ಬೆಳಗಾವಿ-25 ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿಯ ಕಮಕಾರಟ್ಟಿ ಘಾಟ್ ಬಳಿ ಮೂರು ಕೆಎಸ್‌ಆರ್‌ಟಿಸಿ ಬಸ್, ಮೂರು ಲಾರಿ, ಒಂದು ಬೈಕ್ ಹಾಗೂ ಕಂಟೇನರ್ ವಾಹನದ ನಡುವೆ ಭೀಕರ ಅಪಘಾತ ಸಂಬಂಧಿಸಿದ್ದು ಬಸ್ ಪ್ರಯಾಣಿಕರಿಗೆ ಸಣ್ಣಪುಟ ಗಾಯವಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನಡೆದ ಘಟನೆ ನಡೆದಿದೆ. ಮೊದಲು ನಿಯಂತ್ರಣ ತಪ್ಪಿ ಪಲ್ಟಿಯಾದ ಕಂಟೇನರ್ ವಾಹನ. ಕಂಟೇನರ್ ವಾಹನಕ್ಕೆ ಡಿಕ್ಕಿ ಆಗುತ್ತೆ ಅಂತಾ ಬಸ್ ನಿಲ್ಲಿಸಿದ ಚಾಲಕ. ಬಸ್ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತ ತಪ್ಪಿಸಲು ಹೋಗಿ ಬೈಕ್ ಗೆ ಗುದ್ದಿದ ರಾಜಹಂಸ ಬಸ್. ಮುಂದೆ ಅಪಘಾತ ಆಗ್ತಿದ್ದನ್ನ ಕಂಡು ಪಕ್ಕಕ್ಕೆ ತೆಗೆದುಕೊಳ್ಳಲು ಹೋದ ಗ್ಯಾಸ್ ಸಾಗಿಸುತ್ತಿದ್ದ ಲಾರಿಗೆ ಹಾಗೂ ಗೂಡ್ಸ್ ಲಾರಿಗೆ ಡಿಕ್ಕಿಯಾದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್ ಬಳಿಕ ರಾಜಹಂಸ ಬಸ್ ನ ಚಕ್ರದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಬೈಕ್ ಸವಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹೆಲ್ಮೆಟ್ ಹಾಕಿದ್ರಿಂದ ಬಸ್ ನ ಚಕ್ರದಲ್ಲಿ ಸಿಲುಕಿದ್ರೂ ಬಚಾವ್ ಆಗಿ ಬಂದೇ ಎಂದ ಬೈಕ್ ಸವಾರ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಒಂದು ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಅಪಘಾತವಾದ ವಾಹನ ತೆರವು ಮಾಡಿದ್ದಾರೆ.
ಕ್ರೇನ್ ಮೂಲಕ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡ್ತಿರುವ ಪೊಲೀಸರು ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತವಾಗಿದೆ.
