11/12/2025
IMG-20250302-WA0009

ಮೂಡಲಗಿ-02:ಮೂಡಲಗಿ ಭಾರತೀಯ ಸೇನೆಯಲ್ಲಿ ಸುಧೀರ್ಘ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಸೋಮವಾರ ಸ್ವ ಗ್ರಾಮ ಮೂಡಲಗಿ – ಶಿವಾಪೂರ ಗ್ರಾಮಕ್ಕೆ ಆಗಮಿಸುತ್ತಿರುವ ಸೇವಾ ನಿವೃತ್ತ ಯೋಧ ಗಣಪತಿ ಮಲ್ಲಪ್ಪ ರಡರಟ್ಟಿ ಅವರಿಗೆ ಸ್ವಾಗತ ಸಮಾರಂಭ ಮಾ. 3 ರಂದು ಮುಂಜಾನೆ 11 ಘಂಟೆಗೆ ಮೂಡಲಗಿ – ಶಿವಾಪೂರ ಗ್ರಾಮಸ್ಥರಿಂದ ಜರುಗಲಿದೆ.

ಮೂಡಲಗಿ ಪೊಲೀಸ್, ಠಾಣೆ ಹತ್ತಿರದಿಂದ ತೆರೆದ ಅಲಂಕೃತ ವಾಹನದಲ್ಲಿ ಮೆರವಣಿಗೆ ಜರುಗುವುದು, ಮೆರವಣಿಗೆಯು ಪಟ್ಟಣದ ಕಲ್ಲೇಶ್ವರ ವೃತ್ತ ಸಂಗಪ್ಪಣ್ಣ ವೃತ್ರ ಶ್ರೀ ಶಿವಬೋಧರಂಗ ಮಠದ ರಸ್ತೆ ಮೂಲಕ ರಂಗಾಪೂರ ರಸ್ತೆಯ ರೇಣುಕಾ ನಗರದಲ್ಲಿರುವ ಸೇವಾ ನಿವೃತ್ತ ಯೋಧ ಗಣಪತಿ ಮಲ್ಲಪ್ಪ ರಡರಟ್ಟಿ ಮನೆ ಹತ್ತಿರ ಸಮಾವೇಶಗೋಳ್ಳುವುದು. ಮೆರವಣಿಗೆಯಲ್ಲಿ ಸೈನಿಕ ತರಬೇತಿ ಕೇಂದ್ರ ವಿದ್ಯಾರ್ಥಿಗಳು ಮಾಜಿ ಸೈನಿಕರು ಹಾಗೂ ಅಭಿಮಾನಿಗಳ ಭಾಗವಹಿಸುವರು.

ಸ್ವಾಗತ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮೂಡಲಗಿಯ ಶ್ರೀ ದತ್ತಾತ್ರಯ ಮಹಾಸ್ವಾಮಿಜಿ, ಶಿವಾಪೂರದ ಅಡವಿಸಿದ್ರಾಮ ಮಹಾಸ್ವಾಮಿಜಿ ಮುನ್ಯಾಳ – ರಂಗಾಪೂರದ ಡಾ : ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಶಿರೋಳದ ಬಸವರಾಜ ಮಹಾಲಿಂಗಪೂರ ವಹಿಸುವರು, ಬಮ್ಯುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ . ಜಾರಕಿಹೊಳಿ ಉದ್ಘಾಟಿಸುವರು, ಶಿವಾಪೂರ ಗ್ರಾ.ಪಂ ಅಧ್ಯಕ್ಷ ಯಮನಪ್ಪ ಹಾಗಿಡ್ಡವಗೋಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜೀತ ಮನ್ನಿಕೇರಿ, ತಾ.ಪಂ ಇಒ ಎಫ್.ಜಿ. ಚಿನನ್ನವರ ಸಿಪಿಐ ಶ್ರೀಶೈಲ್ ಬ್ಯಾಕೂಡ್ , ಪಿ ಎಸ್ ಐಗಳಾದ ರಾಜು ಪೂಜಾರಿ, ಸಾಹಿತಿ ಬಾಲಶೇಖರ ಬಂದಿ, ಗ್ರಾ.ಪಂ ಉಪಾಧ್ಯಕ್ಷ ಮಲ್ಲಪ್ಪ ಮ.ಜುಂಜರವಾಡ, ಮೂಡಲಗಿ ಪುರಸಭೆ ಅಧ್ಯಕ್ಷ ಖುಷಾ೯ದ ನದಾಪ , ಉಪಾಧ್ಯಕ್ಷ ಭೀಮವ್ವ ಪೂಜೇರಿ, ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಲಕ್ಷ್ಮಣ ಅಡಿಹುಡಿ, ಕರುನಾಡು ಸೈನಿಕ ತರಬೇತಿ ಕೇಂದ್ರದ ಸವಿತಾ ತುಕ್ಕನ್ನವರ, ಬೆಳಗಾವಿ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಗದಯ್ಯ ಪೂಜೇರಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ತಾಲೂಕದ ಗೌರವಾಧ್ಯಕ್ಷ ಶಿವಪ್ಪ ಮಾಲಗಾರ, ಅಧ್ಯಕ್ಷ ಚರಂತಯ್ಯಾ ಮಳ್ಳಿಮಠ ಭಾಗವಹಿಸುವರು.

error: Content is protected !!