23/12/2024
WhatsApp Image 2024-01-16 at 7.11.57 PM

ಬೆಳಗಾವಿ-18: ಮಸ್ಕತ್ ರಾಷ್ಟ್ರದ ಚಾಲುಕ್ಯ ಕೂಟದ ವತಿಯಿಂದ ಜನೇವರಿ ೧೨ರಂದು ಉತ್ತರ ಕರ್ನಾಟಕ ಜನಪದ ಜಾತ್ರೆಯಲ್ಲಿ ಜನಪದ ವಿದ್ವಾಂಸ ಶಂಭು ಬಳಿಗಾರ, ಜಾನಪದ ಕಲಾವಿದ ಪೊಲೀಸ್ ಅಧಿಕಾರಿ ಜ್ಯೋತಿರ್ಲಿಂಗ ಹೊನಕಟ್ಟಿ ಇವರು ವಿಶೇಷ ಕಾರ‍್ಯಕ್ರಮ ನೀಡಿ ಮೆರಗು ತಂದರು.
ಶಂಭು ಬಳಿಗಾರ ಇವರು ಜಾನಪದ ಜೀವನದ ವಿವಿಧ ಮಜಲುಗಳನ್ನು ಸವಿಸ್ತಾರವಾಗಿ ವಿವರಿಸಿದರು. ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಇವರು ಜನಪದ ಸೊಗಡಿನ ವಿವಿಧ ಮುಖಗಳ ಕುರಿತು ವಿಶೇಷ ಉಪನ್ಯಾಸ ನೀಡಿ ರಂಜಿಸಿದರು.
ಈ ಇಬ್ಬರು ಕಲಾವಿದರುಗಳಿಂದ ವಿದೇಶಿ ನೆಲದಲ್ಲಿ ಉತ್ತರ ಕರ್ನಾಟಕ ಜನಪದ ಹಾಗೂ ಸೊಗಡು ಕುರಿತು ಬೆಳಕು ಚೆಲ್ಲಲಾಯಿತು. ಇಲ್ಲಿಯ ಸಂಸ್ಕೃತಿ ಕುರಿತು ಅನಾವರಣಗೊಳಿಸಲಾಯಿತು.
ಜ್ಯೋತಿರ್ಲಿಂಗ ಹೊನಕಟ್ಟಿ ಇವರು ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರು ಪೊಲೀಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದರೂ ಜನಪದ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

error: Content is protected !!