16/03/2026
IMG-20250702-WA0004

ಕೌಜಲಗಿ-02: ಭೌಗೋಳಿಕವಾಗಿ ಕೌಜಲಗಿ ಸಾಂಸ್ಕೃತಿಕ ತವರೂರಾಗಿದ್ದು, ಹಲವಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವುದರಿಂದ, ತಾಲ್ಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಕೌಜಲಗಿ ಪಟ್ಟಣವು ಹೊಂದಿದ್ದು, ಕೌಜಲಗಿ ತಾಲ್ಲೂಕು ಕೇಂದ್ರವಾಗಲು ನನ್ನ ಸಂಪೂರ್ಣ ಬೆಂಬಲವೂ ಇದೆ ಎಂದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಿರ್ಮಾಣಗೊಂಡಿರುವ ಯಲ್ಲಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಯಲ್ಲಮ್ಮದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಹಮ್ಮಿಕೊಂಡ ಕುಂಬಮೇಳ, ವಾದ್ಯಮೇಳ, ಜಾನಪದ ಕಲಾ ತಂಡದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಯಲ್ಲಮ್ಮದೇವಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟವನ್ನು ಜನಪ್ರಿಯಗೊಳಿಸಿದ ಕೌಜಲಗಿ ನಿಂಗಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಜಿ ಕುಂದನಗಾರ ಮತ್ತು ಕೌಜಲಗಿಯನ್ನು ಕಟ್ಟುವಲ್ಲಿ ಪ್ರರಿಶ್ರಮ ಮಾಡಿದ ಅಂದಿನ ಕೆ.ಎಲ್,ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಜಿ ದೇಸಾಯಿ ಇಂತಹ ಅತಿರಥ ಮಹಾರಥರಿಗೆ ಜನ್ಮ ನೀಡಿದ ಕೌಜಲಗಿ ಗ್ರಾಮದಲ್ಲಿ ಜನರು ದೈವ ಭಕ್ತಿಯ ಪರಂಪರೆಯನ್ನು ಕೂಡಾ ಹೊಂದಿದವರಾಗಿದ್ದು ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಭಕ್ತಿ ಪರಂಪರೆಯನ್ನು ಮುಂದುವರಿಸಿದ್ದಾರೆಂದ ಅವರು ಮುಂದುವರಿದು,ಕೌಜಲಗಿಯೂ ತಾಲ್ಲೂಕಿನಲ್ಲಿ ಅತಿ ದೊಡ್ಡ ಪಟ್ಟಣವಾಗಿದ್ದು, ಹಿಂದೊಂದು ಕಾಲದಲ್ಲಿ ಬರಗಾಲದಿಂದ ತತ್ತರಿಸಿ ಹೊಗಿತ್ತು. ಇವತ್ತು ಪಟ್ಟಣದಲ್ಲಿ ನೀರಾವರಿ ಸೌಲಭ್ಯವಾಗಿರುವದರಿಂದ ಆರ್ಥಿಕವಾಗಿಯೂ ಕೂಡ ಪಟ್ಟಣವು ತುಂಬಾ ಬೆಳೆದಿದೆ. ಕೌಜಲಗಿಯಲ್ಲಿ ವ್ಯಾಪಾರ ವಹಿವಾಟಗಳು ಕೂಡಾ ಹೆಚ್ಚಾಗಿದ್ದು, ತಮ್ಮ ಆರ್ಥಿಕ ವ್ಯವಹಾರಗಳ ದೃಷ್ಠಿಯಿಂದ ಒಂದು ರಾಷ್ಟ್ರೀಕೃತ ಬ್ಯಾಂಕ ಪ್ರಾರಂಭಿಸಬೇಕಾಗಿ ನನ್ನಲ್ಲಿ ವಿನಂತಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ ತರುವಲ್ಲಿ ನಾನು ಯಶಸ್ವಿಯಾಗುತ್ತೇನೆ. ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೊರಿದರು.
ಕೌಜಲಗಿ ಪಟ್ಟಣದ ಹಾಗೂ ಎಲ್ಲಮ್ಮ ದೇವಿ ದೇವಸ್ಥಾನ ಸದ್ಭಕ್ತ ಮಂಡಳಿಯಿಂದ ಸತ್ಕಾರವನ್ನು ಸ್ವೀಕರಿಸಿದ ಈರಣ್ಣ ಕರಡಿ ಅವರು,ಈಗಾಗಲೇ ಕೌಜಲಗಿ ಪಟ್ಟಣಕ್ಕೆ ರಾಜ್ಯಸಭಾ ಸಂಸದರ ನಿಧಿಯಿಂದ ಬಸವೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ.ಗಳು, ವಿಠ್ಠಲ ಬೀರದೇವರ ದೇವಸ್ಥಾನಕ್ಕೆ 10 ಲಕ್ಷ ರೂ.ಗಳು, ಯಲ್ಲಮ್ಮದೇವಿ ದೇವಸ್ಥಾನಕ್ಕೆ 10 ಲಕ್ಷ ರೂ.ಗಳು, ಸಾಯಿ ಮಂದಿರಕ್ಕೆ 5 ಲಕ್ಷ ರೂ.ಗಳು, ಬಸ್ ಪ್ರಯಾಣಿಕರ ತಂಗುದಾನಕ್ಕೆ 5 ಲಕ್ಷ ರೂ.ಗಳು, ಮಾಳಿಂಗರಾಯ ದೇವಸ್ಥಾನಕ್ಕೆ 5 ಲಕ್ಷ ರೂ.ಗಳು ಹೀಗೆ ಎಲ್ಲ ಸಮುದಾಯದವರಿಗೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ವಿತರಿಸುವ ಮೂಲಕ ಕೌಜಲಗಿ ಪಟ್ಟಣದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಿಠ್ಠಲ ಬೀರದೇವರ ದೇವರ್ಷಿ ವಿಠ್ಠಲ್ ಕುರುಗುಂದ ಸ್ವಾಮೀಜಿ ಮತ್ತು ಕೌಜಲಗಿ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಕೃಪಾ ನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾಂತಪ್ಪ ಶಿವನಮಾರಿ, ಮಹಾಂತಪ್ಪ ಲಗಳಿ, ಗುರುಸಿದ್ದ ಬಿಸಗುಪ್ಪಿ, ಸಿದ್ದಪ್ಪ ಹಳ್ಳೂರ, ಈರಪ್ಪಣ್ಣ ಬಿಸಗುಪ್ಪಿ, ಸಿದ್ದಪ್ಪ ಬಿಸಗುಪ್ಪಿ, ರಾಮಣ್ಣ ಲಕ್ಕಪ್ಪನವರ, ಹಣಮಂತ ಲಕ್ಕಪ್ಪನವರ, ಪರಶುರಾಮ ಖಿಲಾರಿ, ಶಿವಣಪ್ಪ ಮೀಸಿ, ಬಸವರಾಜ ಯಲಿಗಾರ, ಬಸವರಾಜ ಲೋಕನ್ನವರ, ಸುಭಾಸ ಕೌಜಲಗಿ, ಶೇಕಪ್ಪ ಮೂಡಲಗಿ, ಬಸಪ್ಪ ಪಟಗುಂದಿ, ಬೀರಪ್ಪ ಖಿಲಾರಿ, ಪರಸಪ್ಪ ಪೂಜೇರಿ, ಬಸಪ್ಪ ಸಣ್ಣಕ್ಕಿ, ಸಂಜು ಮಿರ್ಜಿ, ವಿಠ್ಠಲ ಖಾನಟ್ಟಿ, ಕರೆಪ್ಪ ದೂಳಪ್ಪನವರ, ಗಣೇಶ ಸೆರಗಾರ, ಈರಪ್ಪ ಬಿಸನಕೊಪ್ಪ, ಸಿದ್ದಪ್ಪ ದಾನನನ್ವರ, ಈರಪ್ಪ ಬಿಸಗುಪ್ಪಿ, ರಮೇಶ ಬೇವಿನಕಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

error: Content is protected !!