ಬೆಳಗಾವಿಯ ಪ್ರೊ. ಆರ್. ಎಂ. ಕರಡಿಗುದ್ದಿ ಅವರು ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕೃತ ಭಾಷಾ ತಜ್ಞರಾಗಿ,ಫ. ಗು. ಹಳಕಟ್ಟಿ ಅವರ “ವಚನ ಶಾಸ್ತ್ರ ಸಾರ”,(1967 ರಲ್ಲಿ) ಸಮಗ್ರ ವಚನ ಸಂಪುಟ ಭಾಗ 2 ರಿಂದ 9, ಮತ್ತು ಬಸವೋತ್ತರ ಕಾಲದ ಇನ್ನಿತರ ಶರಣರ ಆಯ್ದ ವಚನಗಳು ಹೀಗೆ ಒಟ್ಟು 18000 ವಚನಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಈ ಕೃತಿಗಳು ಬಸವ ಸಮಿತಿ, ಮತ್ತು ಭಾಲ್ಕಿ ಶ್ರೀ ಮಠದಿಂದ ಪ್ರಕಟವಾಗಿವೆ. ಇತರ 8 ಕೃತಿಗಳನ್ನು ಕನ್ನಡದಿಂದ ಮರಾ ಠಿಗೆ ಅನುವಾದಿಸಿದ್ದಾರೆ. ಕನ್ನಡದಲ್ಲಿ 6 ಸ್ವತಂತ್ರ ಕೃತಿಗಳನ್ನು, ನೂರಾರು ಕನ್ನಡ ಮರಾಠಿ ಲೇಖನಗಳನ್ನು ರಚಿಸಿದ್ದಾರೆ. ಪ್ರಚಾರಪ್ರಿಯರಲ್ಲದ ಇವರು ತಮ್ಮ 88 ರ ಇಳಿವಯಸ್ಸಿನಲ್ಲಿ ಬರವಣಿಗೆಯಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ವಿಷಯಗಳನ್ನು, ಬೆಳಗಾವಿ ಜಿ. ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮೋಹನ್ ಗುಂಡ್ಲುರ್, ಮತ್ತು ಹಿರಿಯ ಸಾಹಿತಿ ಸ. ರಾ. ಸುಳಕೂಡೆ ಅವರೊಂದಿಗೆ ದಾವಣಗೆರೆ ಜಿ. ಹೊನ್ನಾಳಿಯ ಹಿರಿಯ ಸಾಹಿತಿ ಶ್ರೀ. ಯು. ಎನ್. ಸಂಗನಾಳಮಠ ಅವರು ಶ್ರೀ ಕರಡಿಗುದ್ದಿ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಆಗಿ ವಿಚಾರ ವಿನಿಮಯ ಮಾಡಿ ಸಂಗ್ರಹಿಸಿದರು. ತಮ್ಮಷ್ಟಕ್ಕೆ ತಾವು ವಚನ ಸಾಹಿತ್ಯದ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರೊ, ಕರಡಿಗುದ್ದಿ ಅವರಿಗೆ ಸುದೀರ್ಘ ಆಯುರಾರೋಗ್ಯವನ್ನು ದೇವರು ದಯಪಾಲಿಸಲಿ ಎಂದು ನಮ್ಮ ಪತ್ರಿಕಾ ಬಳಗದ ಹಾರೈಕೆ.
