05/01/2025
IMG-20250102-WA0002

ಬೆಳಗಾವಿ-೦೨ : ರಂಗಸೃಷ್ಟಿ ತಂಡದ ಕಲಾವಿದರಿಂದ ಬರುವ ಶನಿವಾರ ೪ ರಂದು ಪ್ರಿಂಟಿಂಗ್ ಮಶಿನ್ ನಾಟಕ ಪ್ರದರ್ಶನವಾಗಲಿದೆ. ನೆಹರು ನಗರದ ಕನ್ನಡಭವನದಲ್ಲಿ ಅಂದು ಸಂಜೆ 6.30ರಿಂದ ನಾಟಕ ನಡೆಯಲಿದೆ.

ಶಿರೀಶ್ ಜೋಶಿ ರಚಿಸಿ, ನಿರ್ದೇಶಿಸಿರುವ ನಾಟಕಕ್ಕೆ ಮಂಜುಳಾ ಜೋಶಿ ಸಂಗೀತ ನಿಡಲಿದ್ದು, ಶರಣ ಗೌಡ ಪಾಟೀಲ ರಂಗ ವಿನ್ಯಾಸ, ನಾರಾಯಣ ಗಣಾಚಾರಿ ತಬಲಾ ನೀಡಲಿದ್ದಾರೆ. ಡಾ.ರಾಮಕೃಷ್ಣ ಮರಾಠೆ, ಶೈಲಜಾ ಭಿಂಗೆ, ಶರಣಯ್ಯ ಮಠಪತಿ, ಶಾರದಾ ಭೋಜ ನೆರವು ನೀಡಿದ್ದಾರೆ.

ಶಾಂತಾ ಆಚಾರ್ಯ, ವಿಶ್ವನಾಥ ದೇಸಾಯಿ, ರವಿರಾಜ ಭಟ್, ವಾಮನ ಮಳಗಿ, ಶೃದ್ಧಾ ಪಾಟೀಲ, ವಿನೋದ ಸಪ್ಪಣ್ಣವರ್, ವಿಠ್ಠಲ ಅಸೋದೆ, ಜಯಶ್ರೀ ಕ್ಷೀರಸಾಗರ, ರಮೇಶ ಮಿರ್ಜಿ, ಅರವಿಂದ ಪಾಟೀಲ, ರಾಜಕುಮಾರ ಕುಂಂಬಾರ ಪಾತ್ರ ನಿರ್ವಹಿಸಲಿದ್ದಾರೆ.

ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಹಾಗೂ ಕನ್ನಡ ಭವನದ ಸದಸ್ಯರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!