12/12/2025
IMG-20250302-WA0010

ಬೆಳಗಾವಿ-02:ಖಾನಾಪುರ ತಾಲೂಕಿನ ಮಲಪ್ರಭಾ ನದಿ ದಡದಲ್ಲಿರುವ ಅಸೋಗಾ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಗಿಡ, ಮರಗಳ ಕೆಳಗಡೆ ಇಟ್ಟಿದ್ದ ದೇವರ ಫೋಟೋ ಸಂಗ್ರಹಿಸಿ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಬಸಯ್ಯ ಹಿರೇಮಠ ಅವರು, ರಾಮಲಿಂಗೇಶ್ವರ ದೇವಸ್ಥಾನಕ್ಕೆ ತನ್ನದೆಯಾದ ಇತಿಹಾಸ ಇದೆ. ಭಕ್ತರು ಇಲ್ಲಿಗೆ ಬಂದು ತಮ್ಮ ದೇವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ‌. ಮನೆಯಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗೆ ಇಡುವ ಬದಲು ಅವುಗಳನ್ನು ಶಾಸ್ರೋಪ್ತವಾಗಿ ವಿಸರ್ಜನೆ ಮಾಡಬೇಕು. ದೇವರ ಫೋಟೋಗಳಿಗೂ ಜೀವ ಇರುತ್ತವೆ ಎಂಬ ಕಲ್ಪನೆ ನಮ್ಮ ಹಿಂದೂ ಪುರಾಣಗಳಲ್ಲಿ ಹೇಳುತ್ತಾರೆ‌. ಎಲ್ಲರೂ ಇದನ್ನು ತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು‌.
ದೇವರು ನಾನಾ ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷನಾಗುತ್ತಾನೆ. ಸಂಭ್ರದಿಂದ ದೇವಸ್ಥಾನ, ಜಾತ್ರೆಗಳಲ್ಲಿ ದೇವರ ಫೋಟೋ ಹಣ ಕೊಟ್ಟು ಖರೀದಿ ಮಾಡಿ ಮನೆಯಲ್ಲಿ ಪೂಜೆ ಸಲ್ಲಿಸುವ ನಾವುಗಳು ಅದು ಮುಕ್ಕಾದಾಗ ಅದನ್ನು ಗಿಡ, ಮರಗಳ ಕೆಳಗಡೆ ಇಡುವುದರಿಂದ ನಮ್ಮ ಸಂಪ್ರದಾಯವನ್ನು ನಾವೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ದೇವರ ಫೋಟೋಗಳ ವಿಸರ್ಜನೆಗಾಗಿ ನಮ್ಮಗೆ ಸಂಪರ್ಕ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವು ಬುಡರಕಟ್ಟಿ, ಮಕರಂದ ಲೋಕಂಡೆ, ಸುದೇಶ ತೋರವಾಟ, ಜಯಂತ ಪಾಟೀಲ್, ಮನೋಜ್ ಕೊಲ್ಸೆಕರ್, ಗೌರೀಶ್ ವೀರೇಶ್ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!