–ಯುವ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ಮನವಿ
ರೈಲ್ವೆ ಸಚಿವ ವಿ ಸೋಮಣ್ಣ ಗೆ ಆಗ್ರಹ
ದೇಶ ಪ್ರೇಮಿ ಸ್ವತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಇತಿಹಾಸ ಕೋಡುಗೆ ಬಹು ದೊಡ್ಡದು ಬಡವರ ಪಾಲಿನ ದೇವರು ಎಂದು ಹೆಸರುವಾಸಿಯಾದ ವೀರ ಶೂರ ಸಿಂಧೂರ ಲಕ್ಷ್ಮಣ ಆದರೆ ಇವತ್ತಿಗೆ ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಣ್ಣು ಇದ್ದು ಕುರಡರಂತೆ ವರ್ತಿಸುತ್ತಿದೆ ಎಂದು ಅನಿಸುತ್ತಿದೆ ಕಾರಣ ವೀರ ಸಿಂಧೂರ ಲಕ್ಷ್ಮಣ ಕೊಡುಗೆಗೆ ಯಾವುದೇ ಸರ್ಕಾರವಾಗಲಿ ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಮಾಡುತ್ತಿಲ್ಲ ಅಂತಹ ಇತಿಹಾಸ ಸೃಷ್ಟಿದ ನಾಯಕನ ಹೆಸರಿನಲ್ಲಿ ಯಾವುದೇ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಮುಖ್ಯ ಸ್ಥಳಗಳಿಗೆ ಅವರ ಹೆಸರು ಮತ್ತು ಮೂರ್ತಿ ಇಲ್ಲ ಇದು ನಮ್ಮ ದುರದೃಷ್ಟ ಎಂದು ಭಾವಿಸುತ್ತೇವೆ . ಇಂತಹ ನಾಯಕ ಬೇಡ ಅನ್ನುವ ಕಾರಣ ಆತನು ಬೇಡರ ಸಮುದಾಯದ ನಾಯಕ ಅನ್ನುವ ಕಾರಣಕ್ಕೆ ಸಿಂಧೂರ ಲಕ್ಷ್ಮಣ ನನ್ನು ಕಡೆಗಣಿಸುತ್ತಿದ್ದಾರೆ ಎಂಬ ಅನುಮಾನ ಎದ್ದು ಕಾಣುತ್ತಿದೆ . ವೀರ ಶೂರ ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ ಮಾಡುವುದಲ್ಲದೆ ಎಲ್ಲ ಸಂಘಟನೆಯ ನೇತೃತ್ವದಲ್ಲಿ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಅದಲ್ಲದೆ ಎಲ್ಲ ಸಂಘಟನೆಯ ಮನವಿ ಪತ್ರಗಳಿಂದ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಗಳ ಮುಖಾಂತರ ಕೇಂದ್ರ ರೈಲ್ವೆ ಸಚಿವರಿಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತಾ ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ . ಇಷ್ಟಲ್ಲದೆ ಎಲ್ಲ ಶಾಸಕ ಸಚಿವರಿಗೂ ಮನವಿ ಮಾಡಲಾಗಿದೆ. ಆಗಿನ ಸಮಯದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರದಲ್ಲಿ ಇದ್ದಂತಹ ಸುರೇಶ್ ಅಂಗಡಿ ರವರು ಕೂಡ ವಿಶ್ವಾಸ ವ್ಯಕ್ತ ಪಡಿಸಿದ್ದರು .ಆದರೆ ಈಗ ಪ್ರಸ್ತುತ ಸಮಯದಲ್ಲಿ ರೈಲ್ವೆ ಖಾತೆ ಅಧಿಕಾರದಲ್ಲಿ ಇರುವ ವಿ.ಸೋಮಣ್ಣ ರವರಿಗೆ ಯುವ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ರವರು ಮನವಿ ಮಾಡಿದ್ದರು ಮತ್ತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ರವರ ಬೇಟಿಗೆ ಪ್ರಯತ್ನದಲ್ಲಿ ಇದ್ದು ಅಷ್ಟರಲ್ಲಿ ಸಂಸದರಾದ ರೈಲ್ವೆ ಸಚಿವರಾದ ವಿ.ಸೋಮಣ್ಣ ರವರು ಬೆಳಗಾವಿ ರೈಲು ನಿಲ್ದಾಣಕ್ಕೆ ಬೇರೆ ಹೆಸರನ್ನು ಇಡಲು ಪ್ರಯತ್ನದಲ್ಲಿ ಇದ್ದಾರೆ ಅನ್ನುವ ಮಾಹಿತಿ ತಿಳಿಯುತ್ತಿದ್ದಂತೆ
ವಿ ಸೋಮಣ್ಣ ರವರಿಗೆ ಕರೆ ಮಾಡಿ ಮಾತನಾಡಿ ತಿಳಿಹೇಳಿ ಮನವಿ ಮಾಡಿಕೊಂಡರು ಅವರದ್ದೇ ನಿಲುವು ವ್ಯಕ್ತಪಡಿಸಿದರು. ಇದರಿಂದ ವಿ ಸೋಮಣ್ಣ ರವರ ನಡೆ ಬಗ್ಗೆ ತಿಳಿಯಿತು. ಇಷ್ಟು ವರ್ಷಗಳು ಕಷ್ಟ ಪಟ್ಟು ಸ್ವತಂತ್ರ ಹೋರಾಟಗಾರ ದೇಶ ಪ್ರೇಮಿ ವೀರ ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಆಗ್ರಹಿಸಿ ಹೋರಾಟ ಮಾಡುವುದಲ್ಲದೆ ಎಲ್ಲ ಸಚಿವರಿಗೆ ಮನವಿ ಮಾಡಿದ್ದರು ಇದಕ್ಕೆ ವಿ ಸೋಮಣ್ಣ ರವರು ಎಳ್ಳು ನೀರು ಬಿಟ್ಟು ದೇಶ ಪ್ರೇಮಿಗಳಿಗೆ ಸಿಂಧೂರ ಲಕ್ಷ್ಮಣನ ಅಭಿಮಾನಿಗಳಿಗೆ ಮನಸಿಗೆ ನೋವನ್ನು ನೀಡುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣನ ಹೆಸರು ನಾಮಕರಣ ಮಾಡದೆ ಹೋದರೆ ಸಿಂಧೂರ ಲಕ್ಷ್ಮಣನಿಗೆ ಅವಮಾನ ಮಾಡುವ ಪ್ರಯತ್ನ ಮಾಡಿದರೆ ಈ ವಿಷಯವಾಗಿ ರೈಲ್ವೆ ಸಚಿವ ವಿ ಸೋಮಣ್ಣ ರವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಂಧೂರ ಲಕ್ಷ್ಮಣ ಅಭಿಮಾನಿ ಯುವ ಹೋರಾಟಗಾರ ಕ ಪ ಪಂ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಲ್ಲಿ ನಮಗೆ ಏನಾದರೂ ಅನ್ಯಾಯವಾದರೆ ಇದಕ್ಕೆ ಮೂಲ ಕಾರಣ ನಮ್ಮ ಸಚಿವರು ಶಾಸಕರು ಸ್ವಾಮಿಗಳು ಎಂದು ಹೇಳಲು ಬಯಸುತ್ತೇನೆ. ಕಾರಣ ವಿ ಸೊಮ್ಮಣ್ಣ ಹಾಗೂ ಇನ್ನುಳಿದ ಸಚಿವರಿಗೆ ಶಾಸಕರಿಗೆ ಸಮುದಾಯದ ಮೇಲೆ ಇರುವ ಗೌರವ ಕಾಳಜಿ ಜವಾಬ್ದಾರಿ ನಮ್ಮ ಸ್ವಾಮಿಗಳಿಗೂ ಸಚಿವರಿಗೂ ಶಾಸಕರಿಗೂ ಬೇಕು ಎಂದು ಮಹೇಶ ಎಸ್ ಶಿಗೀಹಳ್ಳಿ ರವರು ತಿಳಿಸಿದ್ದಾರೆ.