ಬೆಳಗಾವಿ-08: ಚುನಾವಣೆ ಸಂದರ್ಭದಲ್ಲಿ ಸ್ವೀಪ್ ಚಟುವಟಿಕೆ ಹಾಗೂಮತದಾರರ ಸಾಕ್ಷರತಾ ಸಂಘಗಳ ಪಾತ್ರ ಬಹುಮುಖ್ಯವಾಗಿದ್ದು, ಸ್ವೀಪ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡು ಜನ ಸಾಮಾನ್ಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಾದ ಪಿ.ಎಸ್. ವಸ್ತ್ರದ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ರಂದು ಜರುಗಿದ ಸ್ವೀಪ್ ಹಾಗೂ ಮತದಾರರ ಸಾಕ್ಷರತಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿ.ಎಸ್. ವಸ್ತ್ರದ ಅವರು ಜಿಲ್ಲೆಯ ಇ.ಎಲ್.ಸಿ ಸ್ವೀಪ್ ಕಾರ್ಯಚಟುವಟಿಕೆಗಳ ಮಾಹಿತಿ ಪಡೆದು ಅಧಿಕಾರಿಗಳಿಗೆ ಸ್ವೀಪ್ ಎಂದರೇನು? ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಯಾರನ್ನು ಸಂಪರ್ಕಿಸಬೇಕು? ಚುನಾವಣಾ ಆಯೋಗ ಸ್ಥಾಪನೆಯಾದ ವರ್ಷ..? ಚುನಾವಣಾ ಆಯೋಗದ ಆಪ್ ಗಳು ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುವುದರ ಮೂಲಕ ಅಧಿಕಾರಿಗಳ ವಿಷಯ ಸಂಗ್ರಹಣೆ ಬಗ್ಗೆ ತಿಳಿದುಕೊಂಡರು.
ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿ.ಪಂ. ಸಿ.ಇ.ಒ ರಾಹುಲ್ ಶಿಂಧೆ ರವರು ಕಳೆದ ಲೋಕ ಸಭಾ ಚುನಾವಣೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಮತಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ವಿಭಿನ್ನ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನ ಪ್ರಮಾಣ ಅಧಿಕವಾಗಿದೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯವರಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಯೋಜನಾ ನಿರ್ದೇಶಕರಾದ ರವಿ ಎನ್ ಬಂಗಾರೆಪ್ಪನವರ, ಜಿಲ್ಲಾ ಪಿ.ಯು ನೋಡಲ್ ಅಧಿಕಾರಿ ಎಮ್.ಎ.ಮುಲ್ಲಾ, ಡಿ.ಡಿ.ಪಿ.ಐ ಲೀಲಾವತಿ ಹಿರೇಮಠ, ರಾಜ್ಯ ತರಬೇತಿದಾರ ಸೈಯ್ಯದ, ಮದನಬಾವಿ, ವಿಟಿಯು ಸ್ವೀಪ್ ನೋಡಲ್ ಅಧಿಕಾರಿ ಅನೀಲ್ ಪೊಳ, ಆರ್.ಸಿ.ಯು ಸ್ವೀಪ್ ನೋಡಲ್ ಅಧಿಕಾರಿ ಅನೀಲ್ ಪೊಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಸಿ & ಸಿ.ಆರ್.ಸಿ ಸಂಯೋಜನಾಧಿಕಾರಿಗಳು ಹಾಗೂ ಜಿ.ಪಂ. ಎಸ್.ಬಿ.ಎಮ್. ಐ.ಇ.ಸಿ ಸಂಯೋಜಕ ಬಾಹುಬಲಿ ಮೆಳವಂಕಿ ಹಾಗೂ ಜಿ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.
