16/12/2025
IMG-20250702-WA0003

ಕೌಜಲಗಿ-02: ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಖಂಡ ಡಾ. ರಾಜೇಂದ್ರ ಸಣ್ಣಕ್ಕಿ ನೇತೃತ್ವದಲ್ಲಿ ಕೌಜಲಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಈಟಿ, ಉಪಾಧ್ಯಕ್ಷೆಯಾಗಿ ಶಿವಲೀಲಾ ಕುಂದರಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೌಜಲಗಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ತೆರವಾದ ಸ್ಥಾನಗಳಿಗೆ ಯಲ್ಲವ್ವ ರಾಮಣ್ಣ ಈಟಿ, ಅಧ್ಯಕ್ಷೆಯಾಗಿ, ಶಿವಲೀಲಾ ಹಣಮಂತ ಕುಂದರಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಗೋಕಾಕ ಜಿಆರ್‌ಬಿಸಿ ಎಇಇ ಶ್ರೀನಿವಾಸ ಬಿರಾದಾರ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.
ಸಭೆಯಲ್ಲಿ ಮುಖಂಡರಾದ ಶಿವಾನಂದ ಲೋಕನ್ನವರ, ಬಸವರಾಜ ಲೋಕನ್ನವರ, ನಿಕಟಪೂರ್ವ ಅಧ್ಯಕ್ಷ ಅಶೋಕ ಉದ್ದಪ್ಪನವರ, ಶಾಂತಪ್ಪ ಹಿರೇ ಮೇತ್ರಿ, ಎಸ್ ಬಿ ಹಳ್ಳೂರ ಎ.ಎಂ. ಮೋಡಿ, ಶ್ರೀಶೈಲ್ ಗಾಣಿಗೇರ, ನೀಲಪ್ಪ ಕೇವಟಿ, ರಾಯಪ್ಪ ಬಳೋಲದಾರ, ಮಹೇಶ ಪಟ್ಟಣಶೆಟ್ಟಿ, ಮಂಜುನಾಥ ಸಣ್ಣಕ್ಕಿ, ಹಾಸಿಮ ನಗಾರ್ಚಿ, ಶಂಕರ ಜೊತೆನ್ನವರ, ಯಲ್ಲಪ್ಪ ಸುನ್ನಾಳ, ಅಕ್ಬರ್ ಮುಲ್ತಾನಿ, ರಮೇಶ ಮಾದರ, ಸತ್ಯಪ್ಪ ಕರವಾಡಿ, ಕೌಜಲಗಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಇಟ್ಟಗೌಡರ, ಗ್ರಾಪಂ ಸರ್ವ ಸದಸ್ಯರು, ಮುಖಂಡರು, ಗ್ರಾಮಸ್ಥರಿದ್ದರು ಕೌಜಲಗಿ ಗ್ರಾಮ ಪಂಚಾಯತಿಯ ನೂತನವಾಗಿ ಆಯ್ಕೆಯಾದ ಅಧ್ಯಕ್ಷ- ಉಪಾಧ್ಯಕ್ಷರನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿದರು.

error: Content is protected !!