10/04/2025
IMG-20250403-WA0000

ಬೈಲಹೊಂಗಲ-3: ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳಿಗೆ ನೀತಿ, ಸೌಹಾರ್ದತೆ, ಪ್ರಾಮಾಣಿಕತೆ, ಗೌರವ, ಸಹಾನುಭೂತಿ, ಮತ್ತು ಜವಾಬ್ದಾರಿಯಂತಹ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಅಂತಹ ಶಿಕ್ಷಣವನ್ನು ಮಕ್ಕಳಿಗೆ ಭೋದಿಸಬೇಕೆಂದು ಬಿ.ಈಡಿ ಪ್ರಶಿಕ್ಷಣಾರ್ಥಿಗಳಿಗೆ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ಕೆ.ಆರ್.ಸಿ.ಈ ಸಂಸ್ಥೆಯ ಎ.ಬಿ‌.ಪಾಟೀಲ‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ಮಾನವ ಹಕ್ಕುಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಅಂಕಗಳ ಗಳಿಕೆಗಾಗಿ ಜ್ಞಾನವನ್ನು ಸಂಪಾದಿಸಯವ ಭೋದನೆಗಿಂತ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಜಾಗೃತಿ, ಮತ್ತು ನೈತಿಕ ಬೋಧನೆಯ ಶಿಕ್ಷಣ ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಹಿತಕರ ಸಂಬಂಧಗಳ ನಿರ್ಮಾಣ ಪರಸ್ಪರ ಗೌರವ, ಸನುಭೂತಿ, ಸಹಕಾರ, ನೆರವು ಮತ್ತು ಶ್ರದ್ಧೆಯೊಂದಿಗೆ ಬದುಕಲು ಪ್ರೇರಣೆ ಹಾಗೂ ಮಾನವೀಯತೆ ಸಹಾಯ ಹಸ್ತವನ್ನು ಚಾಚುವ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಉತ್ತಮ ದಾರಿ ತೋರುವ ಶಿಕ್ಷಕರ ಕಾರ್ಯ ಗೌರವಯುತವಾದದ್ದು.
ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳನ್ನು ಕೇವಲ ವೃತ್ತಿಪರವಾಗಿ ಮಾತ್ರವಲ್ಲ, ಉತ್ತಮ ಮನುಷ್ಯರಾಗಿ ಬೆಳೆಸಲು ಸಹಾಯಕವಾಗುತ್ತದೆ. ಇದನ್ನು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದೆ. ಇದನ್ನೆ ವಿಶ್ವಸಂಸ್ಥೆ 1948ರಲ್ಲಿ ಮಾನವನ ಗೌರವಯುತ ಬದುಕಿಗೆ ನೀಡಿದ 30ಹಕ್ಕುಗಳೆ ಮಾನವಹಕ್ಕುಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ತಲ್ಲೂರ ಮಾತನಾಡಿ, ಸುಶಿಕ್ಷಿತರಿಂದಲೆ ಸಮಾಜದಲ್ಲಿ ವಂಚನೆ, ಸುಲಿಗೆ, ಭ್ರಷ್ಟಾಚಾರ, ಮೋಸ ವಂಚನೆ ಹೆಚ್ಚಾಗಿದ್ದು ಪ್ರಾಮಾಣಿಕತೆ ಕುಂದುತ್ತಿರುವದು ಕಳವಳಕಾರಿಯಾಗಿದೆ. ಶಾಲಾ‌ಹಂತದಲ್ಲಿ‌ ನೈತಿಕ‌ಶಿಕ್ಷಣಕ್ಕೆ ಒತ್ತು ಕೊಡುವ ಕಾಲ ಬಂದಿದೆ ಎಂದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಬಿ.ಎನ್ ಮುದೇನೂರ, ಡಾ.ಶಶಿಕಲಾ‌ ಕರಡಿಗುದ್ದಿ, ಡಾ.ಡಿ.ಎಮ್.ಐಯಾಚಿತ ಇದ್ದರು. ಈ ಸಂದರ್ಭದಲ್ಲಿ ‌
ಎಫ್.ಎಸ್.ಸಿದ್ದನಗೌಡರ ಅವರನ್ನು ಸಂಸ್ಥೆಯ ಪರವಾಗಿ ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಉಪನ್ಯಾಸಕರಾದ ಪಿ.ಬಿ.‌ಹೂಲಿ, ಡಾ.ಭಾರತಿ ಕಾಡೇಶನವರ, ಎನ್.ಸಿ.ಚಿನ್ನಪ್ಪಗೌಡರ, ಎನ್.ಸಿ ಹೋಳಿ, ಷಣ್ಮುಖ‌ ತೊಟಗಿ,ರಾಜು ಬಡಿಗೇರ, ಶ್ರೀಶೈಲ ಪರಂಡೆ ಹಾಗೂ ನೂರಾರು ಪ್ರಶಿಕ್ಷಣಾರ್ಥಿಗಳು ಇದ್ದರು.
ಪ್ರಶಿಕ್ಷಣಾರ್ಥಿ ಮಧು ತಾಲಹಳ್ಳಿ ಪ್ರಾರ್ಥನೆ ಮಾಡಿದರು.
ಸೌಮ್ಯಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಸ್ನೇಹಾ ಭಜಂತ್ರಿ ಸ್ವಾಗತಿಸಿದರು. ಲಕ್ಷ್ಮಿ ಕೊಣ್ಣೂರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!