ಬೆಳಗಾವಿ-೧೫:ರೈತರ ಬಗ್ಗೆ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ ಇದರ ಬಗ್ಗೆ ಗಮನ ನೀಡಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಗಂಭೀರವಾಗಿದ್ದು, ತೆರಿಗೆ ಹಣ ಕೊಡಬೇಕು. ಜೈ ಕಿಸಾನ್ ಮಾರುಕಟ್ಟೆ ಬಂದ್ ಮಾಡಿ ಸರ್ಕಾರಿ ಜಮೀನಿನಲ್ಲಿ ಎಪಿಎಂಸಿ ನಿರ್ಮಾಣ ಮಾಡಬೇಕು.
ಸೋಮವಾರ (ಡಿ. ೧೬) ರಂದು ಹತ್ತು ಹದಿನೈದು ಸಂಘಟನೆಯವರು ಚಲೋ ಸುವರ್ಣ ವಿಧಾನ ಸೌಧಕ್ಕೆ
ಆಗಮಿಸಲ್ಲಿದ್ದಾರೆ ಎಂದು ಚೂನಪ್ಪ ಪೂಜಾರಿ ಅವರು ಪತ್ರಿಕಾ ಗೋಷ್ಠಿ ಯಲ್ಲಿ ಭಾನುವಾರ ಹೇಳಿದರು.
ರೈತರಿಗೆ ಯಾವುದೇ ತರಹದ ಅನ್ಯಾಯ ಆಗದಂತೆ ನೋಡಬೇಕು, ವಕ್ಫ್ ಜೊತೆಗೆ ಅರಣ್ಯ, ಗೋಮಾಳ ಅಂತಾ ಬರುತ್ತಿರುವುದನ್ನು ಸರಿಪಡಿಸಬೇಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ 11 ಗಂಟೆ ನಿರಂತರ ವಿದ್ಯುತ್ ಇರುವಂತೆ ನೋಡಿಕೊಳ್ಳಬೇಕು. ರಾತ್ರಿ ಸಿಂಗಲ್ ಫಿಸ್ ಟಿ.ಬಿ. ನೀಡಬೇಕು. ಡ್ಯಾಂ ನಲ್ಲಿ ಇರುವ ಹೂಳ ತೆಗೆಯಬೇಕು. ಜಮೀನಿನಲ್ಲಿ ಕಡ್ಡಾಯ ರಸ್ತೆ ನಿರ್ಮಾಣವಾಗಬೇಕು. ಅದೇ ರೀತಿಯಾಗಿ ಆರ್.ಟಿ.ಸಿ ಗೆ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು.
ಕಬ್ಬಿಗೆ ನಿಗಿದಿತ ಬೆಲೆ ಸಿಗುತ್ತಿಲ್ಲ ಈ ವಿಷಯದಲ್ಲಿ ರೈತರಿಗೆ ಅನ್ಯಾಯ ಆಗದ ರೀತಿಯಲ್ಲಿ ಗಮನ ಹರಿಸಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. ಮಧ್ಯವರ್ತಿಗಳಿಂದ ರೈತರನ್ನು ಕಾಪಾಡಬೇಕು, ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು, ವಕ್ಫ್ ವಿರುದ್ಧ ಜಾತ್ಯತೀತ, ಸಾಮರಸ್ಯ, ಜಮೀನು ವಶಪಡಿಸಿಕೊಳ್ಳುವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ರಾಷ್ಟ್ರೀಯ ನಾಯಕ ಪ್ರಕಾಶ್ ನಾಯಕ, ಶರಣಪ್ಪ ದೊಡ್ಡಮನಿ, ವಿದ್ಯಾಶಂಕರ, ಸುರೇಶ, ಕಿಶನ್ ನಂದಿ, ಆಸಮಾ, ಪ್ರಕಾಶ್ ನಾಯಕ ಇತರರು ಉಪಸ್ಥಿತರಿದ್ದರು.