತಿದ್ದಂತೆ ಅದರಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಸಾಗಾಟದ ಹಿಂದೆ ಯಾರಿದ್ದಾರೆ? ಈ ಜಾಲದಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ? ಮೀನು ಸಾಗಾಟದ ಸೋಗಿನಲ್ಲಿ ಎಷ್ಟು ದಿನಗಳಿಂದ ಈ ದಂಧೆ ನಡೆಯುತ್ತಿದೆ ಎಂಬ ಪ್ರಶ್ನೆಗಳು ಇದೀಗ ಮೂಡಿವೆ.
ಜಪ್ತಿಗೊಂಡ ಮದ್ಯ ಹಾಗೂ ವಾಹನಕ್ಕೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಆರೋಪಿಗಳ ಪತ್ತೆ ಹಾಗೂ ಅಕ್ರಮ ಸಾಗಾಟ ಜಾಲದ ಮೂಲ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ