11/12/2025
IMG-20250417-WA0000

ಮಹಾದೇವಿ ಅಕ್ಕನ ಜೀವನ ಚರಿತ್ರೆ ಮತ್ತು ವಚನ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ಕ್ಷಣ ಕ್ಷಣಕ್ಕೂ ಮಾದರಿ ಯಾಗಿದೆ ಇಂದಿನ ಮಹಿಳೆ ಅಕ್ಕನ ಆದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಅಂದಿನ ಕಠಿಣ ಪರಿಸ್ಥಿಯಲ್ಲಿಯು ಸಮಾಜವನ್ನು ಸಮಾಧಾನಿಯಾಗಿ ಎದುರಿಸಿ ಬಂದ ಎಲ್ಲ ಸಮಸ್ಯೆಗಳನ್ನು ಸವಾಲಾಗಿ ಎದುರಿಸಿ ವೀರ ವಿರಾಗಿಣಿ ಯಾಗಿದ್ದಾಳೆ ಅಲ್ಲಮರ ಅಗ್ನಿ ಪರೀಕ್ಷೆ ಗೆದ್ದು ಮಹಾ ಜ್ಞಾನಿ ಎನಿಸಿಕೊಂಡಿದ್ದಾಳೆ ಶರಣ ಕುಲಕ್ಕೆ ಅನರ್ಘ್ಯ ರತ್ನ ವಾಗಿದ್ದಾಳೆ ಇದಕೆಲ್ಲ ಕಾರಣ ಅವಳ ಆತ್ಮ ವಿಶ್ವಾಸ, ಪರಿಶುಧ್ಧವಾದ ಭಕ್ತಿ, ಒಳಹೋರಗೊಂದಾದ ವಿಚಾರಧಾರೆ ನಿಷ್ಠೆ ದಿಟ್ಟ ನಿಲುವು, ಛಲ ಇದ್ದರೆ ಮಹಿಳೆಯು ಕೂಡಾ ಏನೆಲ್ಲವನ್ನೂ ಸಾಧಿಸ ಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಇಂದಿನ ಮಾನಸಿಕ ಖಿನ್ನತೆಗೆ ಒಳಗಾಗುವ ಮಹಿಳೆಗೆ ಅಕ್ಕನ ವಚನಗಳು ಆತ್ಮ ವಿಶ್ವಾಸ ತುಂಬುವ ಸ್ಪೂರ್ತಿ ಯ ಚಿಲುಮೆಯಾಗಿದ್ದಾವೆ ಎಂದು ಅಕ್ಕನ ಕುರಿತು ಸುನಿತಾ ನಂದೆಣ್ಣವರ ಮಾತನಾಡಿದರು.ಶಮೆ ದಮೆ ಭಕ್ತಿ ಜ್ಞಾನ ವೈರಾಗ್ಯದ ಮೂರ್ತಿಯಾದ ಮಹಾದೇವಿ ಅಕ್ಕ ಇಂದ್ರಿಯಗಳ ನಿಗ್ರಹದಿಂದ ತನ್ನ ಗುರಿ ತಲುಪಿ ಮಹಿಳೆ ಕೂಡಾ ಇಂತಹ ಸಾಧನೆ ಮಾಡಬಲ್ಲಳು ಎಂದು ತೋರಿಸಿ ಕೊಟ್ಟಿದ್ದಾಳೆ ಎಂದು ಶರಣೆ ಶ್ರೀಮತಿ ಘೀವಾರಿ ಹೇಳಿದರು ಶರಣರಾದ ಗುರುಪಾದ ಘೀವಾರಿಯವರು ಅಕ್ಕನ ವಚನವನ್ನು ವಿಶ್ಲೇಷಣೆ ಮಾಡಿದರು, ಶರಣ ಶರಣೆಯರು ಅಕ್ಕ ಮಹಾದೇವಿ ವಚನಗಳನ್ನು ಹಾಡಿದರು ಅಧ್ಯಕ್ಷರು ಎಸ್ ಜೀ ಸಿದ್ನಾಳರ ನುಡಿ ಗಳೊಂದಿಗೆ ಈ ವಾರ ಅಕ್ಕ ಮಹಾದೇವಿಯ ಜಯಂತಿಯ ವಿಶೇಷವಾದ ಸತ್ಸಂಗ ಕಾರ್ಯಕ್ರಮ ಮಂಗಲದೊಂದಿಗೆ ಸಂಪನ್ನವಾಯಿತು. ಶೋಭಾ ಶಿವಳ್ಳಿ ಪ್ರಾರ್ಥನೆ ನಡೆಸಿಕೊಟ್ಟರು, ಶರಣ ಕಟ್ಟಮನಿಯವರು ನಿರೂಪಣೆ ಮಾಡಿದರು ಎಲ್ಲ ಶರಣ ಶರಣೆಯರು ಹಾಜರಿದ್ದರು.

error: Content is protected !!