ಬೆಳಗಾವಿ-26-
ಛಲವಾದಿ ಯುವ ಸಂಘಟನೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ
ಸಾಧನೆ ಮಾಡಿರುವವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜ ಸೇವಕ ಆಕಾಶ ಹಲಗೇಕರ ಅವರ ಕಲೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಶ್ರೀ ಅಶೋಕ್ ಛಲವಾದಿ. ಕೆ.ಎ.ಎಸ್, ಶ್ರೀ ಫಕೀರಪ್ಪಾ ಎಚ್ಚ್ ಛಲವಾದಿ. ಎಂಎಲ್ ಎಲ್ ಬಿ, ಕೆ.ಸ.ಇ.ಸ ಹಾಗೂ ಗೌರವ ಅಧ್ಯಕ್ಷರು ಶ್ರೀ ಯಲ್ಲಪ್ಪಾ ಕೋಲಕಾರ. ಶ್ರೀ ಮಹಾಂತೇಶ್ ಮ್ಯಾಗಿನಮಣಿ ಅಧ್ಯಕ್ಷರು. ಹಾಗೂ ಛಲವಾದಿ ಸಮಾಜದ ನಾಯಕರು ಉಪಸ್ಥಿತರಿದ್ದರು. ಛಲವಾದಿ ಯುವ ಸಂಘಟನೆಯು ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದಲ್ಲಿ ಬಡ ಮತ್ತು ಶೋಷಿತರ ಪರವಾಗಿ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಅವರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿರುವ ಸಂಘಟನೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಆಸರೆಯಾಗಿದ್ದರೆ.ಹೀಗೆ ಹತ್ತು ಹಲವು ಸಾಮಾಜಿಕ ಕಾಯಕಗಳನ್ನು ಮಾಡುತ್ತಾ ಬಂದಿರುವ ಸಂಘಟನೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ನೋಂದವರಿಗೆ ಆಸರೆಯಾಗಲಿ ಅಂತ ಆಶಿಸೋಣ.
