
*ಸಾಮೂಹಿಕ ಪ್ರಾರ್ಥನೆಯಲ್ಲಿ* *ನೂರಾರು ಮಂದಿ ಭಾಗಿ*
ಮೂಡಲಗಿ-02: ಸೋಮವಾರ ನಡೆದ ಮುಸ್ಲಿಂ ಸಮುದಾಯದವರು ಪಟ್ಟಣದ ಜಾಮಿಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಮುಸ್ಲಿಂ ಸಮುದಾಯದವರು ಕಳೆದ ೩೦ ದಿನಗಳಿಂದ ರಂಜಾನ್ ಹಬ್ಬದ ಪ್ರಯುಕ್ತ ರೋಜಾ ಉಪವಾಸವನ್ನು ಮಾಡುವುದರ ಮೂಲಕ ಪ್ರತಿನಿತ್ಯ ಬೆಳಗ್ಗೆ ಮಧ್ಯಾಹ್ನ ಸಂಜೆ, ರಾತ್ರಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ರೋಜಾ ಕಡೆಯ ದಿನವಾದ ಭಾನುವಾರ ಉಪವಾಸ ಅಂತ್ಯಗೊಳಿಸಿ ಸೋಮವಾರದಂದು ಪಟ್ಟಣದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಸ್ನೇಹಿತರಿಗೆ ನೆಂಟರಿಷ್ಟರಿಗೆ ಪರಸ್ಪರರು ರಂಜಾನ್ ಹಬ್ಬದ ಶುಭಾಶಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಧರ್ಮ ಗುರುಗಳಾದ ಮೌಲಾನಾ ಕೌಸರ ರಜಾ, ಹಾಪಿಜ್ ನಿಜಾಮೊದ್ದಿನ , ಪಯಾಜ್ ರೋಜನಿ , ಬಿ ಟಿ ಟಿ ಕಮೀಟಿ ಪ್ರಭಾರಿ ಅಧ್ಯಕ್ಷ ಮಲೀಕಜಾನ ಕಳ್ಳಿಮನಿ, ಕಾರ್ಯದರ್ಶಿ ಮದಾರ ಮುಗುಟಖಾನ, ಹಸನಸಾಬ್ ಮುಗುಟಖಾನ , ಇಮಾಮಹುಸೇನ ತಾಂಬೋಳಿ , ಇಮಾಮಸಾಹೇಬ ಮುಲ್ಲಾ, ಬಂದೆನಮಾಜ ತಾಂಬೋಳಿ, ಅಮೀರಸಾಬ ಥರಥರಿ, ಅಮೀನಸಾಬ ಡಾಂಗೆ, ಮೀರಾಸಾಬ ಝಾರೆ, ದಾವಲಸಾಬ ಮೋಗಲ್ , ಮೆಹಬೂಬ್ ಲಾಡಲಾನ್, ನಿಜಾಮ್ ಡಾಂಗೆ , ಮೆಹಬೂಬ್ ಥರಥರಿ , ಇಲಿಯಾಸ್ ಡಾಂಗೆ, ಮಕ್ತುಮಸಾಬ ಮೊಗಲ್, ಅಲ್ತಾಫ್ ಲಾಡಖಾನ, ಮೀರಾಸಾಬ ನಿಡಗುಂದಿ, ದಸ್ತಗೀರ ನದಾಫ್ , ಮಲಿಕಸಾಬ್ ಅತ್ತಾರ, ಪಕರುಸಾಬ್ ದಬಾಡಿ, ಇಬ್ರಾಹಿಂ ಅತ್ತಾರ ಸೇರಿದಂತೆ ಇತರರೂ ಉಪಸ್ತಿರಿದ್ದರು