24/04/2025
IMG-20241223-WA0066

ಬೆಳಗಾವಿ-೨೪: ಗುಜರಾತ್‌ ಗಾಂಧಿನಗರದಲ್ಲಿ ಇತ್ತೀಚೆಗೆ ಆಯೋಜಿಸಲಾದ ಪ್ರತಿಷ್ಠಿತ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ (ಎಸ್‌ಐಎಚ್)’ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ ಆರು ಜನ ವಿದ್ಯಾರ್ಥಿಗಳು ಸಾಧನೆಗೈದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕಾಲೇಜ ಪ್ರಾಚಾರ್ಯರಾದ

ಡಾ. ಎಸ್.ವ್ಹಿ.ಗೊರಬಾಳ ತಿಳಿಸಿದರು

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (Smart India Hackathon) ರಾಷ್ಟ್ರವ್ಯಾಪಿ ಉಪಕ್ರಮವಾಗಿದ್ದು, ಇದು ವಿದ್ಯಾರ್ಥಿಗಳಿಗೆ ನಾವೀನ್ಯತೆ, ಸೃಜನಶೀಲತೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನೈಜ-ಪ್ರಪಂಚದ ಸವಾಲುಗಳನ್ನು ಪರಿಹರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ‌ ಎಸ್‌ಐಎಚ್ ಹಮ್ಮಿಕೊಂಡಿದ್ದರು.

ಶಿಕ್ಷಣ ಸಚಿವಾಲಯದ ಪ್ರಕಾರ, ಈ ವರ್ಷ, 54 ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಪಿಎಸ್‌ಯುಗಳು ಮತ್ತು ಕೈಗಾರಿಕೆಗಳಿಂದ 250 ಕ್ಕೂ ಹೆಚ್ಚು ಸಮಸ್ಯೆ ಹೇಳಿಕೆಗಳನ್ನು ಸಲ್ಲಿಸಲಾಗಿತ್ತು, ಇದರಲ್ಲಿ ಬೆಳಗಾವಿ ಜೈನ್ ಕಾಲೇಜ ವಿದ್ಯಾರ್ಥಿಗಳು “ಬ್ಲಾಕ್‌ಚೈನ್ ಮತ್ತು ಸೈಬರ್ ಸೆಕ್ಯುರಿಟಿ” ಎಂಬ ವಿಷಯದ ಅಡಿಯಲ್ಲಿ ಅಸಾಧಾರಣ ಆವಿಷ್ಕಾರ ಮಂಡಿಸಿ ವಿಜೇತರಾಗಿದ್ದಾರೆ.‌
ಅವರು “ಯುನಿವರ್ಸಲ್ ಸ್ವಿಚ್ ಸೆಟ್ ವಿತ್ ಡೇಟಾ ಎನ್‌ಕ್ರಿಪ್ಶನ್ ಮತ್ತು ಡೀಕ್ರಿಪ್ಶನ್ ಫಾರ್ ಸೈಬರ್ ಸುರಕ್ಷತಾ ಕ್ರಮಗಳಿಲ್ಲದೆ ಲೆಗಸಿ ಅಪ್ಲಿಕೇಶನ್‌ಗಳು” ಎಂಬ ಶೀರ್ಷಿಕೆಯ ಸಮಸ್ಯೆಯ ಹೇಳಿಕೆಯನ್ನು ಅತ್ಯುತ್ತಮ ಪರಿಹಾರದೊಂದಿಗೆ ಪರಿಹರಿಸಿದ್ದಾರೆ ಎಂದು ಹೇಳಿದರು.

ಈ ಸ್ಮಾರ್ಟ್ ಹ್ಯಾಕಥಾನ್‌ ನಲ್ಲಿ ರಾಷ್ಟ್ರ ಒಳಗೊಂಡತೆ ವಿವಿಧ ರಾಜ್ಯದಿಂದ ನೂರಾರು ವಿದ್ಯಾರ್ಥಿಗಳು ಈ ಹ್ಯಾಕಥಾನಲ್ಲಿ ಸ್ಪರ್ಧಿಸಿದರು. ಸುಮಾರು 36 ಗಂಟೆಗಳ ಕಾಲ ನಿರಂತರವಾಗಿ ನಡೆದ
ಈ ಸ್ಪರ್ಧೆಯಲ್ಲಿ ಈ ರಾಷ್ಟ್ರದ ರಾಜಧಾನಿಯಾಗಿರುವ ದೆಹಲಿ ಮೆಟ್ರೋ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಹಿಡುವುವಲ್ಲಿ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ ಆರು ಜನ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸಿ ಜಯಶಾಲಿಯಾಗಿದ್ದಾರೆ. ಈ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜ ಶಿಕ್ಷಕರು , ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ದೆಹಲಿ ಮೆಟ್ರೋ ಸಮಸ್ಯೆಗಳ ಬಗ್ಗೆ ಪರಿಹಾರ ನೀಡಿ ಗಮನ‌ ಸೆಳೆದಿದ್ದು, ಈ ವಿದ್ಯಾರ್ಥಿಗಳು ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಮಾತ್ರವಲ್ಲ, ತಮ್ಮ ಸಾಧನೆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ ಎಂದರು.

ಕುನಾಳ ಶಿರೀಶ್ ಶಿಂದಗಿ, ನಾಗರಾಜ್ ಕೃಷ್ಣ ಭಂಡಾರೆ, ಅನೀಶ್ ಜೆ, ಪೂಜಾ ರಾಜೇಂದ್ರ ಏಕ್ಬೋಟೆ, ದರ್ಶನ್ ದಿಗಂಬರ್ ರೇವಣಕರ್, ಖುಷಿ ವಿಕ್ರಂ ಕೊಪ್ಪದ್ ಈ ಆರು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೈನ್‌ ಕಾಲೇಜ್ ಆಪ್ ಇಂಜಿನಿಯರಿಂಗ್ ರಿಸರ್ಚ್ (ಎಚ್‌ಒಡಿ, ಸಿಎಸ್‌ಇ (ಎಐಎಂಎಲ್) ಡಾ. ಪ್ರಕಾಶ್ ಕೆ. ಸೋನ್ವಾಲ್ಕರ್ , (ಸಹಾಯಕ ಪ್ರಾಧ್ಯಾಪಕ, CSE ವಿಭಾಗ) ಪ್ರೊ. ಭರತೀಶ್ ಎನ್. ಫಡ್ನವಿಸ್ ಅವರು ಮಾರ್ಗದರ್ಶನ ‌ನೀಡಿದ್ದಾರೆ ಎಂದು ತಿಳಿಸಿದರು.

error: Content is protected !!