ಬೆಳಗಾವಿ-19: ರಂದು ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿರುವ ಮಂದಿರವನ್ನು ಶುಚಿಗೊಳಿಸುವಂತೆ ಕರೆ ನೀಡಿರುವುದರಿಂದ ಬೆಳಗಾವಿ ಸೇವಾದಳ ಸಂಸ್ಥಾಪಕ, ಅಧ್ಯಕ್ಷ ವೀರೇಶ ಹಿರೇಮಠ ನೇತೃತ್ವದಲ್ಲಿ ಶುಕ್ರವಾರ ಮಾರ್ಕಂಡೇಯ ನದಿಯ ದಡದಲ್ಲಿರುವ ಗಣೇಶ ಮಂದಿರ ಆವರಣದಲ್ಲಿರುವ ಸುಮಾರು ಎರಡೂ ಸಾವಿರ ಹಳೆಯ ದೇವರ ಫೋಟೋಗಳನ್ನು ವಿಧಿವಿಧಾನಗಳ ಮೂಲಕ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿರೇಶ ಹಿರೇಮಠ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 500 ವರ್ಷಗಳಿಂದ ಹಿಂದೂಗಳ ಸಂಕಲ್ಪವಾಗಿರುವ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಅಭಿಮಾನದ ಸಂಗತಿ. ಮನೆಯಲ್ಲಿರುವ ದೇವರ ಫೋಟೋಗಳು ವಿಘ್ನಗೊಂಡಿದ್ದರೆ ಅವುಗಳನ್ನು ಮರ ಗಿಡದ ಕೆಳಗಡೆ ಇಡುವ ಬದಲು ಶಾಸ್ತ್ರೋಪ್ತವಾಗಿ ವಿಧಿವಿಧಾನಗಳ ಮೂಲಕ ವಿಸರ್ಜನೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೀಪಾ ಕಾಂಬಳೆ, ಗುರುರಾಜ ವಾಲಿ, ಪುಂಡಲೀಕ ಪಾವಸೆ, ವಿಜಯಕುಮಾರ ಮೋರೆ, ಕಿರಣ್ ಸೇರಿದಂತೆ ಗಣೇಶ ಮಂದಿರದ ಸದಸ್ಯರು ಉಪಸ್ಥಿತರಿದ್ದರು.