23/12/2024
IMG-20240118-WA0001

ನೇಸರಗಿ-18:ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಮಯದಲ್ಲಿ ನಮಗೆ ಬೆನ್ನುಬಾದ ಗುರುಗಳ ಸೇವೆ,ನಮ್ಮ ಶಿಕ್ಷಣಕ್ಕೆ ಸಹಕರಿಸಿದ ವ್ಯಕ್ತಿಗಳ ಸ್ಮರಣೆ ಅತೀ ಮುಖ್ಯವಾದದು ಎಂದು ನೇಸರಗಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯರಾದ ಡಾ.ಪಕ್ಕೀರಗೌಡ ದುಂ.ಪಾಟೀಲ ಹೇಳಿದರು.
ಅವರು ಬುಧವಾರದಂದು ನಡೆದ 2023-24 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್ ಸ್ಕೌಟ್,ರೆಡ್ ಕ್ರಾಸ್ ಘಟಕ ಚಟುವಟಿಕೆ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ದೇಸಿಸಿ ಮಾತನಾಡಿ ನಾನು ಅತೀ ಬಡತನದಿಂದ ಈ ಹಂತಕ್ಕೆ ಬಂದ ವ್ಯಕ್ತಿ ಇದ್ದಕ್ಕೆ ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯರಾದ ಎನ್ ಎಮ್.ಕುದರಿಮಠ ಅವರೇ ಪ್ರೇರಣೆ ಕಾರಣ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ನಿಂಗಪ್ಪ ರು.ಮಾಳಣ್ಣವರ, ಗ್ರಾ. ಪಂ. ಸದಸ್ಯ. ನಿಂಗಪ್ಪ ತಳವಾರ,ಪ್ರೊಪೆಸರಗಳಾದ,ಡಾ.ಎನ್ ಟಿ.ರೇಣಕಿಗೌಡರ,,ಪ್ರೊ.ಶ್ರೀದೇವಿ ನರವಾಡೆ,ಪ್ರೊ.ವಿನಯ ಕುಲಕರ್ಣಿ,ಪ್ರೊ.ಎಂ ಬಿ.ಕೊಪ್ಪದ,ಪ್ರೊ.ಪೃಥ್ವಿರಾಜ್‌ ಎನ್,ಪ್ರೊ. ಮಲ್ಲಿಕಾರ್ಜುನ ಕುಂಬಾರ,ಪ್ರೊ.ನರೇಂದ್ರ, ಪ್ರೊ.ಶಿವಾನಂದ ಹಿರೇಮಠ,ಪ್ರೊ.ರವೀಂದ್ರ ಪೂಜೇರಿ ,ಬಿ ಎಸ್ ಹುಡೇದ,ಕಾಲೇಜಿನ ಭೋಧಕ/ಭೋಧಕೇತರ ಸಿಬ್ಬಂದಿ, ಕಾಲೇಜ ಅಭಿವೃದ್ಧಿ ಸಮೀತಿ ಸದಸ್ಯರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

error: Content is protected !!