ಬೆಳಗಾವಿ-೧೦: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧರೆಣ್ಣೆಯಿಂದ ತಯಾರಿಸಿರುವ ಮೈಸೂರು ಪ್ಯಾಂಡಲ್ ಸಾಬೂನಿನಿಂದ ವಿಶ್ವ ವಿಖ್ಯಾತಿ ಪಡೆದಿದೆ ಹಾಗೂ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು ಭಾತರದ ಬೌದ್ಧಿಕ ಆಸ್ತಿಯಾಗಿರುತ್ತದೆ 2010 2019 ಸೇರಿದಂತೆ ರಫ್ತು, ಹಾಗೂ ಕಾಸ್ಟ್ ಅಕೌಂಟಿಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಸಂಸ್ಥೆಯ ಶ್ರೀಗಂಧದೆಣ್ಣೆ ಸೇರಿದಂತೆ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಆಗರಬತ್ತಿ ಸೇರಿದಂತೆ ಸುಮಾರು ೩೮
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಮ್ಮ ಪರಂಪರೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಸುಗಂಧ ರಾಯಭಾರಿ ಎಂದೇ ವಿಶ್ವವಿಖ್ಯಾತಿ ಪಡೆದ ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆ ಮತ್ತು ಇತಿಹಾಸವಿರುವ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ಎಶ್ವ ದರ್ಜೆಯ ಉತ್ಪನ್ನಗಳಾಗಿದ್ದು ಭಾರತೀಯ ಚಯೋಗ್ರಾಫಿಕಲ್ ರಿಜಿಸ್ಟ್ರಿಯಲ್ಲಿ ನೊಂದಾವಣೆಗೊಂಡಿರುತ್ತದೆ.
ಸಂಸ್ಥೆಯು ತನ್ನ ಉತ್ಪನ್ನಗಳ ಉತ್ತಮ ಗುಣಮಟ್ಟದ ಐ.ಎಸ್.ಓ 9001-2015 ಐ.ಎಸ್.ಓ ಪ್ರಮಾಣ ಪತ್ರವನ್ನು ಪಡೆದಿದ್ದು ಹಾಗೂ ಪರಿಸರ ನೀತಿಯಂತೆ 14001-2015 ಪ್ರಮಾಣ ಪತ್ರವನ್ನು ಸಹ ಪಡೆದಿರುತ್ತದೆ.
ಬಹು ರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ಸಂಸ್ಥೆಯು ಹೆಚ್ಚಿನ ವಹಿವಾಟನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದ್ದು 2023-24 ನೇ ಸಾಲಿನಲ್ಲಿ ರೂ 1571.00 ಕೋಟಿ ವಹಿವಾಟು ನಡೆಸಿ ಅಂದಾಜು ನಿವ್ವಳ ರೂ 362.00 ಕೋಟಿಗಳ ವಾಖಲೆ ಲಾಭಗಳಿಸಿದ್ದೂ ಪ್ರಸ್ತುತ ಆರ್ಥಿಕ ವರ್ಷ 2024-25 ರಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರಗತಿ ತೋರುತ್ತಿದ್ದು ನವೆಂಬರ್-24ರ ವರೆಗಿನ ಮಾರಾಟವು 1090.71 عن бел
ಸಂಸ್ಥೆಯು ಗ್ರಾಹಕರಿಗೆ ಅಂತರಾಷ್ಟ್ರೀಯ ಗುಣಮಟ್ಟದ ವಿಶಿಷ್ಟರೀತಿಯಿಂದ ಕೂಡಿದ ಉತ್ಪನ್ನವಾದ ‘ಮೈಸೂರು ಸ್ಯಾಂಡಲ್ ಮಿಲೇನಿಯಂ’ ಸೂಪರ್ ಪ್ರೀಮಿಯಂ ಸಾಲೂನನ್ನು 2012 ರಲ್ಲಿ ಬಿಡುಗಡೆಗೊಳಿಸಿದ್ದು ಈ ಸಾಬೂನಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ.
ಸಂಸ್ಥೆಯ ಇತರೆ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಮೈಸೂರು ಸ್ಯಾಂಡಲ್ ಗಿಪ್ಟ್ ಪ್ಯಾಕ್, ಮೈಸೂರು ಕ್ಯಾಂಡಲ್ ಗೋಲ್ಡ್, ಮೈಸೂರು ಸ್ಯಾಂಡಲ್ ಗೋಲ್ಡ್ ಸಿಕ್ಸರ್, ಮೈಸೂರು ಸ್ಯಾಂಡಲ್ ಧೂಪ್, ಮೈಸೂರು ಸ್ಯಾಂಡಲ್ ಅಗರಬತ್ತಿಗಳು, ಮೈಸೂರು ಸ್ಯಾಂಡಲ್ ಹರ್ಬಲ್ ಹ್ಯಾಂಡ್ ವಾಷ್, ಕ್ಲೀನಾಲ್, ಮೈಸೂರು ಸ್ಯಾಂಡಲ್ ಬೇಬಿ ನಾಲೂನು, ಮೈಸೂರು ಸ್ಯಾಂಡಲ್ ಆಯಿಲ್, ಮೈಸೂರು ಸ್ಯಾಂಡಲ್ ಕಾರ್ಬೋಲಿಕ್ ಸಾಬೂನು ಮೈಸೂರು ವಾಷಿಂಗ್ ಬಾರ್ ಸಾಬೂನು, ಮೈಸೂರು ಮಾರ್ಜಕ ಬಲ್ಲೆ, ಇವುಗಳು ಎಲ್ಲಾ ವರ್ಗಗಳ ಗ್ರಾಹಕರಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿರುತ್ತವೆ.
2017 ನೇ ಸಾಲಿನಲ್ಲಿ ಕೆ.ಎಸ್.ಡಿ.ಎಲ್ ಸಂಸ್ಥೆಯು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳ್ಳಿಸಿದ್ದು ಫ್ರೆಶ್ ನಾಲ್, ಕಿತ್ತಲೆ ಸರಿಮಾದ ಕ್ಲೀನಾಲ್, ಮಲ್ಲಿಗೆ, ರೋಸ್, ನಾಗಚಂಪ ಆಗರಬತ್ತಿಗಳು ಮಲ್ಲಿಗೆ ಪರಿಮಳದ ರೂಪ ಹಾಗೂ ಮೈಸೋಪ್ ಸಾಬೂನುಗಳಲ್ಲಿ ಐದು ಬಗೆಯ ಸುವಾಸನೆಯ ಸಾಬೂನುಗಳನ್ನು, ಬೇವಿ ಶಾಂಪು, ಬೇಬಿ ಮಸಾಜ್ ಎಣ್ಣೆ, ಸುಖ್ ಮಸಾಜ್ ಎಣ್ಣೆ ಉತ್ಪನ್ನಗಳನ್ನು ಬಿಡುಗಡೆಗೊಳ್ಳಿಸಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುತ್ತದೆ.
ನಮ್ಮ ಸಂಸ್ಥೆಯು ಶ್ರೀಗಂಧವನ್ನು ನಿರಂತರವಾಗಿ ಪಡೆಯಲು ತನ್ನ ಪರಿಸರ ನೀತಿಯಂತೆ ‘ಹೆಚ್ಚು ಹೆಚ್ಚು ಶ್ರೀಗಂಧ ಬೆಳೆಸಿ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಂತೆಯೇ ರೈತರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ಪೂರೈಸುತ್ತಾ ಬಂದಿರುತ್ತದೆ.
ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ “ಸೋಪ್ ಮೇಳ” ಎಂಬ ನಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ. ಮಂಗಳವಾರ ಇಂದು ದಿನಾಂಕ: 10.12.2024 ರಿಂದ ದಿನಾಂಕ: 19.12.2024 ರವರೆಗೆ ” ಮಹಾತ್ಮ ಗಾಂಧಿ ವಿಶ್ವಸ್ಥ ಮಂಡಳಿಯ ಸಾಂಸ್ಕೃತಿಕ ಭವನ ಕಾಲೇಜು ರಸ್ತೆ (ಎಂ.ಜ.ವಿ.ಎಂ) ಬೆಳಗಾವಿ ನಗರದಲ್ಲಿ “ಸಾಬೂನು ಮೇಳ” ವನ್ನು ಆಯೋಚಿಸಲಾಗಿದೆ. ಮೇಳವು ಪ್ರತಿ ದಿನ ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 9.00 ಗಂಟೆಯ ವರೆಗೆ ನಡೆಯಲಿದೆ. ಸದರಿ ಸಾಬೂನು ಮೇಳದಲ್ಲಿ ಸಂಸ್ಥೆ ಉತ್ಪಾದಿಸುತ್ತಿರುವ 48 ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ವಿಶೇಷ ರಿಯಾಯಿತಿ ದರದಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು ಈ ಸುದ್ದಿಯನ್ನು ಸಾರ್ವಜನಿಕ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕ ಉದ್ಯಮಗಳನ್ನು ಬಲಿಷ್ಟಗೊಳಿಸಲು ತಮ್ಮ ಸಹಕಾರವನ್ನು ಕೋರಿದೆ ಎಂದು ಪ್ರಧಾನ ವ್ಯವಸ್ಥಾಪಕರಾದ ಎಂ.ಗಂಗಪ್ಪ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.