ಶ್ರೀ.ಕೆ ಮಲ್ಲಪ್ಪ
ಚಲನ ವಲನ ತರಬೇತಿ ಶಿಕ್ಷಕರು
ಮಾಹೇಶ್ವರಿ ಅಂಧ ಮಕ್ಕಳ ಶಾಲೆ ನೆಹರು ನಗರ,ಬೆಳಗಾವಿ
ಇವರಿಗೆ “ಸರಸ್ವತಿ ಸಾಧಕ ಶ್ರೀ ರಾಷ್ಟ್ರಪ್ರಶಸ್ತಿ “2025 ಗೆ ಆಯ್ಕೆಯಾಗಿದ್ದಾರೆ.ಇವರು ಅಂಧ ಮಕ್ಕಳಿಗಾಗಿ 15 ವರ್ಷಗಳಿಂದ ಶಿಕ್ಷಣ ಹಾಗೂ ಚಲನವಲನ ವೃತ್ತಿಯಲ್ಲಿ ಸೇವೆ ಸಲ್ಲಿಸ್ಕೊಂಡು ಬರುತ್ತಿದ್ದಾರೆ.ಅಂಧ ಮಕ್ಕಳು ರಾಷ್ಟ್ರ, ರಾಜ್ಯಮಟ್ಟದ ಈಜು ಸ್ಪರ್ಧೆ ಹಾಗೂ ಚದುರಂಗ ಸ್ಪರ್ಧೆ,ಕ್ರಿಕೆಟ್ ವಿಭಾಗದಲ್ಲಿ ಮಕ್ಕಳಿಗಾಗಿ ಕರೆದುಕೊಂಡು ಹೋಗಿ 150ಕ್ಕಿಂತ ಹೆಚ್ಚು ಪದಕಗಳು ಹಾಗೂ ಟ್ರೋಫಿಗಳನ್ನ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡು ಮಕ್ಕಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ
ಇವರ ಸೇವೆಯನ್ನು ಪರಿಗಣಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆಯ 70ನೇ ವರ್ಷದ ಕನ್ನಡ ನಿತ್ಯೋತ್ಸವದ ಅಂಗವಾಗಿ ನೀಡುವ 2025 ನೇ ಸಾಲಿನ ಸರಸ್ವತಿ ಸಾಧಕ ಶ್ರೀ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು 27.04.2025 ರಂದು ದಾವಣಗೆರೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಂಟಪದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.