ಬೆಳಗಾವಿ-೦೧:ಶ್ರೀ ವೇಣು ಗ್ರಾಮ ಪುರೋಹಿತ ಸಂಘಟನೆಸಂಘಟನೆ ಬೆಳಗಾವಿ ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ಜನವರಿ 3 4 5 ಈ ಮೂರು ದಿನಗಳ ಕಾಲ ” *ಲೋಕಕಲ್ಯಾಣಾರ್ಥವಾಗಿ ಶ್ರೀ ಸೂರ್ಯ ಪಂಚಾಯತನ ಜಪ ಹೋಮ ಅನುಷ್ಠಾನ ಆಯೋಜಿಸಲಾಗಿದೆ”.* ಶುಕ್ರವಾರ ದಿನಾಂಕ 3 ರಂದು ಸಂಜೆ 5:00ಕ್ಕೆ ಸರಿಯಾಗಿ ಶ್ರೀ ಮುರಳೀಧರ ಮಂದಿರ ಶಹಾಪೂರದಿಂದ ಶೋಭಾ ಯಾತ್ರೆ ಪ್ರಾರಂಭವಾಗಿ ಶ್ರೀ ಬನಶಂಕರಿ ದೇವಸ್ಥಾನ ಸಪಾರಗಲ್ಲಿ ವಡಗಾವಿ ಇಲ್ಲಿ ಮುಕ್ತಾಯವಾಗುವುದು. ದಿನಾಂಕ 4 ಹಾಗೂ 5ನೇ ತಾರೀಕು ಜಪ ಹೋಮ ಅನುಷ್ಠಾನ ಕಾರ್ಯಕ್ರಮ ಇರುತ್ತದೆ. ಸಮಸ್ತ ಬೆಳಗಾವಿಯ ಸದ್ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಶ್ರೀ ವೇಣುಗ್ರಾಮ ಪುರೋಹಿತ ಸಂಘಟನೆ ಇವರ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.