25/12/2024
IMG-20241224-WA0004

ಕೌಜಲಗಿ-೨೪: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೊಸೈಟಿಗೆ ಭಾನುವಾರ 2024- 29 ನೇ ಸಾಲಿನ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಒಟ್ಟು 2521 ಮತದಾರರಲ್ಲಿ ಸಾಲಗಾರ ಕ್ಷೇತ್ರದಲ್ಲಿ 763 ರಲ್ಲಿ 684 ಮತ್ತು ಬಿನ್ ಸಾಲಗಾರರ ಕ್ಷೇತ್ರದಲ್ಲಿ 1758 ರಲ್ಲಿ 1190 ಮತಗಳು ಚಲಾವಣೆಯಾಗಿವೆ. ಶೇ. 74.33 ರಷ್ಟು ಮತದಾನವಾಗಿದ್ದು, ಡಾ. ರಾಜೇಂದ್ರ ಸಣ್ಣಕ್ಕಿ ಗುಂಪಿಗೆ ಎಲ್ಲಾ 11 ಸ್ಥಾನಗಳು ಗೆದ್ದು ಭರ್ಜರಿ ಜಯ ದೊರೆತಿದೆ.

ಭಾನುವಾರ ಮುಂಜಾನೆ 9.00 ಗಂಟೆಯಿಂದ ಶಾಂತಿಯುತವಾಗಿ ಮತದಾನ ನಡೆಯಿತು. ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನಗಳಿಗಾಗಿ ಭಾನುವಾರ ಮತದಾನ ನಡೆಯಿತು. ಪರಿಶಿಷ್ಟ ಪಂಗಡ ಕ್ಷೇತ್ರದ ಬಸಪ್ಪ ಮಹಾಂತಪ್ಪ ಮರೆಣ್ಣವರ ಒಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಬಿ ಎಂ ಮರೆನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಗಳ ಪೈಕಿ ಸಿದ್ದಪ್ಪ ಬಸಪ್ಪ ಹಳ್ಳೂರ, ( ಸಾಮಾನ್ಯ)447 ಮತಗಳು, ಕೇವಟಿ ನೀಲಪ್ಪ ಬಾಳಪ್ಪ ( ಸಾಮಾನ್ಯ)395 , ಅವ್ವಣ್ಣ ಮಾರುತಿ ಮೋಡಿ, ( ಸಾಮಾನ್ಯ)411, ರೇವಪ್ಪ ಮಹಾದೇವಪ್ಪ ದಾನನ್ನವರ, ( ಸಾಮಾನ್ಯ) 369,ಯಲ್ಲಪ್ಪ ನೀಲಪ್ಪ ಸಣ್ಣಕ್ಕಿ ( ಸಾಮಾನ್ಯ )360, ಸಲೀಂ ಲಾಡಸಾಬ ಮುಲ್ತಾನಿ, ( ಹಿಂದುಳಿದ ಅ ವರ್ಗ ) 399, ಸಿದ್ದಪ್ಪ ಮಹಾಂತಪ್ಪ ಬೀಸಗುಪ್ಪಿ ( ಹಿಂದುಳಿದ ಬ ವರ್ಗ )421, ರುಕ್ಮವ್ವ ಬಾಳಪ್ಪ ಹುಂಡರದ( ಮಹಿಳಾ )409, ಸುಮಿತ್ರ ಮಹಾಂತೇಶ ಲೋಕನ್ನವರ, ( ಮಹಿಳಾ)474, ಫಕೀರಪ್ಪ ಯಮನಪ್ಪ ಪೂಜನ್ನವರ,( ಪರಿಶಿಷ್ಟ ಜಾತಿ )389 ಮತ್ತು ದಳವಾಯಿ ವೆಂಕಟೇಶ ಸಿದ್ದಪ್ಪ, ( ಸಾಲಗಾರರಲ್ಲದ ) ಕ್ಷೇತ್ರದಿಂದ 1047 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್ ಬಿ ಬಿರಾದಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳಿಗೆ ಅಭಿವೃದ್ಧಿ ಪೆನಲ್ ಮುಖಂಡರಾದ ಡಾ. ರಾಜೇಂದ್ರ ಸಣ್ಣಕ್ಕಿ, ಶಿವಾನಂದ ಲೋಕನ್ನವರ ಸೇರಿದಂತೆ ಪಟ್ಟಣದ ಗಣ್ಯಮಾನ್ಯರು,ಹಿರಿಯರು, ಮುಖಂಡರು ಯುವಕರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!