ಬೆಳಗಾವಿ-೦೮:ಬೆಳಗಾವಿಯ ಜೋಸ್ ಆಲುಕ್ಕಾಸ್ ಶೋರೂಮ್‌ಗೆ 100ನೇ ದಿನ ಸಂಭ್ರಮಾಚರಣೆ ನಿಮಿತ್ತ ಶನಿವಾರ ನಗರದ ವಿವಿಧ ಶಾಲಾ- ಕಾಲೇಜುಗಳಿಗೆ ಡೆಸ್ಟ್‌ಗಳ ಖರೀದಿಗಾಗಿ ಧನ ಸಹಾಯದ ಚೆಕ್ ವಿತರಣೆ ಮಾಡಲಾಯಿತು.
ಸರಸ್ವತಿ ಪಪೂ ಮಹಾವಿದ್ಯಾಲಯಕ್ಕೆ 96,000 ರೂ. ಹಾಗೂ ಸರ್ದಾರ್ ಪದವಿ ಪೂರ್ವ ಕಾಲೇಜಿಗೆ 1.05992. ರೂ. ಮೊತ್ತದ ಚೆಕ್‌ಗಳನ್ನು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ರಾಜೇಶ್ವರಿ ಎಸ್. ಹೆಗಡೆ, ಜೋಸ್ ಆಲುಕ್ಕಾಸ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಆಗಷ್ಟೇನ್ ಹಾಗೂ ಶೋರೂಮ್ ಮ್ಯಾನೇಜರ್ ಲೆನೀಷ್ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಭಾಷ ತಾಳುಕರ,ರವಿ ಹಲಕರ್ಣಿ,ಐಶ್ವರ್ಯ ಪಥಾತ,ಅಗಸ್ಟೀನ್ ಕೆ. ಪಿ,ಲೆನಿಸ,ರಾಜೇಶ, ಈರಪ್ಪ ನಂದಿಹಳ್ಳಿ ಕಾಲೇಜುಗಳ ಪ್ರಾಚಾರ್ಯರು, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.