11/12/2025
IMG-20250622-WA0000

ಬೆಳಗಾವಿ-22:ಬೆಳಗಾವಿ ಸಾಂಬ್ರಾವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರುಗಳಿಗೆ ಮುರುಘೇಂದ್ರ ಗೌಡ ಪಾಟೀಲ್ ಫೌಂಡೇಶನ್ ವತಿಯಿಂದ ಸನ್ಮಾನ

ಕೇಂದ್ರ ಸರ್ಕಾರದ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ಸಲಹಾ ಸಮಿತಿಗೆ ನೂತನವಾಗಿ ಆಯ್ಕೆಯಾದ ರಾಜು ದೇಸಾಯಿ ,ರಾಹುಲ್ ಮಚ್ಡಂಡಿ, ಹಣಮಂತ ಕಾಗಲ್ಕರ ವಿಜಯ ಬಾದ್ರಾ, ನಾಲ್ಕು ಜನ ಸದಸ್ಯರುಗಳಿಗೆ ಮುರುಘೇಂದ್ರ ಗೌಡ ಎಸ್ ಪಾಟೀಲ್ ಫೌಂಡೇಶನ್ ವತಿಯಿಂದ ಜನಸಂಪರ್ಕ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುರುಘೇಂದ್ರ ಗೌಡ ಪಾಟೀಲ್ ಅವರು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ನಿರ್ದೇಶನದಂತೆ ನಾಲ್ಕು ಸದಸ್ಯರುಗಳನ್ನಾಗಿ ಸಲಹಾ ಸಮಿತಿಗೆ ಸೇರಿಸಲಾಗಿದ್ದು ಅದರಂತೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಹಾಗೂ ಬೆಳಗಾವಿ ಜನತೆಯ ಸಲಹೆ ಸೂಚನೆಗಳನ್ನು ಸಮಿತಿಯಲ್ಲಿ ಮಂಡಿಸಿ ಸಾಂಬ್ರಾವಿಮಾನ ನಿಲ್ದಾಣವನ್ನು ಉನ್ನತ ದರ್ಜೆಗೆ ತೆಗೆದುಕೊಂಡು ಹೋಗಲು ಸಹಕಾರಿಯಾಗಲಿದ್ದಾರೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುರುಘೇಂದ್ರ ಗೌಡ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

error: Content is protected !!