ಬೆಳಗಾವಿ– 17 : ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಪ್ರತಿ ವರ್ಷದಂತೆ ಈ ವರ್ಷವೂ ವೈಯಕ್ತಿಕ ಹಾಗೂ ಸಾಮೂಹಿಕ ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮಂಗಳವಾರ ದಿ. 23/1/2024 ರಂದು 16 ವರ್ಷದ ಒಳಗಿನವರಿಗೆ ವೈಯಕ್ತಿಕ ಹಾಗೂ ಸಾಮೂಹಿಕ, ಬುಧವಾರ ದಿ. 24/1/2024 ರಂದು 16 ವರ್ಷ ಮೇಲ್ಪಟ್ಟವರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳನ್ನು ಇಡಲಾಗಿದೆ. ಸ್ಪರ್ಧೆಯಲ್ಲಿ ಬೇರೆ ಬೇರೆ ಭಾರತೀಯ ಭಾಷೆಯ ಎರಡು ಧೇಶಭಕ್ತಿ ಗೀತೆ ಹಾಡಬೇಕು. ವಿಜೇತರಿಗೆ 25000 ರೂ ನಗದು ಹಾಗೂ ಆಕರ್ಷಕ ಟ್ರೋಫಿ ಕೊಡಲಾಗುವುದು, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ವಿದ್ಯಾರ್ಥಿಗಳು, ಮಹಿಳಾ ಮಂಡಳದವರು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಶ್ರೀಮತಿ ಜ್ಯೋತಿ ಮಿರಜಕರ(97317-97482, ಎಸ್. ಎನ್. ಅಕ್ಕಿ (95913-96090) ಎ. ಎ. ಸನದಿ (96861-27134) ಇವರನ್ನು ಸಂಪರ್ಕಿಸಬಹುದು.