29/01/2026
IMG-20250628-WA0024

ಬೆಳಗಾವಿ-28:  ಹಿರಿಯ ಪತ್ರಿಕಾ  ಛಾಯಾಚಿತ್ರಗಾರ ಅರುಣ ಯಳ್ಳೂರಕರ ಅವರು, ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿಗೆ ಭಾಜನರಾದರು.

IMG 20250628 WA0022 - IMG 20250628 WA0022
ಮಾದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಲ್ಲಿಸಿದ ಅಭೂತಪೂರ್ವ ಸೇವೆ ಪರಿಗಣಿಸಿ, ಕರ್ನಾಟಕ ವಿಡಿಯೊ ಮತ್ತು ಫೊಟೊ ಅಸೋಸಿಯೇಷನ್ ಮತ್ತು ಬೈಸೇಲ್ ಇಂಟ್ರ್ಯಾಕ್ಷನ್ ಪ್ರೈವೇಟ್ ಲಿಮಿಟೆಡ್ ಸಹಯೊಗದೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೊಜಿಸಿದ್ದ ಫೋಟೊ ಟುಡೇ ವಸ್ತುಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ ಪೋಟೊ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷ ಕಿರಣ ಬಾಕಳೆ ಇದ್ದರು.

ಅರುಣ ಯಳ್ಳೂರಕರ ಅವರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಬೆಳಗಾವಿ ಮಾಧ್ಯಮ ಮಿತ್ರರು, ಛಾಯಾಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!