23/12/2024
IMG-20241207-WA0086

ನೇಸರಗಿ-೦೭ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಶಾಲಾ ಕ್ಲಾಸು ಮುಗಿದ ನಂತರ ಮನೆಯಲ್ಲಿ ಛಲದಿಂದ 3 ರಿಂದ ನಾಲ್ಕು ಘಂಟೆಗಳ ಕಾಲ ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆದು ಪಾಲಕರ ಅಶೋತ್ತರಗಳನ್ನು ಈಡೇರಿಸಿ ತಾವು ಮುಂದೆ ಬನ್ನಿ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ನೇಸರಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಎನ್ ಎಸ್ ಎಸ್ ಹಾಗೂ ಗೈಡ್ಸ್,ರೆಡಕ್ರಾಸ್ ಘಟಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿ ಈ ಕಾಲೇಜು ವಿದ್ಯಾರ್ಥಿ ಕು. ಅಶ್ವಿನಿ ಕಡಕೋಳ ವಿಶ್ವವಿದ್ಯಾಲಯ ಮಟ್ಟದ ಪರೀಕ್ಷೆಯಲ್ಲಿ 5 ನೇ ರ್ಯಂಕ್ ಪಡೆದು ಸಾಧನೆ ಮಾಡಿದ್ದಾಳೆ. ಆದರೆ ಈ ಕಾಲೇಜಿನಿಂದ ಕಡಿಮೆ ಅಂದರು 7 ರಿಂದ 8 ಜನ ವಿದ್ಯಾರ್ಥಿಗಳು ಅವಳೊಂದಿಗೆ ಸ್ಥಾನ ಪಡೆಯಬಹುದಿತ್ತು. ಒಕ್ಕಲುತನ ಅವಲಂಬಿತ ತಂದೆ ತಾಯಿಗಳ ಶ್ರಮಕ್ಕೆ ತಕ್ಕಂತೆ ಅಧ್ಯಯನ ಮಾಡಿ ಅವರ ಮುಪ್ಪಿನಲ್ಲಿ ಅವರಿಗೆ ಆಸರೆ ಆಗಿ, ಡಾಲಬಿ ಮುಂದೆ ಕುಣಿಯದಿರಿ, ರಾಜಕೀಯದಿಂದ ಈ ಪ್ರಥಮ ಧರ್ಜೆ ಶಿಕ್ಷಣ ಸಮಯದಲ್ಲಿ ದೊರವಿರಿ, ತಮ್ಮ ತಾಲೂಕಿನಲ್ಲಿ ಇಬ್ಬರು ಮಾತ್ರ ಐ ಎ ಎಸ್ ಪಾಸಾಗಿದ್ದು ಇತ್ತೀಚಿಗೆ ಪಾಸಾದ ಕುಮಾರಿ ಸಾಹಿತ್ಯಾ 9 ತಿಂಗಳು ತನ್ನ ಅಭ್ಯಾಸಕ್ಕಾಗಿ ಜನರಿಗೆ ಮುಖ ತೋರಿಸದೆ 3 ನೇ ಚಾನ್ಸನಲ್ಲಿ ಪಾಸಾಗಿ ಸಾಧನೆ ಮಾಡಿದ್ದಾಳೆ. ನಮ್ಮ ಗೆಳೆಯ ನಮ್ಮ ವ್ಯಾಸಂಗ ಸಮಯದಲ್ಲಿ ಇಡೀ ಪುಸ್ತಕ ಬಾಯಿಪಾಠ ಹೇಳಿ ಹಾಗೆ ಅವರ 3 ಜನ ಸಹೋದರರು ಗೋಲ್ಡ್ ಮೆಡಲ್ ಪಡೆದು ಉನ್ನತ ಸ್ಥಾನದಲ್ಲಿ ಇದ್ದರೆ. ನಿಮ್ಮ ಹೊಸ ಅಧ್ಯಯನ ತರಬೇತಿಗೆ ಮಾರ್ಚ ತಿಂಗಳಲ್ಲಿ ವ್ಯವಸ್ಥೆ ಮಾಡುತ್ತೇನೆ ಆದರೆ ಅದರಲ್ಲಿ ತಾವುಗಳು ಪಾಲ್ಗೊಳ್ಳಿ ಎಂದರು.
ಗೋಕಾಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಮುಖ್ಯಸ್ಥರಾದ ಪ್ರೋ. ವ್ಹಿ ಆಯ ತಿಳಗಂಜಿ ಮಾತನಾಡಿ ಪಾಲಕರ ಒತ್ತಾಯಕ್ಕಾಗಿ ಶಿಕ್ಷಣ ಕಲಿಯದೇ ತಮ್ಮ ಭವಿಷ್ಯ ಸುಧಾರಣೆಗೆ ಕಷ್ಟಪಟ್ಟು ಓದಿದರೆ ಅದರ ಫಲ ಖಂಡಿತವಾಗಿ ತಮಗೆ ಒಳ್ಳೆಯದಾಗುತ್ತೆ, ಪಾಲಕರಿಗೆ ತಮ್ಮ ಊರಿಗೆ ಹೆಸರು ತರುವ ಕಾರ್ಯ ಮಾಡಿ ಎಂದರು.
ಪ್ರಾಂಶುಪಾಲರಾದ ಡಾ. ಫಕ್ಕಿರಗೌಡ ದುಂ. ಗದ್ದಿಗೌಡರ ಮಾತನಾಡಿ ಭವಿಷ್ಯದ ಉನ್ನತಿಗೆ ಇದೆ ಸಮಯದಲ್ಲಿ ತಾವುಗಳು ವಿದ್ಯೆ ಕಲಿಯಲು ಹೆಚ್ಚಿನ ಆಸಕ್ತಿ ವಹಿಸಬೇಕು ಈ ಸಮಯ ಮುಂದೆ ನಿಮಗೆ ಸಿಗುವದಿಲ್ಲ ಪಾಠದ ಜೊತೆಗೆ ಆಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಂ ಪಂ. ಅಧ್ಯಕ್ಷ ವೀರಭದ್ರ ಚೋಭಾರಿ, ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ನಿಂಗಪ್ಪ ತಳವಾರ, ಸುನಿಲ ಪಿಸೆ, ನಜೀರ್ ಅಹಮದ ತಹಶೀಲ್ದಾರ, ಯಮನಪ್ಪ ಪೂಜೇರಿ, ಶ್ರೀಮತಿ ಉಷಾ ನವಲಗಟ್ಟಿ,ಪಿಯುಸಿ ಕಾಲೇಜಿನ ಸುಧಾರಣಾ ಸಮಿಟಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡರ,ಪ್ರೋ. ಮಂಜುನಾಥ ಕಂಬಳಿ, ಡಾ. ಮೀನಾಕ್ಷಿ ಮಡಿವಾಳರ, ಪ್ರೋ. ಎಸ್ ಬಿ. ಚವತ್ರಿಮಠ, ಪ್ರೋ ವಿನಾಯಕ ಹೊನ್ನಪ್ಪಣ್ಣವರ, ಪ್ರೋ. ಹರೀಶ ಎಚ್ ಆರ್. ಪ್ರೋ. ಸುಜಾತಾ ಮೇಟಿ, ಪ್ರೋ. ಶೋಭಾ ಸಿದ್ನಾಳ, ಮಲ್ಲಿಕಾರ್ಜುನ ಕುಂಬಾರ,ವಿದ್ಯಾರ್ಥಿ ಪ್ರತಿನಿಧಿಗಳು, ಭೋಧಕ ಭೋದಕೇತ್ತರ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!