ಕೌಜಲಗಿ-೧೧: ಬೆಳಗಾವಿ ಜಿಲ್ಲೆ, ಗೋಕಾಕ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಕೌಜಲಗಿ ತಾಲ್ಲೂಕು ಹೋರಾಟಗಾರರ ವೇದಿಕೆಯು ಶುಕ್ರವಾರ ಒಂದು ದಿನದ ಧರಣಿಯನ್ನು ಕೌಜಲಗಿ ಪಟ್ಟಣದಲ್ಲಿ ಹಮ್ಮಿಕೊಂಡಿದೆ.
ಕೌಜಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಕಳೆದ 40 ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ನಡೆಸುತ್ತ ಬಂದಿರುತ್ತೇವೆ. ಆದರೂ ಸರ್ಕಾರ ಇದು ವರೆಗೂ ನಮ್ಮ ಭಾಗದ ಪ್ರಮುಖ ಬೇಡಿಕೆಯನ್ನು ಈಡೇರಿಸಿಲ್ಲ. ಈ ನಿಟ್ಟಿನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕೌಜಲಗಿ ಪಟ್ಟಣದಲ್ಲಿ ಶುಕ್ರವಾರ ದಿನಾಂಕ: 13-12-2024 ರಂದು ಮುಂಜಾನೆ 10:30 ರಿಂದ ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ಸ್ಥಳೀಯ ಮುಖಂಡರು, ವಿವಿಧ ಸಂಘ- ಸಂಸ್ಥೆ-ಸಂಘಟನೆಗಳು, ವ್ಯಾಪಾರೋದ್ಯಮಿಗಳು ಹಾಗೂ ನ್ಯಾಯವಾದಿಗಳ ಸಹಕಾರದೊಂದಿಗೆ ತೀರ್ಮಾಣಿಸಲಾಗಿದೆ.
ಶುಕ್ರವಾರ ದಿನಾಂಕ: 13-12-2024 ರಂದು ಮುಂಜಾನೆ 10:30 ರಿಂದ ಗ್ರಾಮದ ಬಲಭೀಮ
ದೇವಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನಿಗೆ ಮಾಲಾರ್ಪಣೆ ಸಲ್ಲಿಸಿ, ಬಸವೇಶ್ವರ ಪೇಟೆಯ ಮಾರ್ಗವಾಗಿ ಕಳ್ಳಿಗುದ್ದಿ ರಸ್ತೆಯ ರವಿವರ್ಮ ಚೌಕಿಗೆ ಹೋರಾಟಗಾರರು ಆಗಮಿಸಿ ಶಾಂತಿಯುತವಾಗಿ ಧರಣಿ ನಡೆಸಲಿದೆ ಎಂದು ಸಂಘಟನಾ ಕಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
