23/12/2024
IMG-20241215-WA0000

ಬೆಳಗಾವಿ-೧೫: ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ -ಅಂಬೇಡ್ಕರ್ ಚಾಥಾ 2. ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ -ಅಂಬೇಡ್ಕರ್ ಚಾಥಾತಿ ಇದರ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ – ಮಾಜಿ ಕೇಟ್ ರವರು ಸ್ವಾಗತಿಸಿದರು. ರಾಜ್ಯ ಪ್ರಾಧಾನ ಕಾರ್ಯದರ್ಶಿ ಆದ ಮುಜಾಹಿದ್ ಪಾಷಾ ರವರು ಕರಪತ್ರ ಬಿಡುಗಡೆಗೊಳಿಸುವ ಮೂಲಕ ಜಾಥಾಕ್ಕೆ ಜಿಲ್ಲೆಯ ಜನತೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ನಾಯಕರ ಬೆಂಬಲವನ್ನು ಯಾಚಿಸಿದರು.

ರಾಜ್ಯ ಕಾರ್ಯದರ್ಶಿಗಳಾದ ಆಫರ್ ಕೆ ಆರ್ ನಗರ ರವರು ಮಾತನಾಡಿ ಪ್ರಸ್ತುತ ಕಾಂಗ್ರೆಸ್ ಸರಕಾರದ U TURN ಚಾಳಿಯನ್ನು ಬಿಡಬೇಕು ಹಾಗೂ ಜಾಥಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಕ ಹೇಳಿಕೆಗಳನ್ನು ನೀಡಿ ಕಣ್ಣೆರೆಸುವ ತಂತ್ರ ಮಾಡುತ್ತಿದೆ.

ಈ ಅಸಹಾಯಕ U Turn ಚಾಳಿಯನ್ನು ಖಂಡಿಸಿ, ಚಳಿಗಾಲದ ಅಧಿವೇಶನ ನಡೆಯುವ ಸುವರ್ಣ ಸೌಧ ಬೆಳಗಾವಿಗೆ ಈ ಕೆಳಕಂಡ ಜನಾಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 2 ಅನ್ನು ಹಮ್ಮಿಕೊಂಡಿದ್ದೇವೆ.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು.

ಮುಸ್ಲಿಮರ 2B ಮೀಸಲಾತಿಯನ್ನು ಪುನರ್ಸ್ಥಾಪಿಸಿ ಶೇಕಡಾ 8ಕ್ಕೆ ಏರಿಸಬೇಕು.

ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಜಾರಿಗೊಳಿಸಬೇಕು.

ವಕ್ಷ ಆಸ್ತಿಗಳ ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ರ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ SCP/TSP ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು.
25-26 ನಾಲಿನ ಬಜೆಟ್ ನಲ್ಲಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ಮೀಸಲಿಡಬೇಕು.ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವುದು.

ಮುಂತಾದ, ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಈ ಸಮುದಾಯಗಳ ಸಾಂವಿಧಾನಿಕ ಹಕ್ಕು ರಕ್ಷಣೆ ಕಾಯಿದೆ ಮತ್ತು ಯೋಜನೆಗಳಿಗಾಗಿ ಆಗ್ರಹಿಸಿ SDPI ವತಿಯಿಂದ ದಿನಾಂಕ 10 ಡಿಸೆಂಬರ್ 2024ರಿಂದ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ “ಚಲೋ ಬೆಳಗಾವಿ, ಅಂಬೇಡ್ಕರ್ ಜಾಥವನ್ನು- 2 ಹಮ್ಮಿಕೊಳ್ಳಲಾಗಿದೆ. ಸದರಿ ಜಾಥವು 10.12.2024 ರಂದು ಉಡುಪಿಯಿಂದ ಪ್ರಾರಂಭವಾಗಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ ಹುಬ್ಬಳ್ಳಿ-ಧಾರವಾಡದ ಮುಖಾಂತರ  ನಾಳೆ 16.12.2024 ರಂದು ಬೆಳಗಾವಿಗೆ ತಲುಪುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೊತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್, ಬೆಳಗಾವಿ ಜಿಲ್ಲೆಯ ಅಧ್ಯಕ್ಷರು ಹಾಗೂ ರಾಜ್ಯ ಸಮತಿ ಸದಸ್ಯರು ಆದ ಮನ್ಸೂದ್ ಮಕಾಂದಾರ್ ರವರು, ಕಾರ್ಯದರ್ಶಿಗಳಾದ ಝಾಕಿರ್ ನಾಯಕ್ವಾಡಿ ಹಾಗೂ ಮಾಜಿದ್ ಶೇಖ್ , ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುಅಜ್ಜಮ್ ಮುಲ್ಲಾನಿ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!