ಬೆಳಗಾವಿ-೧೧: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕ ಪಿ.ಜಿ. ವೇಣುಗೋಪಾಲ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಪಂ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ಹೊಸ ಕೆರೆ, ಭೇಟಿ ನೀಡಿ ಕೆಲಸ ಮಾಡುತ್ತಿದ್ದ 264 ಕೂಲಿಕಾರರೊಂದಿಗೆ ಮಾತನಾಡುತ್ತಾ ಮೇಟ್ ಗಳಿಂದ ಕೂಲಿಕಾರರ ಕೆಲಸದ ಪ್ರಮಾಣ ಮತ್ತು ಎನ್.ಎಮ್.ಎಮ್.ಎಸ್ ಮಾಹಿತಿ ಪಡೆದುಕೊಂಡು ಎನ್.ಎಮ್.ಆರ್ಗಳನ್ನು ಪರಿಶೀಲಿಸಿದರು. ಅದೇ ಗ್ರಾಮದ ಬೂದು ನೀರು ನಿರ್ವಹಣೆ ಅನುಷ್ಠಾನ ಮಾಡುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ತಾಂತ್ರಿಕ ಸಂಯೋಜಕರಿಗೆ ಹಾಗೂ ತಾಂತ್ರಿಕ ಸಹಾಯಕರಿಗೆ ಸಲಹೆ ಸೂಚೆನಗಳನ್ನು ನೀಡಿದರು.
ಬಳಿಕ ಸಂಬ್ರಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಮೃತ ಸರೋವರ 2.0 ಕ್ಕೆ ಭೇಟಿ ನೀಡಿ ಇನ್ಲೆಟ್ ಹಾಗೂ ಔಟಲೆಟ್ ಗಳನ್ನು ಸ್ವಚ್ಛಗೊಳಿಸಿ ಬದುಗಳಿಗೆ ಪಿಚ್ಚಿಂಗ್ ಮಾಡಿ ಬಯೋ ಫೆನ್ಸಿಂಗ್ ಮಾಡಲು ನಿರ್ದೇಶನ ನೀಡಿದರು.
ಸುವರ್ಣ ಸೌಧದ ಸಮೀಪದಲ್ಲಿನ ಹಲಗಾ ಗ್ರಾಪಂ ವ್ಯಾಪ್ತಿಯಲ್ಲಿನ ಸಾಮಾಜಿಕ ಅರಣ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾದ ರಸ್ತೆ ಬದಿ ಸಿಸಿ ನೆಟ್ಟ ಕಾಮಗಾರಿಗೆ ಭೇಟಿ ನೀಡಿದರು.
ಇದಾದ ನಂತರ ಬಸ್ತವಾಡ ಗ್ರಾಪಂಚಾಯತಿಗೆ ಭೇಟಿ ನೀಡಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದರು ಅಲ್ಲದೇ ಗ್ರಾಮ ಪಂಚಾಯತ ಆವರಣದಲ್ಲಿ ಆರ್.ಡಿ.ಪಿ.ಆರ್ ಇಲಾಖೆಯ ಏಕೀಕೃತ ಸಹಾಯವಾಣಿಯನ್ನು ಪ್ರದರ್ಶಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು. ನಂತರ ಎನ್ಆರ್ಎಲ್ ಶೆಡ್ & ಬೂದು ನೀರು ನಿರ್ವಹಣೆ ಕಾಮಗಾರಿ ಸ‍್ಥಳಕ್ಕೆ ಭೇಟಿ ನೀಡಿ ಎ.ಇಇ (ಪಂ.ರಾಇಂ.) ರವರಿಗೆ ಅನುಷ್ಠಾನದ ಬಗ್ಗೆ ತಾಂತ್ರಿಕ ಸಲಹೆಗಳನ್ನು ನೀಡಿದರು.
ಬಸ್ತವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಂಡಸ್ಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಶಾಲಾ ಶೌಚಾಲಯ, ಅಡುಗೆ ಕೊಣೆ, ಆಟದ ಮೈದಾನ, ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹಿರೇಬಾಗೇವಾಡಿ ಗ್ರಾಮದ ಹೊಸದಾಗಿ ನಿರ್ಮಿಸಲಾದ ಗ್ರಾಪಂ ಕಟ್ಟಡ ಭೇಟಿ ನೀಡಿದರು. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಪಂ ವ್ಯಾಪ್ತಿಯ ಬೂದು ನೀರು ನಿರ್ವಹಣೆ ಕಾಮಗಾರಿಗಳನ್ನು ಪರಿಶೀಲಿಸಿ ಈಗಾಗಲೇ ಆಯುಕ್ತಾಲಯಕ್ಕೆ ಸಲ್ಲಿಸಲಾದ ಡಿ.ಪಿ.ಆರ್ಗಳನ್ನು ಮರು ಪರಿಶೀಲಿಸಲು ತಾಂತ್ರಿಕ ಸಿಬ್ಬಂದಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಹಾಗೂ ಬೈಲಹೊಂಗಲ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಉ) ಬಸವಂತ ಕಡೇಮನಿ, ವಿಜಯ ಪಾಟೀಲ, ಎಇಇ (ಪಂ.ರಾ.ಇಂ.) ಡಿ.ಬಿ ಬನ್ನೂರ, ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ, ತಾಂತ್ರಿಕ ಸಂಯೋಜಕ ಮುರುಗೇಶ & ನಾಗರಾಜ, ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಪಿಡಿಒ, ಹಾಗೂ ಸಿಬ್ಬಂದಿ ಹಾಜರಿದ್ದರು.