29/01/2026
IMG_20250518_200923

ಹುಬ್ಬಳ್ಳಿ -18:ಮಿರಜ್‌ನಿಂದ ಕ್ಯಾಸಲ್ ರಾಕ್‌ವರೆಗೆ ಸಂಚರಿಸುವ ರೈಲು ಸಂಖ್ಯೆ 17333ರ ಆಗಮನ ಮತ್ತು ನಿರ್ಗಮನದ ಸಮಯವನ್ನು ಸುಳೇಭಾವಿ ಮತ್ತು ತಿನೈ ಘಾಟ್ ನಿಲ್ದಾಣಗಳ ನಡುವೆ ಮೇ 19, 2025 ರಿಂದ ಜಾರಿಗೆ ಬರುವಂತೆ ನೈಋತ್ಯ ರೈಲ್ವೆ ಪರಿಷ್ಕರಿಸಿದೆ.

ಈ ರೈಲು ಎಂದಿನಂತೆ ಮಿರಜ್‌ನಿಂದ ಬೆಳಿಗ್ಗೆ 11:55ಕ್ಕೆ ಹೊರಡಲಿದ್ದು, ಸುಳಧಾಳ ನಿಲ್ದಾಣದವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಇನ್ನು ಮುಂದೆ ಸುಳೇಭಾವಿಗೆ 14:16 ಗಂಟೆಗೆ ಆಗಮಿಸಿ, 14:17 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 14:45/14:46 ಗಂಟೆ), ಸಾಂಬರೆಗೆ 14:26 ಗಂಟೆಗೆ ಆಗಮಿಸಿ, 14:27 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 14:55/14:56 ಗಂಟೆ), ಬೆಳಗಾವಿಗೆ 14:40 ಗಂಟೆಗೆ ಆಗಮಿಸಿ, 14:45 ಗಂಟೆಗೆ (ಮೊದಲಿನ ಸಮಯ 14:59/15:00 ಗಂಟೆ) ಹೊರಡಲಿದೆ, ದೇಸೂರ್‌ಗೆ 14:59 ಗಂಟೆಗೆ ಆಗಮಿಸಿ, 15:00 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 15:14/15:15 ಗಂಟೆ), ಖಾನಾಪುರಕ್ಕೆ 15:20 ಗಂಟೆಗೆ ಆಗಮಿಸಿ, 15:21 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 15:35/15:36 ಗಂಟೆ), ಗುಂಜಿಗೆ 15:36 ಗಂಟೆಗೆ ಆಗಮಿಸಿ, 15:37 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 15:50/15:51 ಗಂಟೆ), ಲೊಂಡಾಗೆ 16:10 ಗಂಟೆಗೆ ಆಗಮಿಸಿ, 16:35 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 16:40/16:45 ಗಂಟೆ) ಮತ್ತು ತಿನೈ ಘಾಟ್‌ಗೆ 16:50 ಗಂಟೆಗೆ ಆಗಮಿಸಿ, 16:51 ಗಂಟೆಗೆ ಹೊರಡಲಿದೆ (ಮೊದಲಿನ ಸಮಯ 17:04/17:06 ಗಂಟೆ).

ಗಮ್ಯಸ್ಥಾನವಾದ ಕ್ಯಾಸಲ್ ರಾಕ್‌ನಲ್ಲಿ ರೈಲು ಬರುವ ಸಮಯವು 17:45 ಗಂಟೆಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

error: Content is protected !!