23/12/2024
IMG-20240122-WA0011

ನೇಸರಗಿ-22: ಭಾರತ ದೇಶದ ಹೆಮ್ಮೆಯ 500 ವರ್ಷಗಳ ಅಯೋಧ್ಯ ರಾಮನ ಭವ್ಯ ಮಂದಿರದ ಕನಸು ಈಡೇರಿದ ಸುದಿನ ಇಂದು ಸೋಮವಾರದಂದು ಈಡೇರುತ್ತಿದ್ದು ಆದರ ಪ್ರಯುಕ್ತ ದೇಶದ್ಯಂತ ಹಬ್ಬ ನೆರವೇರುತ್ತಿರುವ ಸಂದರ್ಭದಲ್ಲಿ ನೇಸರಗಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ ಬೆಳ್ಳಿಗೆ ಮಹಾಪುಜೆ, ಅಭಿಷೇಕ್, ಶ್ರೀ ರಾಮನ ವಿಶೇಷ ಪೂಜೆ, ಮಹಾಪ್ರಸಾದ್ ವ್ಯವಸ್ಥೆ ಗ್ರಾಮದ ಹಿಂದು ಮುಖಂಡರು, ಯುವಕರು, ಗ್ರಾಮಸ್ಥರು ಅಚ್ಚುಕಟ್ಟಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ್ ದೊಡ್ಡಗೌಡರ, ಎಸ್ ಎಮ್. ಪಾಟೀಲ್, ಮಹಾಂತೇಶ್ ಕೂಲಿನವರ, ಗ್ರಾ ಪಂ ಅಧ್ಯಕ್ಷ ನಿಂಗಪ್ಪಾ ಮಾಳನವರ, ಮಲ್ಲಿಕಾರ್ಜುನ ಸೋಮಣ್ಣವರ, ಸುರೇಶ ಅಗಶಿಮನಿ, ಸುಕಾಲಯ್ಯ್ ಚರಂತಿಮಠ, ಬಸಪ್ಪ ಕಗ್ಗನಗ್ಗಿ, ಸಂಗಪ್ಪ ಗುಜನಟ್ಟಿ, ಸಿದ್ದಯ್ಯ ಚರಂತಿಮಠ,ಸೋಮನಗೌಡ ಪಾಟೀಲ್,ವಿಷ್ಣು ಮುಲಿಮನಿ, ತೇಜಪ್ಪಗೌಡ ಪಾಟೀಲ್, ವೀರಭದ್ರ ಚೋಭಾರಿ ಸೇರಿದಂತೆ ಗ್ರಾಮದ ಮುಖಂಡರು, ಹಿಂದೂ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!