12/12/2025
IMG-20250511-WA0002

ಬೆಳಗಾವಿ-11:ನಾಡಿನ ಜನರ ಕಲ್ಯಾಣಕ್ಕಾಗಿ ಶಾಂತಿಗಾಗಿ ಜನರ ಒಳತಿಗಾಗಿ ಮೇ.12 ರಿಂದ 14ರ ವರೆಗೆ ಮೂರು ದಿನಗಳ ಕಾಲ ಪಾರವಾಡದಲ್ಲಿ ಶತಚಂಡಿ ಯಾಗ ಆಯೋಜಿದಲಾಗಿದೆ ಎಂದು ಸುವರ್ಣ ಧಾಮ ಮಠದ ಶ್ರೀ ಸದ್ಗುರು ಪಾರವಾಡೇಶ್ವರ ಮಹಾರಾಜರು ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶತಚಂಡಿ ಯಾಗ ಉತ್ತರ ಕರ್ನಾಟಕದಲ್ಲಿ ಪಾರವಾಡದ ಸುವರ್ಣ ಧಾಮ ಮಠದಲ್ಲಿ ಮಾಡುತ್ತ ಬಂದಿದ್ದೇವೆ. ನಮ್ಮ ಮಠ ಪಾರಂಪರಿಕ ಮಠವಾಗಿದೆ. ಬಡ ಜನರಿಗಾಗಿ ಕೆಲಸ ಮಾಡುತ್ತದೆ. ಜನಸೇವೆ ಮಾಡುವುದು ನಮ್ಮ‌ ಮಠದ ಉದ್ದೇಶವಾಗಿದೆ. ಬಡವರ ದುಃಖ ದುಮ್ಮಾನಗಳನ್ನು ದೂರ ಮಾಡಿ ಅವರ ಮುಖದಲ್ಲಿ ಸುಖ ಶಾಂತಿ ಬಯಸುವುದನ್ನು ನೋಡುತ್ತದೆ ಎಂದರು.
ಈ ಶತಚಂಡಿ ಯಾಗದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ಶ್ರೀಪಾದ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಶತಚಂಡಿ ಯಾಗದಲ್ಲಿ ವಿವಿಧ ಮಠಾಧೀಶರು, ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೂರು ದಿನಗಳ ಕಾಲ ನಡೆಯಲಿರುವ ಶತಚಂಡಿ ಮಹಾಯಜ್ಞದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣೀತರಾಗಲು ಪಾರವಾಡೇಶ್ವರ ಮಠದ ಶ್ರೀಗಳು ಕೋರಿದ್ದಾರೆ.

error: Content is protected !!