11/12/2025
IMG-20250621-WA0001

ಬೆಳಗಾವಿ-21 : ಅಗತ್ಯವುಳ್ಳವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಕಾರ್ಯದಲ್ಲಿ ಕಳೆದ 14 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡಿರವ ಪ್ರಯತ್ನ ಸ್ವಯಂ ಸೇವಾ ಸಂಸ್ಥೆಯ ವಾರ್ಷಿಕೋತ್ಸವ ಜೂನ್ 22, ಭಾನುವಾರ ನಡೆಯಲಿದೆ.

ಅಂದು ಸಂಜೆ 5.30ಕ್ಕೆ ಆರ್ ಪಿಡಿ ವೃತ್ತದ ಬಳಿ ಇರುವ ಉದಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ರಿಯಲ್ ಎಸ್ಟೇಟ್ ಉದ್ಯಮಿ ಚೈತನ್ಯ ಕುಲಕರ್ಣಿ, ಅಂಗಡಿ ಎಜುಕೇಶನ್ ಫೌಂಡೇಶನ್ ನಿರ್ದೇಶಕಿ ಸ್ಫೂರ್ತಿ ಅಂಗಡಿ ಮತ್ತು ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಯತ್ನ ಅಧ್ಯಕ್ಷೆ ಶಾಂತಾ ಆಚಾರ್ಯ ಮತ್ತು ಕಾರ್ಯದರ್ಶಿ ಗೌರಿ ಸರ್ನೋಬತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!