09/12/2025
IMG-20250624-WA0000

ಬೆಳಗಾವಿ-24: ರಾಜ್ಯದಲ್ಲಿ ವಿವಿಧ ಕಡೆ ಬೆಳ್ಳಂ ಬೆಳಗ್ಗೆ ಭ್ರಷ್ಟ್ರರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದರೆ, ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಳಗಾವಿ, ಬೆಂಗಳೂರು, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದಾಳಿ ನಡೆಸಿ ಭ್ರಷ್ಟರ ಬೇಟೆ ಆಡುವ ಮೂಲಕ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದಾಳಿ ವೇಳೆ ಸಿಕ್ಕ ಸಂಪತ್ತು ವಶಕ್ಕೆ ಪಡೆದಿದ್ದಾರೆ.‌
ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿಯಾಗಿದ್ದು, ದಾಳಿ ವೇಳೆ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಒಂದೂವರೆ ಲಕ್ಷ ನಗದು ಪತ್ತೆಯಾಗಿದೆ.
ಮುಖ್ಯ ಇಂಜಿನಿಯರ್ ಅಶೋಕ ವಾಸನದ್ ಅವರ ಬೆಳಗಾವಿಯ ರಾಮತೀರ್ಥ‌ನಗರದಲ್ಲಿರುವ ಮನೆ ಹಾಗೂ ಧಾರವಾಡ ಕಚೇರಿ ಮೇಲೆ‌ ಏಕಕಾಲಕ್ಕೆ ದಾಳಿ ಮಾಡಲಾಗಿದೆ.‌ ಅಶೋಕ ವಸಂದ್ ಕೆಎ‌ನ್‌ಎನ್ಎಲ್ ಧಾರವಾಡ ವಿಭಾಗದ ಮುಖ್ಯ ಇಂಜಿನಿಯರ್ ಆಗಿದ್ದಾರೆ. ಧಾರವಾಡ ‌ಲೋಲಾಯುಕ್ತ ಅಧಿಕಾರಿಗಳಿಂದ ಬೆಳಗಾವಿಯಲ್ಲಿ ಶೋಧಕಾರ್ಯ ನಡೆಸಲಾಗಿದೆ.

error: Content is protected !!