ಬೆಳಗಾವಿ-24: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಪಂ ವ್ಯಾಪ್ತಿಯಲ್ಲಿ ಬರುವ ಮುಚ್ಚಂಡಿ ಗ್ರಾಮದಲ್ಲಿ ವಿಶೇಷ ಪ್ರಯತ್ನದ ಫಲವಾಗಿ 1.75 ಕೋಟಿ ರೂ. ಅನುದಾನದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದ ಕಾಮಗಾರಿಯನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಮುಚ್ಚಂಡಿ ಗ್ರಾಮದಲ್ಲಿ 1.75 ಕೋಟಿ ರೂಪಾಯಿ ಅನುದಾನದ ಅಡಿಯಲ್ಲಿ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪ ನಿಮಿರ್ಸಲಾಗುತ್ತಿದೆ. ಈ ಕಾಮಗಾರಿ ಮುಗಿದ ನಂತರ ಇಲ್ಲಿನ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಅನಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಕಾಮಗಾರಿ ವೀಕ್ಷಣೆ ಮಾಡಲೆಂದು ಮುಚ್ಚಂಡಿ ಗ್ರಾಮಕ್ಕೆ ಆಗಮಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ನೋಡಿದ ಉದ್ಯೋಗ ಖಾತ್ರಿ ಯೋಜೆನಯಲ್ಲಿ ಕೆಲಸ ಮಾಡುವ ಮಹಿಳೆಯರು ಸಂಸದೆಗೆ ಹೂಗುಚ್ಚ ನೀಡಿ ಸನ್ಮಾನಿಸಿದರು. ಅಲ್ಲದೇ ಸಂಸದೆ ಅಭಿವೃದ್ದಿ ಕಾರ್ಯ ಮಾಡುತ್ತಿರುದನ್ನು ನೋಡಿದ ಮಹಿಳೆಯರು ಎಂಪಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಪ್ಪ ಪಾಟೀಲ, ಗ್ರಾಪಂ ಅಧ್ಯಕ್ಷ ಸಂದೀಪ ಜಕ್ಕಾಣೆ, ಗಜಾನನ ವರಪೆ, ಬಾಬು ಮ್ಯಾಗಿನಮನೆ, ವಿನೋದ ಕುಳಜಿಗೌಡಾ, ಅರವಿಂದ ಬಾತ್ಕಂಡೆ ಸೇರಿದಂತೆ ಮುಚ್ಚಂಡಿ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
